ನಾನೇಕೆ ಚೌಕಿದಾರ್ ಆದೆ : ಸುಷ್ಮಾ ಸ್ವರಾಜ್ ಸ್ವಾರಸ್ಯದ ಉತ್ತರ

By Web DeskFirst Published Mar 30, 2019, 3:15 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ಬೆನ್ನಲ್ಲೇ ಬಿಜೆಪಿ ನಾಯಕರೆಲ್ಲರೂ ತಮ್ಮ ಹೆಸರುಗಳನ್ನು ಚೌಕಿದಾರ್ ಎಂದು ಬದಲಾಯಿಸಿಕೊಂಡಿದ್ದು, ಈ ಬಗ್ಗೆ ಸುಷ್ನಾ ಸ್ವರಾಜ್ ತಮ್ಮ ಹೆಸರಿನಲ್ಲಿ ಚೌಕಿದಾರ್ ಸೇರಿಸಿಕೊಂಡಿರುವ ಬಗ್ಗೆ ಸ್ಪಷ್ಟನೆ ನಿಡಿದ್ದಾರೆ. 

ನವದೆಹಲಿ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರೆಲ್ಲ ಹೆಸರಿಗೆ ಚೌಕಿದಾರ್ ಸೇರಿಸಿಕೊಂಡಿದ್ದಾರೆ. 

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹ ಚೌಕಿದಾರ್ ಆಗಿದ್ದು,  ತಾವೇಕೆ ತಮ್ಮ ಹೆಸರಿನಲ್ಲಿ ಚೌಕಿದಾರ್ ಸೇರಿಸಿಕೊಂಡೆ ಎಂದು ತಿಳಿಸಿದ್ದಾರೆ. 

ನಾನೊಬ್ಬ ಚೌಕಿದಾರ್, ಯಾಕೆಂದರೆ ವಿದೇಶಗಳಲ್ಲಿರುವ ನಮ್ಮವರನ್ನು ಕಾಯುವುದು ನನ್ನ ಕೆಲಸ. ವಿದೇಶದಲ್ಲಿ ನಮ್ಮವರ ಹಿತದೃಷ್ಟಿಗಾಗಿ ನಾನು ಚೌಕಿದಾರಳಾಗಿದ್ದೇನೆ ಎಂದಿದ್ದಾರೆ. 

ಬೇರೆ ಬಿಜೆಪಿ ನಾಯಕರಂತೆ ತಾವೇಕೆ ತಮ್ಮನ್ನು ಚೌಕಿದಾರ್ ಎಂದು ಕರೆದುಕೊಂಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. 

ಹೆಚ್ಚು ಸೆನ್ಸಿಬಲ್ ಆಗಿರುವ ಸಚಿವೆ ಎಂದು ಭಾವಿಸಿದ್ದು, ನಿಮ್ಮನ್ನು ನಮ್ಮ ವಿದೇಶಾಂಗ ಸಚಿವೆ ಎಂದುಕೊಂಡಿದ್ದೇವೆ. ಆದ್ದರಿಂದ ನೀವೇಕೆ ನಿಮ್ಮನ್ನು ಚೌಕಿದಾರ್ ಎಂದು ಕರೆದುಕೊಂಡಿದ್ದೀರಿ ಎಂದು ಕೇಳಿದ್ದಕ್ಕೆ ಸ್ವಾರಸ್ಯದ ಉತ್ತರ ನೀಡಿದ್ದಾರೆ. 

#MainBhiChowkidar ಕ್ಯಾಂಪೇನ್ ಅಂಗವಾಗಿ  ಪ್ರಧಾನಿ ನರೇಂದ್ರ ಮೋದಿ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದು, ಬಳಿಕ ಎಲ್ಲಾ ಬಿಜೆಪಿ ನಾಯಕರೂ ತಮ್ಮ ಹೆಸರಿಗೆ ಚೌಕಿದಾರ್ ಎಂದು ಸೇರಿಸಿಕೊಂಡಿದ್ದರು. 

click me!