ಆಪರೇಷನ್​​ ಅಲಿಖಾನ್​​: ಮನೆಯಲ್ಲಿ ಸಿಕ್ಕಿದ್ದೇನು?

Nov 8, 2018, 1:34 PM IST

ಬೆಂಗಳೂರು(ನ.8): ಅಂಬಿಡೆಂಟ್​​ ಕಂಪನಿಯಲ್ಲಿ ಜನಾರ್ದನ ರೆಡ್ಡಿ ಪಿಎ ಅಲಿಖಾನ್​​ ಕೈವಾಡದ ಶಂಕೆ ಇರುವ ಹಿನ್ನೆಲೆಯಲ್ಲಿ, ರೆಡ್ಡಿ ಪಿಎ ಅಲಿಖಾನ್ ಮನೆ ಪರಿಶೀಲನೆಗೆ ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಸತತ 5 ಗಂಟೆಗಳ ಕಾಲ ಮನೆ ಪರಿಶೀಲನೆ ನಡೆಸಿದ್ದ ಸಿಸಿಬಿ ಅಧಿಕಾರಿಗಳಿಗೆ ಆಲಿಖಾನ್ ಮನೆಯಲ್ಲಿ  5 ಜೀವಂತ ಗುಂಡುಗಳು ಪತ್ತೆಯಾಗಿವೆ. 2.56 MM ನ 5 ಜೀವಂತ ಗುಂಡುಗಳನ್ನ ಪತ್ತೆ ಮಾಡಿದ ಸಿಸಿಬಿ ಅಧಿಕಾರಿಗಳು, ಜೀವಂತ ಗುಂಡುಗಳಿಗೆ ಲೈಸೆನ್ಸ್ ಇದೆಯಾ ಅನ್ನೋ ಬಗ್ಗೆ ಸಿಸಿಬಿಯಿಂದ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..