ಡೋನಾಲ್ಡ್ ಟ್ರಂಪ್ ಎದುರು ಟಾಪ್‌ಲೆಸ್ ಆಗಿ ಓಡಿಬಂದ ಮಹಿಳೆ

By Web DeskFirst Published Nov 11, 2018, 5:54 PM IST
Highlights

ಅರೆಬೆತ್ತಲೆ ಪ್ರತಿಭಟನೆ ವಿದೇಶದಲ್ಲಿ ಹೊಸದೇನಲ್ಲ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎದುರು ಮಹಿಳೆಯೊಬ್ಬರು ಟಾಪ್ ಲೆಸ್ ಆಗಿ ಓಡಿ ಬಂದಿದ್ದಲದೇ ಘೋಷಣೆ ಕೂಗಿದ್ದಾರೆ.

ಪ್ಯಾರೀಸ್[ನ.11] ಮೊದಲ ವಿಶ್ವಯುದ್ಧ ಕೊನೆಗೊಂಡು 100 ವರ್ಷವಾದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕಾರಿನೆದುರು ಮಹಿಳೆಯೊಬ್ಬರು ಟಾಫ್ ಲೆಸ್ ಆಗಿ ಈಡಿ ಬಂದಿದ್ದಾರೆ.

ಟ್ರಂಪ್ ಅವರನ್ನು ನಕಲಿ ಶಾಂತಿಧೂತ ಎಂದು ಆರೋಪಿಸಿ ಘೋಷಣೆ ಕೂಗಿದ್ದಾಳೆ. ತನ್ನ ಎದೆ ಮೆಲೆಯೂ ಘೋಷಣೆ ಬರೆದುಕೊಂಡಿದ್ದಾಳೆ. ಟ್ರಂಪ್ ಆಗಮಿಸುವ ಕೆಲವೇ ನಿಮಿಷದ ಮುನ್ನ ಮಹಿಳೆ ಆಕ್ರೋಶದಿಂದ ಓಡಿಬಂದಿದ್ದಾಳೆ. ಈ ಪ್ರಕರಣ ಭದ್ರತೆಯನ್ನು ಪ್ರಶ್ನೆ ಮಾಡಿದೆ.

ವಿಶ್ವದ 70 ರಾಷ್ಟ್ರಗಳ ಪ್ರಮುಖ ನಾಯಕರು ಕಾರ್ಯಕ್ರಮಕ್ಕೆ ಹಾಜರಿ ನೀಡುವವರಿದ್ದರು. ಪ್ಯಾರೀಸ್ ನ ಫೆಮಿನ್ ಎನ್ನುವ ಮಹಿಳಾ ಸಂಘಟನೆಗೆ ಸೇರಿದ ಕಾರ್ಯಕರ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೈಂಗಿಕ ಶೋಷಣೆ, ವರ್ಣ ತಾರತಮ್ಯ, ಸೇರಿದಂತೆ ಸಾಮಾಜಿಕ ಮತ್ತು ಆರ್ಥಿಕ ಶೋಷಣೆಗಳನ್ನು ವಿರೋಧಿಸಿಕೊಂಡು ಈ ಸಂಘಟನೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

 

Topless protestor breaches security barriers in Paris, runs towards US President Donald Trump's motorcade

Read story | https://t.co/P8ZwXtz0cs pic.twitter.com/mkRVJjecmC

— ANI Digital (@ani_digital)
click me!