ಆರ್ಥಿಕ ಸಮೀಕ್ಷೆ ಎಂದರೇನು?

By Suvarna Web DeskFirst Published Jan 31, 2017, 9:21 AM IST
Highlights

ಆರ್ಥಿಕ ಸಮೀಕ್ಷೆಯಲ್ಲಿ ಏನಿರುತ್ತದೆ?

ದೇಶದ ಪ್ರಸಕ್ತ ವರ್ಷದ ಆರ್ಥಿಕತೆಯ ಸಂಪೂರ್ಣ ವಿವರಗಳ ಜತೆ ಜತೆಗೆ ಆರ್ಥಿಕತೆ ಅಭಿವೃದ್ಧಿ ಹೊಂದಬಹುದಾದ ಅವಕಾಶಗಳು ಮತ್ತು ಈ ಅಭಿವೃದ್ಧಿ ಹೊಂದುವ ಹಾದಿಯಲ್ಲಿ ಎದುರಿಸಬೇಕಾ​ಗುವ ಸವಾಲುಗಳನ್ನೊಳ​ಗೊಂಡ ಸಮಗ್ರ ಮಾಹಿತಿ ಮತ್ತು ವಿಶ್ಲೇಷಣೆ ಆರ್ಥಿಕ ಸಮೀಕ್ಷೆಯಲ್ಲಿರುತ್ತದೆ. ದೇಶದ ವಿವಿಧ ಆರ್ಥಿಕ ವಲಯವಾರು ಏರಿಳಿತಗಳ ಪರಾಮರ್ಶೆ ಏರಿಳಿತಕ್ಕೆ ಕಾರಣಗಳು ಮತ್ತು ಸುಧಾರ​ಣೆಗೆ ಅಗತ್ಯ ಪರಿಹಾರೋ​ಪಾಯಗಳನ್ನು ಸೂಚಿಸ​ಲಾಗಿರುತ್ತದೆ. ಈ ಮಾಹಿ​ತಿ​ಯು ಭವಿಷ್ಯದಲ್ಲಿ ಆಯಾ ವಲಯಗಳ ನೀತಿಗಳನ್ನು ರೂಪಿಸಲು ಅಗತ್ಯ ಮಾರ್ಗದರ್ಶಿಯಾಗಿರುತ್ತದೆ.

ಆರ್ಥಿಕ ಸಮೀಕ್ಷೆ ಎಂದರೇನು?

ವಿತ್ತ ಸಚಿವ ಅರುಣ್‌ ಜೇಟ್ಲಿ ಮಂಗಳವಾರ ಆರ್ಥಿಕ ಸಮೀಕ್ಷೆ 2017 ಮಂಡಿಸಲಿದ್ದಾರೆ. ಪ್ರತಿವರ್ಷ ಬಜೆಟ್‌ ಮಂಡಿಸುವ ಮುನ್ನಾ ದಿನ ಆರ್ಥಿಕ ಸಮೀಕ್ಷೆ ಮಂಡಿಸುವುದು ವಿತ್ತೀಯ ಸಂಪ್ರದಾಯ. ಪ್ರಸಕ್ತ ಆರ್ಥಿಕ ವರ್ಷದ ಆಗುಹೋಗುಗಳು ಮತ್ತು ಮುಂ​ದಿನ ವರ್ಷದ ಆರ್ಥಿಕತೆ ಸಾಗುವ ದಿಕ್ಸೂಚಿಯಾಗುವ ಆರ್ಥಿಕ ಸಮೀಕ್ಷೆ ಕುರಿತ ಕಿರು ಮಾಹಿತಿ ಇದು.
ಏನಿದು ಆರ್ಥಿಕ ಸಮೀಕ್ಷೆ ?

ಹೆಸರೇ ಸೂಚಿಸುವಂತೆ ದೇಶದ ಆರ್ಥಿಕತೆಯ ಸಮೀಕ್ಷೆ ಇದು. ಸಾಮಾನ್ಯವಾಗಿ ಆರ್ಥಿಕ ಸಮೀಕ್ಷೆ​ಯನ್ನು ಬಜೆಟ್‌ ಹಿಂದಿನ ದಿನ ಮಂಡಿ­ಸ­ಲಾಗುತ್ತದೆ. ಈ ಸಮೀಕ್ಷೆಯು ದೇಶದ ಆರ್ಥಿಕತೆಯ ಅಧಿಕೃತ ವರದಿ. ಪ್ರಸಕ್ತ ವರ್ಷ ವಿತ್ತ ಸಚಿವ ಅರುಣ್‌ ಜೇಟ್ಲಿ ಜನವರಿ 31ರಂದು ಮಂಡಿಸಲಿದ್ದಾರೆ.
ಆರ್ಥಿಕ ಸಮೀಕ್ಷೆಯಲ್ಲಿ ಏನಿರುತ್ತದೆ?

ದೇಶದ ಪ್ರಸಕ್ತ ವರ್ಷದ ಆರ್ಥಿಕತೆಯ ಸಂಪೂರ್ಣ ವಿವರಗಳ ಜತೆ ಜತೆಗೆ ಆರ್ಥಿಕತೆ ಅಭಿವೃದ್ಧಿ ಹೊಂದಬಹುದಾದ ಅವಕಾಶಗಳು ಮತ್ತು ಈ ಅಭಿವೃದ್ಧಿ ಹೊಂದುವ ಹಾದಿಯಲ್ಲಿ ಎದುರಿಸಬೇಕಾ​ಗುವ ಸವಾಲುಗಳನ್ನೊಳ​ಗೊಂಡ ಸಮಗ್ರ ಮಾಹಿತಿ ಮತ್ತು ವಿಶ್ಲೇಷಣೆ ಆರ್ಥಿಕ ಸಮೀಕ್ಷೆಯಲ್ಲಿರುತ್ತದೆ. ದೇಶದ ವಿವಿಧ ಆರ್ಥಿಕ ವಲಯವಾರು ಏರಿಳಿತಗಳ ಪರಾಮರ್ಶೆ ಏರಿಳಿತಕ್ಕೆ ಕಾರಣಗಳು ಮತ್ತು ಸುಧಾರ​ಣೆಗೆ ಅಗತ್ಯ ಪರಿಹಾರೋ​ಪಾಯಗಳನ್ನು ಸೂಚಿಸ​ಲಾಗಿರುತ್ತದೆ. ಈ ಮಾಹಿ​ತಿ​ಯು ಭವಿಷ್ಯದಲ್ಲಿ ಆಯಾ ವಲಯಗಳ ನೀತಿಗಳನ್ನು ರೂಪಿಸಲು ಅಗತ್ಯ ಮಾರ್ಗದರ್ಶಿಯಾಗಿರುತ್ತದೆ.
ಸಮೀಕ್ಷೆ ಸಿದ್ಧಪಡಿಸುವವರು ಯಾರು?

ಸಮೀಕ್ಷೆ­ಯನ್ನು ಮುಖ್ಯ ಆರ್ಥಿಕ ಸಲಹೆಗಾರ ಸಿದ್ಧಪಡಿಸುತ್ತಾರೆ. ಈಗ ಅರವಿಂದ್‌ ಸುಬ್ರಮಣಿಯನ್‌ ಆರ್ಥಿಕ ಸಲಹೆಗಾರರಾಗಿದ್ದು ಅವರ ತಂಡವು ಸಿದ್ಧಪಡಿಸಿದೆ.
ಆರ್ಥಿಕ ಸಮೀಕ್ಷೆಯಲ್ಲಿನ ಮುಖ್ಯಾಂಶವೇನು?

 ಆರ್ಥಿಕ ಸಮೀಕ್ಷೆಯು ಭವಿಷ್ಯದ ಆರ್ಥಿಕ ಅಭಿವೃದ್ಧಿ­ಯನ್ನು ಅಂದಾಜಿಸುತ್ತದೆ. ಅಂದರೆ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳುವ ವಿತ್ತೀಯ ವರ್ಷದಲ್ಲಿನ ಅಂದಾಜು ಮತ್ತು ಮುಂದಿನ ವಿತ್ತೀಯ ವರ್ಷದ ಅಂದಾಜು ಇರುತ್ತದೆ. ಆರ್ಥಿಕ­ತೆಯು ಅಭಿವೃದ್ಧಿ ಹೊಂದುತ್ತಿರು​ವುದಕ್ಕೆ ಅಥವಾ ಹಿಂಜ­ರಿತ ಎದುರಿಸುವುದಕ್ಕೆ ಇರುವ ಕಾರಣಗಳನ್ನು ವಿಸ್ತೃತ­ವಾಗಿ ವಿವರಿಸುತ್ತದೆ. ಹಿಂಜರಿತದಿಂದ ಪಾರಾಗ­­ಬಹು­ ದಾದ ಮಾರ್ಗೋಪಾ​ಯಗಳನ್ನು ಸೂಚಿಸಲಾಗುತ್ತದೆ.
ಸಮೀಕ್ಷೆಯಲ್ಲಿ ಹೊಸ ನೀತಿಗಳ ಜಾರಿಗೆ ಸಲಹೆ ನೀಡಬಹುದೇ?

ಹಿಂದಿನಿಂದಲೂ ಆರ್ಥಿಕ ಸಲಹೆಗಾ­ರರು ಆಗಿಂದಾಗ್ಗೆ ಆರ್ಥಿಕ ನೀತಿ ಸುಧಾರಣೆಗಳ ಕುರಿತಂತೆ ಸಲಹೆಗಳನ್ನು ನೀಡುತ್ತಾ ಬಂದಿದ್ದಾರೆ. ಕೆಲವು ಬಾರಿ ಕ್ರಮಗಳನ್ನು ಸೂಚಿಸುತ್ತಾರೆ. ಉದಾಹರಣೆಗೆ ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯಮ್‌ ಅವರು ಬಡತನ ನಿವಾರಿಸುವ ನಿಟ್ಟಿನಲ್ಲಿ ಜನರ ಖಾತೆಗೆ ನೇರವಾಗಿ ಸರ್ಕಾರವೇ ಹಣ ಪಾವತಿಸುವ ಹೊಸ ವ್ಯವಸ್ಥೆಯಾದ ಸಾರ್ವತ್ರಿಕ ಮೂಲ ಆದಾಯದ (ಯುಬಿಐ) ಬಗ್ಗೆ ಸಲಹೆ ನೀಡಲಿದ್ದಾ­ರೆಂದು ನಿರೀಕ್ಷಿಸಲಾಗಿದೆ. ಇದು ಭಾರತದ ಆರ್ಥಿಕ ವ್ಯವಸ್ಥೆಗೆ ಅತ್ಯಂತ ಹೊಸ ಪರಿಕಲ್ಪನೆಯಾಗಿದೆ.
ಸಮೀಕ್ಷೆ ನೀಡುವ ಶಿಫಾರಸುಗಳನ್ನು ಪಾಲಿಸ​ಬೇಕೆ?

 ಸರ್ಕಾರ ಆರ್ಥಿಕ ಸಲಹೆಗಾರರು ಸಮೀಕ್ಷೆ​ಯಲ್ಲಿ ನೀಡುವ ಸಲಹೆ, ಮಾರ್ಗದರ್ಶನ, ಶಿಫಾರಸು​ಗಳನ್ನು ಪಾಲಿಸಲೇಬೇಕೆಂಬ ಕಡ್ಡಾಯವೇನಿಲ್ಲ. ಆದರೆ, ಸಮೀಕ್ಷೆಯನ್ನು ನೀತಿ ನಿರೂಪಣೆ ಮಾಡುವಲ್ಲಿ ಮಾರ್ಗ­ಸೂಚಿಯಾಗಿ ಬಳಸಿಕೊಳ್ಳಲಾಗುತ್ತದೆ. ಆರ್ಥಿಕ ಸಮೀಕ್ಷೆ­ಯಲ್ಲಿ ಬಿಂಬಿತವಾದ ಅಂಶಗಳನ್ನಾಧರಿಸಿಯೇ ಬಜೆಟ್‌ ನಿರ್ಧಾರವಾಗುತ್ತದೆಂದು ಭಾವಿಸಬೇಕಿಲ್ಲ. ಬಹುತೇಕ ಸಮಯಗಳಲ್ಲಿ ಆರ್ಥಿಕ ಸಮೀಕ್ಷೆಯಲ್ಲಿ ಮಾಡಿದ ಶಿಫಾರಸುಗಳು ಬಜೆಟ್‌ ಪ್ರಸ್ತಾಪದಲ್ಲಿ ಪ್ರತಿಬಿಂಬಿತ­ವಾಗುವುದೇ ಇಲ್ಲ. ಆದರೆ, ಆರ್ಥಿಕ ಸಮೀಕ್ಷೆಯು ಬಜೆಟ್‌ ಸಿದ್ಧಪಡಿಸಲು ಮತ್ತು ಆರ್ಥಿಕ ನೀತಿಗಳನ್ನು ರೂಪಿಸಲು ಅಗತ್ಯವಾದ ಮಾಹಿತಿ ಒದಗಿಸುವುದಲ್ಲದೇ ಭವಿಷ್ಯಕ್ಕೆ ದಿಕ್ಸೂಚಿಯಾಗಿರುತ್ತದೆ. ಈ ಕಾರಣಕ್ಕಾಗಿಯೇ ಆರ್ಥಿಕ ಸಮೀಕ್ಷೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸುತ್ತಾರೆ. ಜಾಗತಿಕ ಸಂಸ್ಥೆಗಳು ದೇಶದ ಆರ್ಥಿಕತೆಯನ್ನು ಅಂದಾಜಿಸು​ವಾಗಲೂ ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖವಾದ ಅಂಕಿ ಅಂಶಗಳನ್ನೇ ಬಳಸಿಕೊಳ್ಳುತ್ತವೆ.

(ಕನ್ನಡ ಪ್ರಭ ವಾರ್ತೆ)

click me!