ಹುಷಾರು! ಸೆಕ್ಸ್’ನ ಈ ಹೊಸ ಟ್ರೆಂಡ್ ಕೂಡಾ ಅತ್ಯಾಚಾರ!

By Suvarna Web DeskFirst Published Jul 15, 2017, 3:41 PM IST
Highlights

ಲೈಂಗಿಕ ಸಂಬಂಧಗಳಲ್ಲಿ ಸಂಗಾತಿಗಳ ನಡುವೆ ವಿಶ್ವಾಸ ಅತೀ ಮುಖ್ಯ. ಆದರೆ ಸ್ಟೀಲ್ತಿಂಗ್ ಚಾಳಿಯು ಸಂಬಂಧಗಳ ಮೇಲೆ ಹುಳಿ ಹಿಂಡುತ್ತಿದ್ದು, ಜಗತ್ತಿನಾದ್ಯಂತ ಅದನ್ನು ಅಪರಾಧವೆಂದು ಪರಿಗಣಿಸಬೇಕೆಂಬ ಕೂಗಿ ಕೇಳಿ ಬರುತ್ತಿದೆ. ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ಸ್ಟೀಲ್ತಿಂಗನ್ನು ಅತ್ಯಾಚಾರದ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ.

ಐರಿಶ್ ಕಾನೂನಿನಲ್ಲೂ ಇದನ್ನು ದೌರ್ಜನ್ಯವೆಂದೇ ಪರಿಗಣಿಸಲಾಗುತ್ತಿದೆ.  ರೇಪ್ ಕ್ರೈಸಿಸ್ ನೆಟ್ವರ್ಕ್ ಐರ್ಲ್ಯಾಂಡ್ (RCNI)  ಸಂಸ್ಥೆಯು ಇದನ್ನು ಅತ್ಯಾಚಾರವೆಂದೇ ಹೇಳುತ್ತಿದೆ.

ಸ್ಟೀಲ್ತಿಂಗ್'ನಿಂದ ಮಹಿಳಾ ಸಂಗಾತಿಯ (ಯೋಜನೆಯಿಲ್ಲದ) ಗರ್ಭಧರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆಯಲ್ಲದೇ ,ಸಂಗಾತಿಯು ಲೈಂಗಿಕ ರೋಗಗಳಿಗೆ ತುತ್ತಾಗುವ ಅಪಾಯವೂ ಹೆಚ್ಚಿಸುತ್ತದೆ.

ಸ್ಟೀಲ್ತಿಂಗ್ ಎಂದರೇನು?
ಜೋಡಿಗಳು ಕಾಂಡಮ್ ಧರಿಸಿ ಲೈಂಗಿಕ ‌ಕ್ರಿಯೆಯಲ್ಲಿ ತೊಡಗಿರುವಾಗ, ಆ ನಡುವೆ ಸಂಗಾತಿಗೆ ತಿಳಿಯದಂತೆ ಕಾಂಡಮನ್ನು ಕಳಚುವುದನ್ನು ಸ್ಟೀಲ್ತಿಂಗ್ ಅನ್ನುತ್ತಾರೆ. ಈ ಬಗ್ಗೆ ಕೊಲಂಬಿಯಾ ಜರ್ನಲ್ ಆಫ್ ಜಂಡರ್ ಅಂಡ್ ಲಾ ನಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದ್ದು, ಸಂಗಾತಿಯ ಅನುಮತಿಯಿಲ್ಲದೇ ಕಾಂಡೊಮ್ ಕಳಚುವ ಇಂತಹ ಪ್ರಕರಣಗಳು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ನಿರ್ಲಕ್ಷಿಸಲ್ಪಡುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚು  ಗಂಭೀರವಾಗಿ ಚರ್ಚೆಯಾಗುವ ಅಗತ್ಯವಿದೆಯೆಂದು ತಜ್ಞರು ಅಭಿಪ್ರಾಯಪಡುತ್ತಾರೆ.

click me!