ಸನ್ಯಾಸಿನಿ ಮೇಲೆ ನಡೆದಿದ್ದು ರೇಪ್‌ ಅಲ್ಲ, ಜ್ಞಾನೋದಯದ ಕ್ರಿಯೆ! ಎಂಥಾ ಮಾತು

By Web DeskFirst Published Sep 15, 2018, 8:23 PM IST
Highlights

ಕೇರಳ ಕ್ರೈಸ್ತ ಸಂನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೋ ತಮ್ಮ ಆಡಳಿತಾತ್ಮಕ ಜವಾಬ್ದಾರಿಗಳನ್ನು ಬೇರೊಬ್ಬರಿಗೆ ವಹಿಸಿ, ಹುದ್ದೆಯಿಂದ ಕೆಳಗಿಳಿದಿದ್ದಾರೆ. ಆದರೆ ಪಾದ್ರಿಯನ್ನು ತರಾಟೆಗೆ ತೆಗೆದುಕೊಂಡಿರುವ ಸೋಶಿಯಲ್ ಮೀಡಿಯಾ ಒಂದು ಹೆಜ್ಜೆ ಮುಂದೆ ಹೋಗಿದೆ. 

ಬೆಂಗಳೂರು[ಸೆ.15] ಈ ಫೋಟೋ ಶಾಪ್ ಜಮಾನಾದಲ್ಲಿ ಯಾರನ್ನು ಎಲ್ಲಿ ಬೇಕಾದರೂ ಚಿತ್ರಿಸಬಹುದು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಕೇರಳದ ಅತ್ಯಾಚಾರ ಪ್ರಕರಣಕ್ಕೂ ಫೋಟೋ ಶಾಪ್ ಕೆಸರು ಮೆತ್ತಿಕೊಂಡಿದೆ.

ಒಂದೆಡೆ ಆರೋಪ ಎದುರಿಸುತ್ತಿರುವ ಬಿಷಪ್ ಮೇಲೆ ವಿಚಾರಣೆ ಗೆ ಸೂಚನೆ ನೀಡಲಾಗಿದ್ದರೆ ಸೋಶಿಯಲ್ ಮೀಡಿಯಾ ಮಾತ್ರ ತನ್ನದೇ ಆದ ಪ್ರತಿಕ್ರಿಯೆ ನೀಡಿದೆ. ಬಿಷಪ್ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುವ ರೀತಿಯ ಚಿತ್ರ ಬಳಸಿಕೊಂಡು ಅದಕ್ಕೆ ಪಕ್ಕಾ ಸುದ್ದಿ ವಾಹಿನಿಯ ನ್ಯೂಸ್ ತರಹದ್ದೇ ಟಚ್ ನೀಡಲಾಗಿದೆ.

ಅಲ್ಲಿ ನೀಡಿರುವ ಹೇಳಿಕೆ ಸಹ ನಿಜಕ್ಕೂ ವಿವಾದವನ್ನು ಹುಟ್ಟುಹಾಕುವಂತೆಯೇ ಇದೆ. ‘ನಡೆದಿರುವುದು ಅತ್ಯಾಚಾರ ಅಲ್ಲ, ಅದೊಂದು ಜ್ಞಾನೋದಯದ ಪ್ರಕ್ರಿಯೆ, ಲೈಂಗಿಕ ಕ್ರಿಯೆಯ ಅಂತ್ಯದಲ್ಲಿ ದೇವರ ಸ್ವರೂಪ ಕಾಣಬಹುದಾಗಿದೆ’  ಇಂಥದ್ದೊಂದು ಆಂಗ್ಲ ಬರಹವನ್ನು ಫೋಟೋ ಶಾಪ್ ಮಾಡಲಾಗಿದೆ. ಬಿಷಪ್ ಹೀಗೆ ಹೇಳಿದ್ದಾರೆ ಎಂಬುದನ್ನು ಉಲ್ಲೇಖ ಮಾಡಲಾಗಿದೆ. 

ವಿವಾದ ಹೊತ್ತಿಸುವ ರೀತಿಯಲ್ಲಿನ ಬರಹದಲ್ಲಿ ಒಂದೆರಡು ವ್ಯಾಕರಣ ದೋಷವಿದೆ. ಮೇಲ್ನೋಟಕ್ಕೆ ಸತ್ಯವೆಂದೆ ಪರಿಭಾವಿಸಿದ ಅನೇಕರು ಇದನ್ನು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಶೇರ್ ಸಹ ಮಾಡಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ  ಹರಿದಾಡುತ್ತಿರುವ ಇಮೇಜ್

 

click me!