ಪಿಪಿಎಫ್ ದರವು ಕುಸಿದರೆ ಬೇರೆ ಆಯ್ಕೆಗಳತ್ತ ಹೊರಳುವುದು ಸೂಕ್ತವೇ?

By ಆಧಿಲ್ ಶೆಟ್ಟಿFirst Published Nov 16, 2017, 3:39 PM IST
Highlights

ಕಳೆದ  2017ರ ಜುಲೈ 1 ರಿಂದ ಪಿಪಿಎಫ್ ಮೇಲಿನ ಬಡ್ಡಿದರವು ವಾರ್ಷಿಕವಾಗಿ ಶೇ.7.8ರಷ್ಟು ಕನಿಷ್ಟ ಮಟ್ಟಕ್ಕೆ ಇಳಿದಿದೆ.  ಇಂತಹ ಬೆಳವಣಿಗೆಗಳಿಂದ ಹೂಡಿಕೆದಾರರಲ್ಲಿ ದ್ವಂದ್ವಗಳು ಹೆಚ್ಚಿವೆ. ಇದೇ  ಕ್ಷೇತ್ರದಲ್ಲಿ ಮುಂದುವರಿಯಬೇಕೆ ಅಥವಾ ಬೇರೆ ಕಡೆ ಹೊರಳಬೇಕೆ ಎನ್ನುವ  ಗೊಂದಲಗಳು ಅವರನ್ನು ಕಾಡುತ್ತಿವೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಎನ್ನುವುದು ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಒಂದು ಸುರಕ್ಷಿತವಾದ ಹೂಡಿಕೆಯ ಸಾಧನವಾಗಿದೆ. ಆದರೆ ಕಳೆದ ಕೆಲ ವರ್ಷಗಳಿಂದ ಪಿಪಿಎಫ್ ಮೇಲಿನ ಬಡ್ಡಿದರವು ನಿರಂತವಾಗಿ ಇಳಿಮುಖವಾಗುತ್ತಿದೆ.

2013-2016ನೇ ಸಾಲಿನಲ್ಲಿ  ಇದರ  ಅಂಕಿ ಅಂಶವು ಶೇ.8.7ರಷ್ಟಿತ್ತು, ಆದರೆ 2016-17ನೇ ಸಾಲಿನಲ್ಲಿ  ಪಿಪಿಎಫ್ ಮೇಲಿನ ಬಡ್ಡಿದರವು ವಾರ್ಷಿಕವಾಗಿ ಶೇ. 8.1ಕ್ಕೆ ಇಳಿಕೆಯಾಗಿದೆ.

ಕಳೆದ  2017ರ ಜುಲೈ 1 ರಿಂದ ಪಿಪಿಎಫ್ ಮೇಲಿನ ಬಡ್ಡಿದರವು ವಾರ್ಷಿಕವಾಗಿ ಶೇ.7.8ರಷ್ಟು ಕನಿಷ್ಟ ಮಟ್ಟಕ್ಕೆ ಇಳಿದಿದೆ.  ಇಂತಹ ಬೆಳವಣಿಗೆಗಳಿಂದ ಹೂಡಿಕೆದಾರರಲ್ಲಿ ದ್ವಂದ್ವಗಳು ಹೆಚ್ಚಿವೆ. ಇದೇ  ಕ್ಷೇತ್ರದಲ್ಲಿ ಮುಂದುವರಿಯಬೇಕೆ ಅಥವಾ ಬೇರೆ ಕಡೆ ಹೊರಳಬೇಕೆ ಎನ್ನುವ  ಗೊಂದಲಗಳು ಅವರನ್ನು ಕಾಡುತ್ತಿವೆ.

ಪಿಪಿಎಫ್ ಮೇಲಿನ ಬಡ್ಡಿದರ ಕುಸಿತದಿಂದ ಹೂಡಿಕೆ ಮಾಡಲು ಅವಕಾಶವಿರುವ ಕ್ಷೇತ್ರಗಳು ಯಾವುದಿವೆ ಎಂಬುವುದನ್ನು ನಾವು ನೋಡೋಣ.

ಪಿಪಿಎಫ್-  ಒಂದು ತೆರಿಗೆ ಉಳಿಸುವ ವಿಧಾನ

ಪಿಪಿಎಫ್'ನಲ್ಲಿ ವಾರ್ಷಿಕ 1.5 ಲಕ್ಷ ರುಪಾಯಿ ಹೂಡಿಕೆಗೆ ಮಾಡಲು ಅವಕಾಶವಿದೆ. ಹಾಗೂ ಸೆಕ್ಷನ್ 80 (ಸಿ) ಅನ್ವಯ ತೆರಿಗೆಯನ್ನು ಉಳಿಸುವ ಅವಕಾಶವಿರುತ್ತದೆ.

ಇನ್ನು 1.5 ಲಕ್ಷ ರೂ. ಹೂಡಿಕೆ ಮಾಡಿದರೆ ವಾರ್ಷಿಕವಾಗಿ ಶೇ.7.8ರಷ್ಟು ರಿಟರ್ನ್ಸ್ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಈ ವೇಳೆ ಪಿಪಿಎಫ್ ಹೂಡಿಕೆಯಿಂದ ಬಂದ ಆದಾಯದ ಮೇಲೆ ಯಾವುದೇ ರೀತಿಯಾದ ತೆರಿಗೆಯನ್ನು  ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ.

ನೀವು ಒಂದು ವೇಳೆ ಶೇ.30 ತೆರಿಗೆ ಮಿತಿಯಲ್ಲಿರುವಿರಾದರೂ ಕೂಡಾ ಶೇ.7.8ರಷ್ಟು ಸಂಪೂರ್ಣ ರಿಟರ್ನ್ಸ್ ಪಡೆದುಕೊಳ್ಳಬಹುದಾಗಿದೆ. ಪಿಪಿಎಫ್'ನಲ್ಲಿ ಹಣ ಹೂಡುವುದರಿಂದ ವಿನಾಯಿತಿಯೇ ವಿನಾಯಿತಿ (EEE- Exempt, Exempt, Exempt ಸವಲತ್ತು ).  ಅದು ಹೇಗೆ ಎಂದು ತಿಳಿಯೋಣ- 1.5 ಲಕ್ಷ ರು. ಹೂಡಿಕೆ ಮಾಡಿದಾಗ ಸೆಕ್ಷನ್ 80(ಸಿ) ಅಡಿಯಲ್ಲಿ ತೆರಿಗೆಯನ್ನು ಉಳಿಸಬಹುದು. ಬಳಿಕ, ಬಂದ ಲಾಭಾಂಶ/ಆದಾಯಕ್ಕೂ  ತೆರಿಗೆಯಿಂದ ವಿನಾಯಿತಿ! ಕೊನೆಗೆ, ಮೆಚುರಿಟಿ ಬಳಿಕ ಸಿಗುವ ಮೊತ್ತಕ್ಕೂ ತೆರಿಗೆ ವಿನಾಯಿತಿ!

ಪರ್ಯಾಯ ಹೂಡಿಕೆಯ ಅವಕಾಶಗಳು:

ಪಿಪಿಎಫ್'ನಂತಹ  ಪ್ರಯೋಜನಗಳಿರುವ ಕೆಲವೇ ಕೆಲ ಹೂಡಿಕೆ ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.  ಇತರೆ ಹೂಡಿಕೆ ವಿಧಾನಗಳಲ್ಲಿ ಒಂದೋ  ತೆರಿಗೆ ವಿನಾಯಿತಿ ಇರುವುದಿಲ್ಲ ಅಥವಾ ಪಿಪಿಎಫ್'ನಂತಹ ಸೌಲಭ್ಯಗಳಿಲ್ಲ.

ಇತರೆ ಹೂಡಿಕೆ ಅವಕಾಶಗಳು  ಮತ್ತು ಅವುಗಳ ವೈಶಿಷ್ಟ್ಯತೆಗಳು

ತೆರಿಗೆ ಉಳಿಸುವ ಫಿಕ್ಸೆಡ್ ಡೆಪಾಸಿಟ್'ಗಳು ಸುರಕ್ಷಿತವಾದ ಕಡೆ ಹಣ ಹೂಡುವವರಿಗೆ ಸೂಕ್ತ. ಪ್ರಸಕ್ತ ದಿನಗಳಲ್ಲಿ 5 ವರ್ಷ ಅವಧಿಯ ಎಫ್'ಡಿ ಖಾತೆಗಳಿಗೆ ಶೇ. 6.25ರಷ್ಟು  ಬಡ್ಡಿಯನ್ನು ನೀಡಲಾಗುತ್ತಿದೆ. ಆದರೆ ಇಲ್ಲಿ ಪಡೆದ ಲಾಭಾಂಶದ ಮೇಲೆ ತೆರಿಗೆ ಪಾವತಿಸಬೇಕು.  (ನೀವು ಶೇ.30 ಆದಾಯ ತೆರಿಗೆ ವ್ಯಾಪ್ತಿಯಲ್ಲಿರುವುದಾರೆ) ಶೇ.6.25ರಷ್ಟು ರಿಟರ್ನ್ಸ್ ಪಡೆದುಕೊಂಡರೆ ನಿಮ್ಮ ಕೈಗೆ ಬರುವುದು ಶೇ.4.38ರಷ್ಟು ಮಾತ್ರ. ಆದುದರಿಂದ ಪಿಪಿಎಫ್'ಗೆ ಹೋಲಿಸಿದಾಗ, ತೆರಿಗೆ ದೃಷ್ಟಿಯಿಂದ ಈ ವಿಧಾನವು ಬಹಳ ವ್ಯತಿರಿಕ್ತವಾಗಿದೆ.

ಹಣವನ್ನು ಹೂಡಿಕೆ ಮಾಡಲು ಇನ್ನೊಂದು ಸುರಕ್ಷಿತ ವಿಧಾನವೆಂದರೆ ಮ್ಯೂಚುವಲ್ ಫಂಡ್'ಗಳಲ್ಲಿ ಹೂಡಿಕೆ. ಇಲ್ಲಿ  ಯಾವುದೇ ತೆರಿಗೆ ವಿನಾಯಿತಿಯಿಲ್ಲದೇ ವಾರ್ಷಿಕವಾಗಿ ಶೇ.8ರಷ್ಟು  ರಿಟರ್ನ್ಸ್ ಪಡೆಯಬಹುದು. ದೀರ್ಘಾವಧಿಯ  (3 ವರ್ಷ ಅವಧಿ) ಬಂಡವಾಳ ಹೂಡಿಕೆಯ ಮೇಲೆ ಶೇ. 20ರಷ್ಟು ಸೂಚ್ಯಂಕದ ಲಾಭಾಂಶವನ್ನು ಪಡೆದುಕೊಳ್ಳಬಹುದಾಗಿದೆ.

ಹೂಡಿಕೆಯ ಸೂಚ್ಯಂಕದ ಮೇಲಿನ ಲಾಭಾಂಶವು ಗಮನಾರ್ಹವಾಗಿ  ಇಳಿಮುಖವಾಗುತ್ತದೆ.  ಇದರಲ್ಲಿ  ಬಂಡವಾಳವು ಯಾವುದೇ ರೀತಿಯಾದ ಹೆಚ್ಚಿನ ಪ್ರಮಾಣದ ರಿಟರ್ನ್ಸ್ ತಂದು ಕೊಡುತ್ತದೆ ಎನ್ನುವ ಬಗ್ಗೆ ಖಚಿತತೆ ಇರುವುದಿಲ್ಲ. ಆದ್ದರಿಂದ  ಪಿಪಿಎಫ್  ತೆರಿಗೆ ಲಾಭಾಂಶದ ಆಧಾರದಲ್ಲಿ  ಇತರೆ ಆಯ್ಕೆಗಳನ್ನು ಮೀರಿಸುತ್ತದೆ. ಅಲ್ಲದೆ ಹೆಚ್ಚಿನ ಭದ್ರತೆ ಹಾಗೂ  ರಿಟರ್ನ್ಸ್ ಗಳನ್ನೂ ಕೂಡ ತಂದು ಕೊಡುತ್ತದೆ.

ಇನ್ನು ಬೇರೆ ಬೇರೆ ರೀತಿಯ ಮ್ಯೂಚುವಲ್ ಫಂಡ್ ಹೂಡಿಕೆ ಅವಕಾಶಗಳನ್ನು ಗಮನಿಸುವುದಾದರೆ,  ಅದರಲ್ಲಿ ಆರ್ಬಿಟ್ರೇಜ್ ಬಂಡವಾಳ ವಿಧಾನವೂ ಕೂಡ ಒಂದಾಗಿದೆ.  ಇದರಲ್ಲಿ ವಾರ್ಷಿಕವಾಗಿ ಶೇ. 6ರಿಂದ 7ರಷ್ಟು ರಿಟರ್ನ್ಸ್ ಪಡೆದುಕೊಳ್ಳಬಹುದಾಗಿದೆ. ದೀರ್ಘಾವಧಿಗೆ ( 1 ವರ್ಷಕ್ಕಿಂತ ಹೆಚ್ಚು) ಹಣ ಹೂಡಿದರೆ ತೆರಿಗೆ-ಮುಕ್ತವಾಗಿರುತ್ತದೆ. ಆದರೆ ಇದಕ್ಕೆ  ಸೆಕ್ಷನ್ 80(ಸಿ) ಅನ್ವಯವಾಗುವುದಿಲ್ಲ.

ಬ್ಯಾಲೆನ್ಸ್ ಫಂಡ್ (MIPs) ನಲ್ಲಿ ಮೂರು ವರ್ಷಕ್ಕಿಂತ ಹೆಚ್ಚಿನ ಸಮಯದವರೆಗೆ  ಹಣವನ್ನು ಹೂಡಿದರೆ  ವಾರ್ಷಿಕವಾಗಿ ಶೇ. 8ರಿಂದ 10ರಷ್ಟು  ಪ್ರಮಾಣದಲ್ಲಿ  ಲಾಭಾಂಶ ಪಡೆದುಕೊಳ್ಳಬಹುದಾಗಿದೆ. ಆದರೆ ಇಲ್ಲಿ ಬರುವ ಆದಾಯವು ನಿಶ್ಚಿತವಲ್ಲ, ಹಾಗೂ ಸೆಕ್ಷನ್ 80(ಸಿ)ಯ ಸೌಲಭ್ಯದಿಂದ ಹೊರತಾಗಿರುತ್ತದೆ.

ಅಂತಿಮವಾಗಿ

ಒಂದು ವೇಳೆ ಬಡ್ಡಿದರವು  ಶೇ.7.8ಕ್ಕಿಂತಲೂ ಕಡಿಮೆ ಇದ್ದ ಸಂದರ್ಭದಲ್ಲಿಯೂ ಪಿಪಿಎಫ್'ಗೆ ಸರಿಸಾಟಿಯಿಲ್ಲ.  ಪಿಪಿಎಫ್ ಗೆ ಹೋಲಿಕೆ ಮಾಡಿದಾಗ ಇನ್ಯಾವುದೇ  ಹೂಡಿಕೆ ಆಯ್ಕೆಗಳು, ಭದ್ರತೆ ಮತ್ತು ರಿಟರ್ನ್ಸ್ ದೃಷ್ಟಿಯಿಂದಾಗಲಿ, ತೆರಿಗೆ ವಿನಾಯಿತಿ ಆಯಾಮದಿಂದಾಗಲಿ  ಸಾಟಿಯಲ್ಲ. ಪಿಪಿಎಫ್'ನಂತಹ ವಿಶಿಷ್ಟವಾದ ಆಯ್ಕೆಯು ಸುರಕ್ಷಿತವಾದ ಕಡೆ ಹಣ ಹೂಡಬಯಸುವವರಿಗೆ ಆಕರ್ಷಿಸುವುದು ಸಹಜ.

ಆಧಿಲ್ ಶೆಟ್ಟಿ, ಸಿಇಓ- ಬ್ಯಾಂಕ್ ಬಝಾರ್

[ಬ್ಯಾಂಕ್ ಬಜಾರ್ ಒಂದು ಆನ್’ಲೈನ್ ಮಾರುಕಟ್ಟೆ ತಾಣವಾಗಿದ್ದು, ಗ್ರಾಹಕರು  ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವಿಮೆಗಳನ್ನು  ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.]

click me!