ಚಿಕ್ಕಬಳ್ಳಾಪುರ: ಕ್ಯಾಂಟರ್ ಪಲ್ಟಿ, ಸ್ಥಳದಲ್ಲೇ ಮೂವರ ದುರ್ಮರಣ

By Kannadaprabha News  |  First Published May 8, 2024, 11:35 AM IST

ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಮುತ್ತಣ್ಣ, ಅಪ್ಜಲ್, ಚಾಂದ್ ಪಾಶ ಎನ್ನುವವರು ಮೃತಪಟ್ಟಿದ್ದರೆ, ಚಾಲಕ ರವಿ ಹಾಗೂ ಬಾಬಾಜಾನ್ ಎನ್ನುವವರಿಗೆ ತೀರ್ವ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಿಂದ ಬೆಂಗಳೂರು ವಿಕ್ಟೋರಿಯ ಆಸ್ಪತ್ರೆಗೆ ರವಾನಿಸಲಾಗಿದೆ. 


ಚಿಕ್ಕಬಳ್ಳಾಪುರ(ಮೇ.08): ಚಿಕ್ಕಬಳ್ಳಾಪುರ- ಗೌರಿಬಿದನೂರು ರಸ್ತೆಯ ಈರದಿಮ್ಮಮ್ಮನ ಕಣಿವೆ ಬಳಿ ಸೋಮವಾರ ತಡರಾತ್ರಿ ಕಲ್ಲುಕೂಚ ಸಾಗಿಸುತ್ತಿದ್ದ ಕ್ಯಾಂಟರ್ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಕ್ಯಾಂಟರ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಜಿಲ್ಲಾ ಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚಿಕ್ಕ ತಿರುಪತಿಯಿಂದ ಚಿಕ್ಕಬಳ್ಳಾಪುರದ ಮಂಚೇನಹಳ್ಳಿಗೆ ಕೂಚದ ಕಲ್ಲುಗಳನ್ನ ಸಾಗಿಸಲಾಗುತ್ತಿತ್ತು. ಘಟನೆಗೆ ಕ್ಯಾಂಟರ್ ನಲ್ಲಿ ತುಂಬಿದ್ದ ಅಧಿಕ ತೂಕದ ಕಲ್ಲು ಕಾರಣ ಎನ್ನಲಾಗಿದೆ

Tap to resize

Latest Videos

ದತ್ತಪೀಠದಲ್ಲಿ 100 ಅಡಿ ಕೆಳಕ್ಕೆ ಉರುಳಿಬಿದ್ದ ಪ್ರವಾಸಿ ಬಸ್!

ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಮುತ್ತಣ್ಣ, ಅಪ್ಜಲ್, ಚಾಂದ್ ಪಾಶ ಎನ್ನುವವರು ಮೃತಪಟ್ಟಿದ್ದರೆ, ಚಾಲಕ ರವಿ ಹಾಗೂ ಬಾಬಾಜಾನ್ ಎನ್ನುವವರಿಗೆ ತೀರ್ವ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಿಂದ ಬೆಂಗಳೂರು ವಿಕ್ಟೋರಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ,ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಚಿಕ್ಕಬಳ್ಳಾಪುರ ಗ್ರಾಮಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಪಘಾತದಿಂದ ಚಿಕ್ಕಬಳ್ಳಾಪುರ - ಗೌರಿ ಬಿದನೂರು ಮಾರ್ಗದಲ್ಲಿ ಸಂಚಾರ ದಟ್ಟನೆ ಉಂಟಾಗಿತ್ತು. ಕಣಿವೆ ರಸ್ತೆ ಕಾಮಗಾರಿ ಅಪೂರ್ಣಗೊಂಡಿದೆ. ಇಳಿಜಾರಿನಲ್ಲಿ ಭಾರಿ ವಾಹನಗಳನ್ನು ನಿಯಂತ್ರಣ ಮಾಡಲಾಗದೆ ಈ ರೀತಿಯ ಅಫಘಾತ ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

click me!