ತೃಪ್ತಿ ದೇಸಾಯಿ ಗಲಾಟೆ ನಡುವೆ ದೇವಸ್ವಂ ಮಂಡಳಿ ಕಠಿಣ ನಿರ್ಧಾರ

By Web DeskFirst Published Nov 16, 2018, 7:35 PM IST
Highlights

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಸಂಬಂಧ ವಿಚಾರ ಚರ್ಚೆಯಲ್ಲಿ ಇರುವಾಗಲೇ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದಕ್ಕೆ ಹೆಚ್ಚುವರಿ ಕಾಲಾವಕಾಶ ಕೋರಿ ಟ್ರಾವಂಕೂರು ದೇವಸ್ವಂ ಮಂಡಳಿ ಸುಪ್ರೀಂ ಗೆ ಮನವಿ ಮಾಡಲು ನಿರ್ಧರಿಸಿದೆ.

ಕೊಚ್ಚಿ[ನ.16]  ಟ್ರವಾಂಕೂರ್ ದೇವಸ್ವ ಮಂಡಳಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ನಿರ್ಧಾರ ತೆಗೆದುಕೊಂಡಿದೆ. ಸುಪ್ರೀಂ ತೀರ್ಪು ಜಾರಿಗೊಳಿಸಲು ಕಾಲಾವಕಾಶ ಕೋರಿ ಸೋಮವಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಿರುವ ದೇವಸ್ವ ಮಂಡಳಿ ತೀರ್ಮಾನ ಮಾಡಿದೆ.

ಶುಕ್ರವಾರ ನಡೆದ ದೇವಸ್ವ ಮಂಡಳಿ ಸಭೆಯಲ್ಲಿ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಸುಪ್ರೀಂ ಕೋರ್ಟ್ ತನ್ನ ತೀರ್ಪು ಮರುಪರುಶೀಲನೆಯ ವಿಚಾರಣೆಯನ್ನು ಜನವರಿ 22 ರಂದು ನಡೆಸಲಿದೆ. ಆದ್ರೆ ತೀರ್ಪು ಜಾರಿ ಮಾಡಲು ಕಾಲಾವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲು ಮಂಡಳಿ ನಿರ್ಧಾರ ಮಾಡಿದೆ.

"

ಶಬರಿಮಲೆ ಪ್ರವೇಶಕ್ಕೆ ಬಂದ ತೃಪ್ತಿ ದೇಸಾಯಿ ಯಾರು?

ಮೂಲಭೂತ ಸೌಲಭ್ಯ ವ್ಯವಸ್ಥೆ, ಮಹಿಳೆಯರಿಗೆ ಉಳಿದುಕೊಳ್ಳುವ ಸಮಸ್ಯೆ, ಭದ್ರತಾ ವ್ಯವಸ್ಥೆ ಕಲ್ಪಿಸಲು ಸಮಯಾವಕಾಶ ಬೇಕು ಎಂಬ ಅಂಶಗಳನ್ನಿಟ್ಟುಕೊಂಡು ಕಾಲಾವಕಾಶ ಬೇಕು ಈ ಕಾರಣದಿಂದ ಕಾಲಾವಕಾಶ ನೀಡಬೇಕು ಎಂಬುದು ಮಂಡಳಿ ಕೇಳಿಕೊಳ್ಳಲಿದೆ.

 

click me!