ಅನಾರೋಗ್ಯದಿಂದ ಬಳಲುತ್ತಿರುವ ಸೋನಾಲಿ ಬೇಂದ್ರೆ ಇದೀಗ ತಮ್ಮ ಹೊಸ ಲುಕ್ ನ ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನ್ಯೂಯಾರ್ಕ್: ಕ್ಯಾನ್ಸರ್ ಚಿಕಿತ್ಸೆಗಾಗಿ ತಲೆ ಬೋಳಿಸಿ ಕೊಂಡಿದ್ದ ಖ್ಯಾತ ನಟಿ ಸೋನಾಲಿ ಬೇಂದ್ರೆ ಈಗ ವಿಗ್ ಧರಿಸಿದ ಹೊಸ ಫೋಟೋ ಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
1997 ರ ಪ್ರಸಿದ್ಧ ಚಿತ್ರ ‘ದ ಡೆವಿಲ್ಸ್ ಅಡ್ವೊಕೇಟ್’ನ ಅಲ್ ಪ್ಯಾಸಿನೊರ ಜನಪ್ರಿಯ ಸಂಭಾಷಣೆ ‘ಆಡಂಬರ ನನ್ನ ಅಚ್ಚುಮೆಚ್ಚಿನ ಪಾಪ’ ಎಂಬ ವಾಕ್ಯವನ್ನು ಉಲ್ಲೇಖಿಸಿರುವ ಸೋನಾಲಿ, ತಾನು ವಿಗ್ ಧರಿಸಿದ ಕ್ಷಣಗಳ ಕುರಿತು ವಿವರಣೆ ನೀಡಿದ್ದಾರೆ.