ಆಲಿಯಾ ಭಟ್ ಮತ್ತೊಮ್ಮೆ ಡೀಪ್ಫೇಕ್ ತಂತ್ರಜ್ಞಾನಕ್ಕೆ ಬಲಿಯಾಗಿದ್ದಾರೆ. ಆದ್ರೆ ಆ ಬಾರಿ ನೆಟ್ಟಿಗರ ಆಸೆಯೇ ಬೇರೆ! ಅದೇನು ನೋಡಿ...
ಕೆಲ ತಿಂಗಳ ಹಿಂದೆ, ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ದೇಶಾದ್ಯಂತ ಭಾರಿ ಹಲ್ಚಲ್ ಸೃಷ್ಟಿಸಿತ್ತು. ಯಾರದ್ದೋ ದೇಹಕ್ಕೆ ಇನ್ನಾದರೋ ಮುಖ ಹಾಕಿ ಮೀಮ್ಸ್ ಮಾಡುವುದು ಮಾಮೂಲು. ಆದರೆ, ಅಶ್ಲೀಲ ಎನ್ನುವ ವಿಡಿಯೋ ಒಂದಕ್ಕೆ ಇನ್ನೊಬ್ಬರ ಮುಖವನ್ನು ಹಾಕಿ ವಿಡಿಯೋ ಮಾಡುವ ಭಯಾನಕ ತಂತ್ರ ಈ ಡೀಪ್ ಫೇಕ್. ಇದಾಗಲೇ ಕೆಲವರಿಗೆ ಈ ಕೆಟ್ಟ ಅನುಭವವಾಗಿದ್ದರೂ, ನಟಿ ರಶ್ಮಿಕಾ ಮಂದಣ್ಣ ಅವರ ಪ್ರಕರಣದಿಂದಾಗಿ ಇದು ಭಾರಿ ಸುದ್ದಿಗೆ ಗ್ರಾಸವಾಯಿತು. ಬ್ರಿಟಿಷ್ ಇಂಡಿಯನ್ ಮತ್ತು ಇನ್‌ಸ್ಟಾಗ್ರಾಮ್ ಪ್ರಭಾವಿ ಜಾರಾ ಪಟೇಲ್ ಎಂಬಾತ ಮೂಲ ವೀಡಿಯೊವನ್ನು ರಶ್ಮಿಕಾ ಅವರ ಮುಖದೊಂದಿಗೆ ಮಾರ್ಫ್ ಮಾಡಲಾಗಿತ್ತು. ಇದಾಗಲೇ ಜಾರಾ ಅವರು ಇದರಲ್ಲಿ ತಮ್ಮ ಕೈವಾಡ ಏನೂ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಜೊತೆಗೆ ಈ ರೀತಿಯಾದುದಕ್ಕೆ ಅವರು ವಿಷಾದ ಕೂಡ ವ್ಯಕ್ತಪಡಿಸಿದ್ದರು. ಈ ವಿಡಿಯೋದ ಮಾರ್ಫಿಂಗ್‌ನಲ್ಲಿ ತಾವು ಭಾಗಿಯಾಗಿಲ್ಲ ಎಂದು Instagram ಕೂಡ ಹೇಳಿತ್ತು. ನಂತರ ಆರೋಪಿಯೊಬ್ಬನನ್ನು ಅರೆಸ್ಟ್ ಮಾಡಿದ್ರೂ ಇದುವರೆಗೆ ಆ ವಿಷಯದ ಅಪ್ಡೇಟ್ ಬಂದಿಲ್ಲ.
ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಿ ಇದನ್ನುಮಾಡಲಾಗಿದೆ. ಕಪ್ಪು ಬಟ್ಟೆ ಧರಿಸಿದ ಮಹಿಳೆಯೊಬ್ಬರು ಲಿಫ್ಟ್‌ಗೆ ಪ್ರವೇಶಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಮಹಿಳೆಯ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ನಟಿ ರಶ್ಮಿಕಾ ಮಂದನಾ ಅವರ ಮುಖವನ್ನು ಹೋಲುತ್ತದೆ. ವೀಡಿಯೋ ಆನ್‌ಲೈನ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ನಟಿಯೊಬ್ಬಳು ಈ ರೀತಿ ಡ್ರೆಸ್ ಹಾಕಿದರೆ ಅದೇನು ದೊಡ್ಡ ವಿಷಯವೇ ಅಲ್ಲ. ಈ ರೀತಿ ದೇಹ ಪ್ರದರ್ಶನ ಮಾಡುವುದು ಸರ್ವೇ ಸಾಮಾನ್ಯ ಎನಿಸಿದೆ. ಆದರೆ ಸಾಮಾನ್ಯ ಮಹಿಳೆಯರ ವಿಷಯದಲ್ಲಿಯೂ ಹೀಗೆಯೇ ಆದರೆ ಮಾನ ಮರ್ಯಾದೆಗೆ ಅಂಜುವವರು ಯಾವ ಹಂತಕ್ಕಾದರೂ ಹೋಗಬಹುದು ಎಂಬ ಬಗ್ಗೆ ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ರಶ್ಮಿಕಾ ಮಂದಣ್ಣ ಬಳಿಕ ಬಾಲಿವುಡ್ ನಟಿಯರಾದ ಕಾಜೋಲ್, ಆಲಿಯಾ ಸೇರಿದಂತೆ ಕೆಲವರ ಇದೇ ರೀತಿಯ ವಿಡಿಯೋಗಳು ವೈರಲ್ ಆದವು.
ಡೀಪ್ಫೇಕ್ ಹೆಸ್ರಲ್ಲಿ ಶಾರುಖ್, ಸಲ್ಮಾನ್, ರಣಬೀರ್, ಅಕ್ಷಯ್ಗೆ ಹೀಗೆಲ್ಲಾ ಮಾಡೋದಾ? ಉಫ್ ಎಂದ ಫ್ಯಾನ್ಸ್!
ಆಲಿಯಾ ಭಟ್ ಡೀಪ್ಫೇಕ್ ಫೋಟೊ ಇನ್ನೊಂದು ಈಗ ವೈರಲ್ ಆಗಿದೆ. ಇದರಲ್ಲಿ ಯಾರದ್ದೋ ದೇಹಕ್ಕೆ ಆಲಿಯಾ ಭಟ್ ಮುಖ ಫಿಕ್ಸ್ ಮಾಡಲಾಗಿದೆ. ಅಸಲಿಗೆ ಈ ಫೋಟೋ ವಮಿಖಾ ಗಬ್ಬಿ ಅವರದ್ದು. ಕೆಲವು ಟೂಲ್ಗಳನ್ನು ಬಳಸಿ ವಮಿಖಾ ಮುಖಕ್ಕೆ ಆಲಿಯಾ ಮುಖವನ್ನು ಅಂಟಿಸಲಾಗಿದೆ. ಹೀಗಾಗಿ ಈ ವಿಡಿಯೋದಲ್ಲಿ ಆಲಿಯಾ ಅವರನ್ನು ನೋಡಿದಂತೇ ಆಗುತ್ತಿದೆ. ಡಿಜಿಟಲ್ ಮ್ಯಾನ್ಯುಪಲೇಷನ್ ಟೆಕ್ನಾಲಜಿ ಬಳಸಿ ಈ ರೀತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ವಮಿಖಾ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೊ ಹಂಚಿಕೊಂಡಿದ್ದರು. ಕೆಂಪು ಸೀರೆಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು ಅವರು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ನೆಟ್ಫ್ಲಿಕ್ಸ್ ಸೀರಿಸ್ ‘ಹೀರಾಮಂಡಿ’ಯ ಸ್ಪೆಷಲ್ ಶೋನಲ್ಲಿ ಅವರು ಇದನ್ನು ಧರಿಸಿದ್ದರು. ಈ ಕಾರ್ಯಕ್ರಮಕ್ಕೆ ಆಲಿಯಾ ಭಟ್ ಅವರು ಕೂಡ ಭಾಗವಹಿಸಿದ್ದರು. ಇದೀಗ ಅವರ ಮುಖಕ್ಕೆ, ಇವರ ದೇಹ ಹಾಕಲಾಗಿದೆ.
ಇದನ್ನು ಹಲವರು ಖಂಡಿಸಿದ್ದಾರೆ. ಆದರೆ ಕೆಲವರು ನಟಿಯರಿಗೆ ಡೀಪ್ಫೇಕ್ ಮಾಡಬೇಕೆಂದೇನೂ ಇಲ್ಲ. ಅಶ್ಲೀಲದಲ್ಲಿ ಅಶ್ಲೀಲ ಎನ್ನುವ ಫೋಟೋ, ವಿಡಿಯೋಗಳನ್ನು ನೋಡಿ ನೋಡಿ ಸಾಕಾಗಿದೆ. ದಯವಿಟ್ಟು ಯಾರಾದರೂ ಯಾವುದಾದರೂ ನಟಿ ಫುಲ್ ಡ್ರೆಸ್ ಹಾಕಿಕೊಂಡಿರೋ ಡೀಪ್ಫೇಕ್ ವಿಡಿಯೋ ವೈರಲ್ ಮಾಡ್ರಪ್ಪಾ ಎಂದು ಹೇಳುತ್ತಿದ್ದಾರೆ. ಇಂದು ನಟಿಯರು ಪೈಪೋಟಿಗೆ ಬಿದ್ದವರಂತೆ ದೇಹ ಪ್ರದರ್ಶನ ಮಾಡುತ್ತಿರುವುದನ್ನು ನೋಡಿ ಸಾಕಾದ ನೆಟ್ಟಿಗರು ಹೀಗೊಂದು ಆಸೆ ವ್ಯಕ್ತಪಡಿಸುತ್ತಿದ್ದಾರೆ.
ಸಂಪೂರ್ಣ ಬೆತ್ತಲಾದ ರಣಬೀರ್ ರಾಮನಾದ ಬಳಿಕ ಈಗ ಅರೆಬೆತ್ತಲ ರಾಣಿ ಅಂಜಲಿ ಸೀತಾಮಾತೆ! ಭಾರಿ ಆಕ್ರೋಶ