ಬಾದಾಮಿಯಲ್ಲಿ ಸಿಎಂಗೆ ಸಡ್ಡು ಹೊಡೆಯುವ ಬಿಜೆಪಿ ಅಭ್ಯರ್ಥಿ ಯಾರು?

By Suvarna Web DeskFirst Published Apr 13, 2018, 5:14 PM IST
Highlights

ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಕುತೂಹಲದ ಪ್ರಶ್ನೆಯಾಗಿದೆ. 

ಬೆಂಗಳೂರು (ಏ. 13):  ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಕುತೂಹಲದ ಪ್ರಶ್ನೆಯಾಗಿದೆ. 

ಸಿಎಂಗೆ ‘ಬಾದಾಮಿ’ ಸಿಗಬಾರದು.  ಬಿಜೆಪಿಗೆ ಸಿಗಬೇಕು.  ಈ ಬಾರಿ ಶತಾಯುಗತಾಯ ಬಿಜೆಪಿ ಗೆಲ್ಲಲೇಬೇಕು.  ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿ, ಬಂಡಾಯ ಇರಬಾರದು ಎಂದು  ಹುಬ್ಬಳ್ಳಿಯಲ್ಲಿ ಅಮಿತ್ ಷಾ ನೇತೃತ್ವದ ಸಭೆಯಲ್ಲಿ   ಗಂಭೀರ ಚರ್ಚೆ ನಡೆದಿದೆ. 

ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದವರು ಈ ಬಾರಿ ಬಿಜೆಪಿ ಅಭ್ಯರ್ಥಿ ಎನ್ನಲಾಗುತ್ತಿದೆ.  ಮಹಾಂತೇಶ್ ಗುರುಪಾದಪ್ಪ ಮಮಾದಪುರಗೆ ಬಾದಾಮಿ ಬಿಜೆಪಿ ಟಿಕೆಟ್ ? ಎನ್ನಲಾಗುತ್ತಿದೆ.  ದೆಹಲಿಯಲ್ಲಿ 15ರಂದು ನಡೆಯುವ ಸಿಐಸಿ ಸಭೆಯಲ್ಲಿ ಅಂತಿಮವಾಗಲಿದೆ. 

ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂ.ಕೆ.ಪಟ್ಟಣಶೆಟ್ಟಿಗೆ ಈ ಬಾರಿ ಟಿಕೆಟ್ ಇಲ್ಲ.  ಮಮಾದಪುರ, ಎಂ.ಕೆ.ಪಟ್ಟಣಶೆಟ್ಟಿ ಇಬ್ಬರು ಸಂಬಂಧಿಗಳು.   ಅಂತಿಮವಾಗಿ ಮಾವನನ್ನ ಮನವೊಲಿಸುವ ಕಾರ್ಯ ಅಳಿಯನಿಗೆ ವಹಿಸಿದೆ ಬಿಜೆಪಿ. 

ಬಾದಾಮಿ ಮತ ಸಮೀಕರಣ :-

ಒಟ್ಟು ಮತದಾರರು 2.14 ಲಕ್ಷ

ಲಿಂಗಾಯತ (ಪಂಚಮಸಾಲಿ)-  32 ಸಾವಿರ
ಗಾಣಿಗ - 26 ಸಾವಿರ
ನೇಕಾರ - 16 ಸಾವಿರ 
ರೆಡ್ಡಿ - 10 ಸಾವಿರ
ಕುರುಬ - 47 ಸಾವಿರ 
ಎಸ್ ಸಿ - 25 ಸಾವಿರ
ಮುಸ್ಲಿಂ - 10 ಸಾವಿರ
ವಾಲ್ಮೀಕಿ - 13 ಸಾವಿರ
ಲಂಬಾಣಿ - 7 ಸಾವಿರ
ಇತರೆ - 15 ಸಾವಿರ 
 

click me!