ಸಣ್ಣ ಪುಟ್ಟ ಭರವಸೆಗಳನ್ನಾದರೂ ಈಡೇರಿಸುತ್ತಾ ಕೈ-ಜೆಡಿಎಸ್ ಮೈತ್ರಿ ಸರಕಾರ?

First Published May 24, 2018, 2:30 PM IST
Highlights

ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದು, ಸಾಕಷ್ಟು ಹಗ್ಗ ಜಗ್ಗಾಟದ ನಂತರ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿದೆ. ಚುನಾವಣೆಗೂ ಮುನ್ನ ತಮ್ಮ ಪ್ರಣಾಳಿಕೆಯಲ್ಲಿ ಹಲವು ಆಕರ್ಷಕ ಯೋಜನೆಗಳ ಮೂಲಕ ಜನರ ಮನ ಗೆಲ್ಲಲು ಯತ್ನಿಸಿದ್ದ ಕುಮಾರಸ್ವಾಮಿ ಇದೀಗ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಈ ಮೈತ್ರಿ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಈಡೇರಿಸ್ತಾರಾ ನೋಡಬೇಕು.

ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದು, ಸಾಕಷ್ಟು ಹಗ್ಗ ಜಗ್ಗಾಟದ ನಂತರ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿದೆ. ಚುನಾವಣೆಗೂ ಮುನ್ನ ತಮ್ಮ ಪ್ರಣಾಳಿಕೆಯಲ್ಲಿ ಹಲವು ಆಕರ್ಷಕ ಯೋಜನೆಗಳ ಮೂಲಕ ಜನರ ಮನ ಗೆಲ್ಲಲು ಯತ್ನಿಸಿದ್ದ ಕುಮಾರಸ್ವಾಮಿ ಇದೀಗ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಈ ಮೈತ್ರಿ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಈಡೇರಿಸ್ತಾರಾ ನೋಡಬೇಕು. 

ಸದ್ಯ ನೂತನ ಸಮ್ಮಿಶ್ರ ಸರ್ಕಾರದ ಮುಂದೆ ಇವೆಲ್ಲಕ್ಕಿಂತ ಮುಖ್ಯವಾಗಿ ಪ್ರಮುಖ ಸವಾಲು ಎದುರಾಗಿರುವುದು 5 ವರ್ಷಗಳ ಕಾಲ ಸುಭದ್ರ ಆಡಳಿತ ನೀಡುವುದು. ಕೈ-ದಳ ದೋಸ್ತಿ ನಿರಂತರ 5 ವರ್ಷಗಳ ಕಾಲ ಅಖಂಡವಾಗಿ ಇರುವಂತೆ ನೋಡಿಕೊಳ್ಳುವುದು ಸಿಎಂ ಕುಮಾರಸ್ವಾಮಿ ಅವರ ಜವಾಬ್ದಾರಿ. ಜತೆ ಜತೆಗೇ ಎರಡೂ ಪಕ್ಷಗಳ ಪ್ರಣಾಳಿಕೆಯಲ್ಲಿ ಈಡೇರಿಸಬಹುದಾದ ಭರವಸೆಗಳನ್ನು ಪಟ್ಟಿ ಮಾಡಿ ಅವುಗಳ ಜಾರಿಗೆ ಒತ್ತು ನೀಡಬೇಕು.

ಸಂಪೂರ್ಣ 5 ವರ್ಷಗಳ ಕಾಲವೂ ಕುಮಾರಸ್ವಾಮಿಯೇ ಸಿಎಂ ಆಗಿರುವುದರಿಂದ ಪ್ರಣಾಳಿಕೆ ಎಂಬ ಕಾಗದದ ಮೇಲಿರುವ ಭರವಸೆಗಳನ್ನು ರಾಜ್ಯದ ಜನರ ಹಿತದೃಷ್ಟಿಯಿಂದ ಕಾರ್ಯರೂಪಕ್ಕೆ ಇಳಿಸುತ್ತಾರಾ ಕಾದು ನೋಡ ಬೇಕಿದೆ. ಪ್ರಣಾಳಿಕೆ ಅಂಶವನ್ನು ಒಪ್ಪಿಕೊಳ್ಳುವ ಪಕ್ಷದೊಂದಿಗೆ ಕೈ ಜೋಡಿಸುವುದಾಗಿ, ಕುಮಾರಸ್ವಾಮಿ ಚುನಾವಣೆಗೂ ಮುನ್ನವೇ ಮುನ್ಸೂಚನೆ ನೀಡಿದ್ದರು. ಕೇವಲ 38 ಸ್ಥಾನಗಳನ್ನು ಗೆದ್ದ ಜೆಡಿಎಸ್, ಇದೀಗ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿ ಸರಕಾರ ರಚಿಸಿದೆ. ಉಭಯ ಪಕ್ಷಗಳೂ ರೈತರ ಸಾಲಮನ್ನಾ ಮಾಡುವ ಭರವಸೆ ನೀಡಿದ್ದು, ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ.

ಆದರೆ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಾಲ ಮನ್ನಾ ಆಗುವ ನಿರೀಕ್ಷೆಯಲ್ಲಿ ಇರುವುದಂತೂ ಹೌದು. ಅದು ಈಡೇರಿಸದೇ ಹೋದಲ್ಲಿ, ಉಭಯ ಪಕ್ಷಗಳು ಜನರ ವಿಶ್ವಾಸ ಕಳೆದುಕೊಳ್ಳುವುದರಲ್ಲಿ ಯಾವುದೇ ಸಂದೇಹವೂ ಇಲ್ಲ. ಇದೀಗ, ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ ನೀಡಿರುವ ಭರವಸೆಯನ್ನು ಈಡೇರಿಸುವುದು ಕಷ್ಟವೆಂದು ಅಳಲು ತೋಡಿಕೊಳ್ಳುತ್ತಿರುವ ಕುಮಾರಸ್ವಾಮಿ, ಈಗಾಗಲೇ ರೈತರ ಸಾಲ ಮನ್ನಾ ಮಾಡುವುದು ಸುಲಭದ ವಿಷಯವಲ್ಲ ಎನ್ನುವುದನ್ನೂ ಸ್ಪಷ್ಟಪಡಿಸಿದ್ದಾರೆ.

ಹೋಗಲಿ, ಇದಲ್ಲದೇ, ನಗರ ಹಾಗೂ ಗ್ರಾಮೀಣಾಭೀವೃದ್ಧಿ, ಉದ್ಯೋಗ ಸೃಷ್ಟಿ...ಹೀಗೆ ಅನೇಕ ಸಮಸ್ಯೆಗಳ ನಿವಾರಣೆ ಬಗ್ಗೆ ಅಧಿಕಾರಕ್ಕೆ ಬಂದ ಕೂಡಲೇ ಗಮನ ಹರಿಸುವುದಾಗಿ ಭರವಸೆ ನೀಡಿದ ಪಕ್ಷಗಳು, ಜನರ ಆಶಯಗಳನ್ನು ಪೂರೈಸುತ್ತವೆಯೇ? ಅಷ್ಟಕ್ಕೂ  ಜನರ ಆಶಯಗಳೇನು?

- ರೈತರ ಸಾಲ ಮಾಡಿದರೆ ಸರಕಾರದ ಖಜನೆಗೆ ಆಗುವ ಹೊರೆ,  ಸ್ತ್ರೀಶಕ್ತಿ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡಿದರೆ ಆಗುವುದಿಲ್ಲ. ಅದನ್ನಾದರೂ  ಮಾಡಲಿ.

- ಗರ್ಭಿಣಿ, ಬಾಣಂತಿಯರಿಗೆ 6 ತಿಂಗಳು 6 ಸಾವಿರ ರೂ. ಆರೋಗ್ಯ ಭತ್ಯೆ ನೀಡುವ ಭರವಸೆ ನೀಡಲಾಗಿತ್ತು. ಹೆಣ್ಣು ಮಕ್ಕಳ ಆರೋಗ್ಯ ದೃಷ್ಟಿಯಿಂದ, ಮಹಿಳಾ 

ಗೌರವ ಕಾಪಾಡಲು ಇಂಥದ್ದೊಂದು ಯೋಜನೆ ಅಗತ್ಯವಿದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಶಕ್ತಿ ಕಳೆದುಕೊಳ್ಳುವ ಹೆಣ್ಣಿಗೆ ಇಂಥದ್ದೊಂದು ಯೋಜನೆಯಿಂದ ಆತ್ಮವಿಶ್ವಾಸ ಹೆಚ್ಚುವುದು ಗ್ಯಾರಂಟಿ.

- ಮಹಿಳಾ ಸಬಲೀಕರಣವನ್ನು ದೃಷ್ಟಿಯಲ್ಲಿಟ್ಟುಕೊಂಡು, ಸಾಲ ಪಡೆಯುವ ಮಹಿಳಾ ಉದ್ಯಮಿಗಳಿಗೆ ಬಡ್ಡಿ ಮೇಲೆ ಶೇ.5 ಸಬ್ಸಿಡಿ ನೀಡಿದರೆ ನೆರವಾಗುತ್ತದೆ.

- ಬಿಸಿಯೂಟ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಿಸಿ ಎಂದು ಸದಾ ಪ್ರತಿಭಟನೆ ನಡೆಸಲಾಗುತ್ತದೆ. ಇವರಿಗೆ ವೇತನ ಹೆಚ್ಚಿಸುವ ಭರವಸೆ ನೀಡಲಾಗುತ್ತದೆಯೇ ಹೊರತು, ಯಾವ ಸರಕಾರವೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಕುಮಾರಸ್ವಾಮಿ ಸರಕಾರವಾದರೂ ಇಂಥದ್ದೊಂದು ದಿಟ್ಟ ನಿರ್ಧಾರೆ ತೆಗೆದುಕೊಂಡಲ್ಲಿ, ಕಷ್ಟಪಟ್ಟು ದುಡಿಯುವ ಮಹಿಳಾ ಸಮುದಾಯಕ್ಕೆ ಅನುಕೂಲವಾಗಲಿದೆ.

- ಕಾಂಗ್ರೆಸ್ ಕೂಡ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಮೂರು ಗ್ರಾಂ ಚಿನ್ನದ ತಾಳಿ ನೀಡುವ ಮಾಂಗಲ್ಯ ಭಾಗ್ಯ, ಮೊದಲ ಬಾರಿಗೆ ಮತ ಹಾಕುವ ಯುವ 

ವಿದ್ಯಾರ್ಥಿಗಳಿಗೆ ಮೊಬೈಲ್‌ ಭಾಗ್ಯ, ಎರಡು ಸಾವಿರ ಮನೆಯಿರುವ ಗ್ರಾಮಗಳಿಗೆ ನಲ್ಲಿ ನೀರು ಭಾಗ್ಯ, ರಾಜ್ಯಕ್ಕೆ 24/7 ವಿದ್ಯುತ್‌ ಭಾಗ್ಯ, ನೀರಾವರಿಗೆ 1.25 ಲಕ್ಷ 

ಕೋಟಿ ರೂ. ಮೀಸಲು ವಾಗ್ದಾನ, ಕೃಷಿ ಉತ್ತೇಜನಕ್ಕಾಗಿ ಕೃಷಿ ಕಾರಿಡಾರ್‌ ಮತ್ತು ಇವೆಲ್ಲಕ್ಕಿಂತ ಮುಖ್ಯವಾಗಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುವುದಾಗಿ ಭರವಸೆ ನೀಡಿದೆ.

ಇವುಗಳಾದರೂ ಈಡೇರಲಿ ಎಂಬುವುದು ರಾಜ್ಯ ಜನತೆಯ ಆಶಯ.

click me!