ಶಿರಾಡಿಯಲ್ಲಿ ಇಂದಿನಿಂದ ಬಸ್‌ ಸಂಚಾರ : ಇನ್ನೂ ಇದೆ ಕೆಲ ಷರತ್ತು

By Web DeskFirst Published Oct 3, 2018, 9:56 AM IST
Highlights

ಶಿರಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿ 50 ದಿನಗಳ ಬಳಿಕ ಕೊನೆಗೂ ಬಸ್‌ ಸಂಚಾರಕ್ಕೆ ಮುಕ್ತವಾಗಿದೆ. ಬುಧವಾರದಿಂದಲೇ ಎಲ್ಲ ಬಗೆಯ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸಲು ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲಾಡಳಿತಗಳು ಹಸಿರು ನಿಶಾನೆ ತೋರಿವೆ. 

ಮಂಗಳೂರು :  ಮಂಗಳೂರು- ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿ 50 ದಿನಗಳ ಬಳಿಕ ಕೊನೆಗೂ ಬಸ್‌ ಸಂಚಾರಕ್ಕೆ ಮುಕ್ತವಾಗಿದೆ. ಬುಧವಾರದಿಂದಲೇ ಎಲ್ಲ ಬಗೆಯ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸಲು ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲಾಡಳಿತಗಳು ಹಸಿರು ನಿಶಾನೆ ತೋರಿವೆ. 

"

ಆದರೆ ಸರಕು ಸಾಗಾಟದ ವಾಹನಗಳ ಸಂಚಾರಕ್ಕೆ ನಿಷೇಧ ಮುಂದುವರಿದಿದೆ. ಎರಡು ವಾರಗಳ ಬಳಿಕ ಘನ (ದೊಡ್ಡ) ವಾಹನಗಳ ಸಂಚಾರ ಆರಂಭವಾಗುವ ಸಾಧ್ಯತೆಗಳಿವೆ. ಆ.14ರಿಂದ ಘಾಟಿಯ ಅಲ್ಲಲ್ಲಿ ಭೂಕುಸಿತ ಉಂಟಾಗಿ ವಾಹನ ಸಂಚಾರ ಸಂಪೂರ್ಣ ಬಂದ್‌ ಆಗಿತ್ತು. ಹೆದ್ದಾರಿ ಮೇಲೆ ಕುಸಿದ ಮಣ್ಣು ತೆರವು ಕಾರ್ಯಾಚರಣೆ ಕೆಲವೇ ದಿನಗಳಲ್ಲಿ ಮುಗಿದಿತ್ತು. ಆದರೆ ಕೆಂಪುಹೊಳೆ ಪಾಶ್ರ್ವದ ತಡೆಗೋಡೆ 12 ಕಡೆಗಳಲ್ಲಿ ಕುಸಿದು ಹೆದ್ದಾರಿ ಅಡಿಭಾಗದ ಮಣ್ಣು ನೀರುಪಾಲಾಗಿದ್ದರಿಂದ ಪುನರ್‌ ನಿರ್ಮಾಣ ಕೆಲಸ ವಿಳಂಬವಾಗಿತ್ತು.

ಈ ನಡುವೆ ಸಾರ್ವಜನಿಕರ ಒತ್ತಡ ಹೆಚ್ಚಿದ್ದರಿಂದ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಬಸ್‌ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ತಾತ್ಕಾಲಿಕವಾಗಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬಸ್‌ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

4 ಕಡೆ ಅಪಾಯ: ತಡೆಗೋಡೆ ಕುಸಿತವಾಗಿರುವ 12ರಲ್ಲಿ 8 ಕಡೆಗಳಲ್ಲಿ ಸಂಚಾರಕ್ಕೆ ಹೆಚ್ಚಿನ ಅಪಾಯವಿಲ್ಲ. ಅಪಾಯಕಾರಿ 4 ಪ್ರದೇಶಗಳಿದ್ದು, ಇಲ್ಲಿ ಭದ್ರತೆಗಾಗಿ ಪೊಲೀಸ್‌ ಸಿಬ್ಬಂದಿ ಇರುತ್ತಾರೆ. 2 ವಾರ ಬಳಿಕ ಘನ ವಾಹನ ಸಂಚಾರ:  ಮುಂದಿನ 2 ವಾರಗಳ ಕಾಲ ಸಂಚಾರ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಟ್ರಕ್‌ ಮುಂತಾದ ಘನ ವಾಹನಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ.

click me!