ಸುಶಾಂತ್ ಕೇಸ್ CBIಗೆ ಹಸ್ತಾಂತರ, ಟ್ವಿಟರ್‌ನಲ್ಲಿ ರಮ್ಯಾ ಪ್ರತ್ಯಕ್ಷ: ಇಲ್ಲಿದೆ ಆಗಸ್ಟ್ 19 ಟಾಪ್ 10 ಸುದ್ದಿಗಳು!

By Suvarna NewsFirst Published Aug 19, 2020, 6:30 PM IST
Highlights

ಕೊರೋನಾ ಅಟ್ಟಹಾಸ ದಿನೇ ದಿನೇ ಹೆಚ್ಚುತ್ತಿದ್ದು, ಈ ಮಹಾಮಾರಿಗೆ ಬಿಜೆಪಿಯ ಮಾಜಿ ಶಾಸಕ  ಸಿ. ಗುರುಸ್ವಾಮಿ ಮೃತಪಟ್ಟಿದ್ದಾರೆ. ಈಗಿರುವಾಗಲೇ ರಾಜ್ಯದಲ್ಲಿ ವೈದ್ಯನ ಸೋಗಿನಲ್ಲಿ ಉಗ್ರ ಚಟುವಟಿಯಲ್ಲಿ ತೊಡಗಿದ್ದಾತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಅತ್ತ ಬಾಲಿವುಡ್‌ ನಟ ಸುಶಾಂತ್ ಸಿಂಗ್ ಪ್ರಕರಣ ಸಂಬಂಧ ತೀರ್ಪಿ ನೀಡಿರುವ ಸುಪ್ರಿಂ ಕೋರ್ಟ್‌ ಈ ಕೇಸ್‌ನ ತನಿಖೆ ಸಿಬಿಐಗೆ ಹಸ್ತಾಂತರಿಸಿದೆ. ಇನ್ನು ಕಾಂಗ್ರೆಸ್‌ ಐಟಿ ಸೆಲ್‌ನ ಮುಖ್ಯಸ್ಥೆಯಾಗಿದ್ದ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಬರೋಬ್ಬರಿ ಹದಿನಾಲ್ಕು ತಿಂಗ ಬಳಿಕ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಇಂದಿನ, ಆಗಸ್ಟ್ 19ರ ಟಾಪ್ ಹತ್ತು ಸುದ್ದಿಗಳು ಇಲ್ಲಿವೆ

ಆ.20ರಂದು ರಾಜ್ಯ ಸಂಪುಟ ಸಭೆ: ಹಲವು ಮಹತ್ವದ ನಿರ್ಣಯಗಳಿಗೆ ಒಪ್ಪಿಗೆ ಸಾಧ್ಯತೆ

ನಾಳೆ ಅಂದ್ರೆ ಆ.20ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಸಿಎಂ ಬಿಎಸ್‌ವೈ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಲಿದ್ದು,  ಹಲವು ಮಹತ್ವದ ನಿರ್ಣಯಗಳಿಗೆ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ.

ರಿಯಾ ಚಕ್ರವರ್ತಿ ಅರ್ಜಿ ವಿಚಾರಣೆ: ಸುಶಾಂತ್ ಕೇಸ್ CBIಗೆ ಹಸ್ತಾಂತರ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಸುಪ್ರಿಂ ಕೋರ್ಟ್‌ ತೀರ್ಪು ನೀಡಿದೆ. ನಟಿ ರಿಯಾ ಚಕ್ರವರ್ತಿ ಸುಶಾಂತ್ ಸಾವಿನ ತನಿಖೆಯನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.

ಬಿಜೆಪಿ ಮಾಜಿ ಶಾಸಕ ಸಿ. ಗುರುಸ್ವಾಮಿ ಕೊರೋನಾಗೆ ಬಲಿ!


ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಸಿ. ಗುರುಸ್ವಾಮಿ (68)ಕೊರೋನಾ ಸೋಂಕಿನಿಂದ ಬುಧವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಈತ ಹೊರ ಜಗತ್ತಿಗೆ ಡಾಕ್ಟರ್; ಮಾಡ್ತಾ ಇದ್ದಿದ್ದು ಮಾತ್ರ ಉಗ್ರ ಚಟುವಟಿಕೆ.!


ಐಸಿಸ್ ಸಂಘಟನೆ ಜೊತೆ ರಹಸ್ಯವಾಗಿ ಸಂವಹನ ಮಾಡಲು App ಗಳನ್ನು ಅಭಿವೃದ್ಧಿಪಡಿಸುತ್ತಿದ್ದ ಬೆಂಗಳೂರು ಮೂಲದ ನೇತ್ರವೈದ್ಯ ಅಬ್ದುಲ್ ರೆಹಮಾನ್‌ರನ್ನು ಎನ್‌ಐಎ ಅಧಿಕಾರಿಗಳ ತಂಡ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಈತ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈತನ ಬಂಧನದ ಬೆನ್ನಲ್ಲೇ ಈತನ ಮೂವರು ಸ್ನೇಹಿತರನ್ನೂ ಎನ್‌ಐಎ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಯಡಿಯೂರಪ್ಪಗೆ ಪತ್ರ ಬರೆದ ಸಿದ್ದರಾಮಯ್ಯ, 13 ಅಂಶಗಳು ಉಲ್ಲೇಖ


ನಗರದ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. 13 ಅಂಶಗಳನ್ನೊಳಗೊಂಡ ಪತ್ರ ಬರೆದಿರುವ ಸಿದ್ದರಾಮಯ್ಯ, ಹಲವು ವಿಷಯಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗಾದ್ರೆ ಸಿದ್ದು ಬರೆದ ಪತ್ರದಲ್ಲೇನಿದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಹಿಂದು ಸಂಘಟನೆ, ಸಚಿವರ ಒತ್ತಡಕ್ಕೆ ಮಣಿದ ಸರ್ಕಾರ: ಗಣೇಶೋತ್ಸವಕ್ಕೆ ಷರತ್ತಿನ ಸಮ್ಮತಿ!


ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಈ ವರ್ಷ ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸಿದ್ದ ರಾಜ್ಯ ಸರ್ಕಾರ, ಇದೀಗ ವಿವಿಧ ಹಿಂದು ಪರ ಸಂಘಟನೆಗಳು ಹಾಗೂ ಕೆಲವು ಸಚಿವರ ಒತ್ತಡಕ್ಕೆ ಮಣಿದು ಸಾರ್ವಜನಿಕ ಗಣೇಶೋತ್ಸವವನ್ನು ಷರತ್ತುಬದ್ಧವಾಗಿ ಆಚರಿಸಲು ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.

14 ತಿಂಗಳ ಬಳಿಕ ಏಕಾಏಕಿ ಟ್ವಿಟರ್‌ನಲ್ಲಿ ನಟಿ ರಮ್ಯಾ ಪ್ರತ್ಯಕ್ಷ, ಮಾಡಿದ ಟ್ವೀಟ್‌ ಇದು!


ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕಳೆದ ಹದಿನಾಲ್ಕು ತಿಂಗಳಿಂದ ನಾಪತ್ತೆಯಾಗಿದ್ದರು. ಆದರೀಗ ಏಕಾಏಕಿ ಟ್ವಿಟರ್‌ನಲ್ಲಿ ಮತ್ತೆ ಕಾಣಿಸಿಕೊಂಡಿರುವ ದಿವ್ಯ ಸ್ಪಂದನ ಪಿಎಂ ಕೇರ್ಸ್‌ ಫಂಡ್‌ ವಿವಾದ ಸಂಬಂಧ ಧ್ವನಿ ಎತ್ತಿದ್ದಾರೆ.

ಕೊರೋನಾದಿಂದ ಗುಣಮುಖರಾಗಿ ಪ್ಲಾಸ್ಮಾ ದಾನ ಮಾಡಿದ ದೇಶದ ಮೊದಲ ಕರ್ನಾಟಕದ ಶಾಸಕ


ಕಳೆದ ತಿಂಗಳು ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಕರ್ನಾಟಕದ ಕಾಂಗ್ರೆಸ್ ಶಾಸಕರೊಬ್ಬರು ಪ್ಲಾಸ್ಮಾವನ್ನು ಕೋವಿಡ್  ರೋಗಿಗಳಿಗೆ ದಾನ ಮಾಡಿದ್ದಾರೆ. ಈ ಮೂಲಕ ಪ್ಲಾಸ್ಮಾ ದಾನ ಮಾಡಿದ ದೇಶದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹುಚ್ಚುದೊರೆ ಕಿಮ್‌ ವಿಚಿತ್ರ ಆದೇಶ, ಮೂಕಪ್ರಾಣಿಗಳ ಶಾಪ ತಟ್ಟದೇ ಇರಲ್ಲ!


ಕಿಮ್ ಜಾಂಗ್ ಉನ್, ಉತ್ತರ ಕೊರಿಯಾದ ಸರ್ವಾಧಿಕಾರಿ ತನ್ನ ಚಿತ್ರ ವಿಚಿತ್ರ ಆದೇಶಗಳಿಂದಲೇ ಫೇಮಸ್. ಕೆಲ ದಿನಗಳ ಹಿಂದೆ ಮಾಸ್ಕ್ ಧರಿಸದವರಿಗೆ ಮೂರು ತಿಂಗಳವರೆಗೆ ಕೂಲಿ ಕಾರ್ಮಿಕರಂತೆ ದುಡಿಯುವ ಶಿಕ್ಷೆ ಜಾರಿಗೊಳಿಸಿದ್ದ ಈ ಹುಚ್ಚುದೊರೆ ಈಗ ಮತ್ತೊಂದು ಆದೇಶವನ್ನು ಜಾರಿಗೊಳಿಸಿದ್ದಾರೆ.

ದೇಶೀಯ ಮೈಕ್ರೋಚಿಪ್ ಬಳಸಿ 4 ಕೋಟಿ ರೂ. ಬಹುಮಾನ ಗೆಲ್ಲಿ!


ಐಐಟಿ ಮದ್ರಾಸ್‌ ಹಾಗೂ ಸಿಡ್ಯಾಕ್‌ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಮೈಕ್ರೋಪ್ರೊಸೆಸರ್‌ಗಳನ್ನು ಬಳಸಿಕೊಂಡು ತಂತ್ರಜ್ಞಾನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವವರಿಗೆ 4.3 ಕೋಟಿ ರು. ಬಹುಮಾನದ ಸ್ಪರ್ಧೆಯೊಂದನ್ನು ಕೇಂದ್ರ ಸರ್ಕಾರ ಆಯೋಜಿಸಿದೆ.

click me!