ಮಹಿಳೆಗೆ ನಾಲ್ಕು ದಿನದಲ್ಲಿ ಮೂರು ಬಾರಿ ಕಚ್ಚಿದ ಹಾವು!

Jul 1, 2018, 6:13 PM IST

ದಾವಣಗೆರೆ(ಜು.1): ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮಹಿಳೆಯೋರ್ವರಿಗೆ ನಾಲ್ಕು ದಿನದಲ್ಲಿ ಹಾವೊಂದು ಮೂರು ಬಾರಿ ಕಚ್ಚಿದೆ. ನಗರದ ಜೆ.ಸಿ. ಬಡಾವಣೆಯ ಖಮರ್ತಾಜ್ ಎಂಬ ಮಹಿಳೆ ಮೂರು ಬಾರಿ ಹಾವು ಕಚ್ಚಿಸಿಕೊಂಡಿದ್ದಾರೆ.

ಕಳೆದ ನಾಲ್ಕು ದಿನಗಳಲ್ಲಿ ಖಮರ್ತಾಜ್ ಗೆ ಮೂರು ಬಾರಿ ಹಾವು ಕಚ್ಚಿದ್ದು, ಇದು ಹಾವಿನ ದ್ವೇಷ ಇರಬಹುದು ಎಂದು ಕೆಲವರು ಶಂಕಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮಹಿಳೆಯನ್ನು ನಿರಂತರವಾಗಿ ಕಾವಲು ಕಾಯುತ್ತಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೊಡಿ..