ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್..!

By Web DeskFirst Published Oct 15, 2018, 9:41 AM IST
Highlights

ರೈಲಲ್ಲಿ ಪ್ರಯಾಣಿಸುವಾಗ ಯಾವುದೇ ಅಪರಾಧ ಸಂಭವಿಸಿದರೆ ರೈಲ್ವೆ ಪೊಲೀಸ್ ಠಾಣೆ ಇರುವ ಮುಂದಿನ ರೈಲು ನಿಲ್ದಾಣದವರೆಗೆ ಕಾಯಬೇಕಿಲ್ಲ. ಮೊಬೈಲ್ ಆ್ಯಪ್ ಮೂಲಕ ತಕ್ಷಣವೇ ದೂರು ನೀಡಬಹುದು. ಇದಕ್ಕೆ ‘ಝೀರೋ ಎಫ್‌ಐಆರ್’ ಎನ್ನುತ್ತಾರೆ. 

ನವದೆಹಲಿ(ಅ.15): ರೈಲು ಪ್ರಯಾಣಿಕರಿಗೆ ತಾವು ಪ್ರಯಾಣದ ವೇಳೆಯೇ ಅಪರಾಧಗಳ ವಿರುದ್ಧ ದೂರು ದಾಖಲಿಸಲು ಅವಕಾಶ ಕಲ್ಪಿಸುವ ಮೊಬೈ ಲ್ ಆ್ಯಪ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದಕ್ಕೆ ‘ಝೀರೋ ಎಫ್ಐಆರ್’ ಎಂದು ಕರೆಯಲಾಗುತ್ತಿದ್ದು, ದೂರು ದಾಖಲಿಸಿದ ಕೂಡಲೇ ರೈಲ್ವೆ ಭದ್ರತಾ ಪಡೆ ತನಿಖೆ ಕೈಗೊಳ್ಳಲಿದೆ. 

ಕಿರುಕುಳ, ಕಳವು, ಮಹಿಳೆಯರ ವಿರುದ್ಧ ಅಪರಾಧ- ಇಂತಹ ಇತ್ಯಾದಿ ದೂರುಗಳನ್ನು ಪ್ರಯಾಣದ ಸಂದರ್ಭದಲ್ಲೇ ಮೊಬೈಲ್ ಆ್ಯಪ್ ಮೂಲಕ ದಾಖಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ರೈಲಲ್ಲಿ ಪ್ರಯಾಣಿಸುವಾಗ ಯಾವುದೇ ಅಪರಾಧ ಸಂಭವಿಸಿದರೆ ರೈಲ್ವೆ ಪೊಲೀಸ್ ಠಾಣೆ ಇರುವ ಮುಂದಿನ ರೈಲು ನಿಲ್ದಾಣದವರೆಗೆ ಕಾಯಬೇಕಿಲ್ಲ. ಮೊಬೈಲ್ ಆ್ಯಪ್ ಮೂಲಕ ತಕ್ಷಣವೇ ದೂರು ನೀಡಬಹುದು. ಇದಕ್ಕೆ ‘ಝೀರೋ ಎಫ್‌ಐಆರ್’ ಎನ್ನುತ್ತಾರೆ. 

ಗ್ರಾಹಕರ ನೆರವಿಗೆ IRCTC ಆಸ್ಕ್ ದಿಶಾ

ಗ್ರಾಹಕರ ನಾನಾ ಪ್ರಶ್ನೆಗಳಿಗೆ ತಕ್ಷಣದಲ್ಲಿಯೇ ಉತ್ತರಿಸುವ ಆಸ್ಕ್ ದಿಶಾ ಎಂಬ ಚಾಟ್‌ಬೋಟ್ ಸೇವೆಯನ್ನು ಐಆರ್'ಸಿಟಿಸಿ ಶನಿವಾರದಿಂದ ಆರಂಭಿಸಿದೆ. ಕೃತಕ ಬುದ್ಧಿಮತ್ತೆ ಆಧರಿಸಿ ನಿರ್ವಹಿಸಲ್ಪಡುವ ಈ ಸೇವೆಯಡಿ, ಐಆರ್‌ಸಿಟಿಸಿ ವೆಬ್‌ಸೈಟ್‌ನ ಬಲಭಾಗದಲ್ಲಿ ನೀಡ್ ಹೆಲ್ಪ್ ಆಸ್ಕ್ ದಿಶಾ ಎಂಬ ಸಂವಹನ ಬಾಕ್ಸ್ ಕಾಣಿಸಿಕೊಳ್ಳುತ್ತದೆ.

ಅಲ್ಲಿ ಗ್ರಾಹಕರು ಯಾವುದೇ ಅಕ್ಷರ ಟೈಪ್ ಮಾಡುತ್ತಲೇ ಪೂರ್ವ ರಚಿತ ಪ್ರಶ್ನೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಯಾವುದಾದರೂ ಗ್ರಾಹಕರ ಪ್ರಶ್ನೆಗೆ ಹೊಂದಿಕೊಳ್ಳುವಂತಿದ್ದರೆ, ಅದನ್ನು ಕ್ಲಿಕ್ ಮಾಡಬೇಕು. ಕೂಡಲೇ ಅದಕ್ಕೆ ಪೂರ್ವ ನಿರ್ಧರಿತ ಉತ್ತರ ನೀಡಲಾಗುತ್ತದೆ.

ಬೆಂಗಳೂರು ಮೂಲದ ಕೋರೋವರ್ ಎಂಬ ಸ್ಟಾರ್ಟ್‌ಅಪ್ ಜೊತೆಗೂಡಿ ಈ ವ್ಯವಸ್ಥೆಯನ್ನು ಐಆರ್‌ಸಿಟಿಸಿ ಅಭಿವೃದ್ಧಿಪಡಿಸಿ ಅಳವಡಿಸಿದೆ. ದಿನದ 24 ಗಂಟೆಯೂ ಲಭ್ಯವಿರುವ ಈ ಸೇವೆಯಿಂದಾಗಿ ಗ್ರಾಹಕರಿಗೆ ಹಲವಾರು ಪ್ರಶ್ನೆಗಳಿಗೆ ತಡವಿಲ್ಲದೇ ಉತ್ತರ ಸಿಗುತ್ತದೆ ಎಂದು ಸಂಸ್ಥೆ ಹೇಳಿದೆ.
 

click me!