ನಕ್ಸಲರಿಂದ ಶಾಸಕನ ಕಾರು ತಡೆದು ಕಗ್ಗೊಲೆ

By Web DeskFirst Published Sep 24, 2018, 8:02 AM IST
Highlights

ಶಂಕಿತ ಸಿಪಿಐ  ಮಾವೋವಾದಿ ಸಂಘಟನೆಯ ಸದಸ್ಯರು ಭಾನುವಾರ ಒಬ್ಬ ಹಾಲಿ ಶಾಸಕ ಸೇರಿದಂತೆ ಇಬ್ಬರು ಆಡಳಿತಾರೂಢ ತೆಲುಗುದೇಶಂ ಮುಖಂಡರನ್ನು ವಿಶಾಖಪಟ್ಟಣಂ ಜಿಲ್ಲೆ ಯಲ್ಲಿ ಹತ್ಯೆ ಮಾಡಿದ್ದಾರೆ.

ಅಮರಾವತಿ: ಹಲವಾರು ವರ್ಷಗಳ ನಂತರ ಆಂಧ್ರಪ್ರದೇಶದಲ್ಲಿ ಮತ್ತೆ ನಕ್ಸಲೀಯರು ಅಬ್ಬರಿಸಿದ್ದಾರೆ. ಶಂಕಿತ ಸಿಪಿಐ  ಮಾವೋವಾದಿ ಸಂಘಟನೆಯ ಸದಸ್ಯರು ಭಾನುವಾರ ಒಬ್ಬ ಹಾಲಿ ಶಾಸಕ ಸೇರಿದಂತೆ ಇಬ್ಬರು ಆಡಳಿತಾರೂಢ ತೆಲುಗುದೇಶಂ ಮುಖಂಡರನ್ನು ವಿಶಾಖಪಟ್ಟಣಂ ಜಿಲ್ಲೆ ಯಲ್ಲಿ ಹತ್ಯೆ ಮಾಡಿದ್ದಾರೆ. ವಿಶಾಖಪಟ್ಟಣ ಜಿಲ್ಲೆಯ ದುಂಬ್ರಿಗುಡಾ ತಾಲೂಕಿನ ಲಿಪ್ಪಿಟಿಪುಟ್ಟ ಗ್ರಾಮದಲ್ಲಿ ಘಟನೆ ನಡೆದಿದ್ದು, ಅರಕು (ಎಸ್‌ಟಿ ಮೀಸಲು) ಕ್ಷೇತ್ರದ ಶಾಸಕ ಸರ್ವೇಶ್ವರ ರಾವ್ ಹಾಗೂ ಮಾಜಿ ಶಾಸಕ ಶಿವೇರಿ ಸೋಮ ಅವರನ್ನು ನಕ್ಸಲೀಯರು ಹತ್ಯೆ ಮಾಡಿದ್ದಾರೆ.

ಇವರಿಬ್ಬರೂ ‘ಗ್ರಾಮ ದರ್ಶಿನಿ’ ಕಾರ್ಯಕ್ರಮದ ಅಂಗವಾಗಿ ಲಿಪ್ಪಿಟಿಪುಟ್ಟ ಗ್ರಾಮಕ್ಕೆ ತೆರಳುತ್ತಿರುವಾಗ ಮಾವೋವಾದಿಗಳು ಗುಂಡಿಕ್ಕಿ ಕೊಂದಿದ್ದಾರೆ. ಸರ್ವೇ ಶ್ವರ ರಾವ್ ಅವರು 2014 ರಲ್ಲಿ ವೈಎಸ್ಸಾರ್ ಕಾಂಗ್ರೆಸ್ ನಿಂದ ಶಾಸಕರಾಗಿ ನಂತರ ತೆಲುಗುದೇಶಂ ಸೇರಿದ್ದರು. ಇದರ ಬೆನ್ನಲ್ಲೇ ಘಟನೆಯಿಂದ ಕ್ರುದ್ಧಗೊಂಡ ಸ್ಥಳೀ ಯರು, ದುಂಬ್ರಿಗುಡಾ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದಾರೆ.

ಘಟನೆ ಹೇಗಾಯ್ತು?: ಮಾವೋವಾದಿಗಳ ಗುಂಪೊಂದು ಕೆಲವು ಗ್ರಾಮಸ್ಥರೊಂದಿಗೆ ಬಂದು ಶಾಸಕರ ಕಾರು ತಡೆದರು. ಶಾಸಕರ ಭದ್ರತಾ ಸಿಬ್ಬಂದಿ ಮತ್ತು ಮಾಜಿ ಶಾಸಕ ಸೋಮ ಅವರು ಈ ವೇಳೆಕಾರಿಂದ ಇಳಿದರು. ಶಾಸಕರ ಜತೆ ಅದೇನೋ ಕೆಲ ಹೊತ್ತು ನಕ್ಸಲರು ಮಾತನಾಡಿದರು. ತಮ್ಮೊಂದಿಗೆ ಕರೆದು ಕೊಂಡು ಬಂದಿದ್ದ ಗ್ರಾಮಸ್ಥರನ್ನು ‘ಮಾನವ ತಡೆಗೋಡೆ’ಯನ್ನಾಗಿ ಮಾಡಿಕೊಂಡು ಭದ್ರತಾ ಸಿಬ್ಬಂದಿಯ ಬಳಿ ಇದ್ದ ಎಕೆ- 47 ಕಸಿದರು. 

ಸರ್ವೇಶ್ವರ ರಾವ್ ಹಾಗೂ ಸೋಮ ಅವರ ಕೈಕಟ್ಟಿದರು. ಬಳಿಕ ಅವರನ್ನು ಗುಂಡಿಕ್ಕಿ ಕೊಂದರು ಎಂದು ವಿಶಾಖಪಟ್ಟಣ ಐಜಿಪಿ ಸಿಎಚ್ ಶ್ರೀಕಾಂತ್ ಹೇಳಿದ್ದಾರೆ. ಕೃತ್ಯದಲ್ಲಿ ಎಷ್ಟು ಜನ ಮಾವೋವಾದಿಗಳು ಭಾಗಿಯಾಗಿದ್ದರು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಮೂಲಗಳ ಪ್ರಕಾರ 50-60 ನಕ್ಸಲರು ಇದ್ದರು ಎನ್ನ ಲಾಗಿದೆ. ಆಂಧ್ರ-ಒಡಿಶಾ ಗಡಿ ಕ್ರಿಯಾ ಸಮಿತಿ ಎಂಬ ಸಂಘಟನೆಯನ್ನು ನಕ್ಸಲೀಯರು ಸ್ಥಾಪಿಸಿಕೊಂಡಿದ್ದು ಇವರ ನಾಯಕ ರಾಮಕೃಷ್ಣ ಎಂಬುವನಿದ್ದಾನೆ. ಈತನೇ ಈ ಕೃತ್ಯದ ಹಿಂದಿದ್ದಾನೆ ಎನ್ನಲಾಗಿದೆ. 

ಹತ್ಯೆಗೆ ಏನು ಕಾರಣ?: ಸರ್ವೇಶ್ವರ ರಾವ್ ಅವರು ಅರಕು ಸಮೀಪದಲ್ಲೇ ತಮ್ಮ ಸಂಬಂಧಿಯೊಬ್ಬರ ಹೆಸ ರಿನಲ್ಲಿ ಗ್ರಾಮಸಭೆ ಒಪ್ಪಿಗೆ ಪಡೆಯದೇ ರಾಜಕೀಯ ಪ್ರಭಾವ ಬಳಸಿ ಕಲ್ಲು ಗಣಿಗಾರಿಕೆ ಗುತ್ತಿಗೆ ಪಡೆದಿದ್ದರು. ಈ ಬಗ್ಗೆ ಸ್ಥಳೀಯರು ನಕ್ಸಲೀಯರಿಗೆ ದೂರು ನೀಡಿ ದ್ದರು. ಇದೇ ಕಾರಣಕ್ಕೆ ಎಸಗಲಾಗಿದೆ ಎನ್ನಲಾಗಿದೆ. ನಾಯ್ಡು ಪಾರಾಗಿದ್ದರು: ಈ ಹಿಂದೆ 2003 ರಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರ ಕಾರಿನ ಅಡಿ ನೆಲಬಾಂ ಬ್ ಸ್ಫೋಟಿಸಿ ಅವರನ್ನು ಹತ್ಯೆಗೈಯಲು ತಿರುಮಲ ಘಾಟ್‌ನಲ್ಲಿ ನಕ್ಸಲೀಯರು ವಿಫಲ ಸಂಚು ನಡೆಸಿದ್ದರು.

click me!