ಅಯೋಧ್ಯೆಯಲ್ಲಿ ಮಂದಿರ, ಲಖನೌದಲ್ಲಿ ಮಸೀದಿ

By Web DeskFirst Published Nov 4, 2018, 7:40 AM IST
Highlights

ಅಯೋಧ್ಯೆಯಲ್ಲಿ ಆದಷ್ಟು ಬೇಗ ರಾಮಮಂದಿರ ನಿರ್ಮಾಣ ಮಾಡಬೇಕು ಎಂಬ ಕೂಗು ತೀವ್ರಗೊಂಡಿರುವಾಗಲೇ, ಅಯೋಧ್ಯೆಯಲ್ಲಿ ರಾಮಮಂದಿರ ಹಾಗೂ ಲಖನೌದಲ್ಲಿ ಮಸೀದಿ ನಿರ್ಮಾಣವಾಗಲಿದೆ ಎಂದು ಬಿಜೆಪಿಯ ಮಾಜಿ ಸಂಸದರೂ ಆಗಿರುವ ರಾಮಜನ್ಮಭೂಮಿ ನ್ಯಾಸ ಅಧ್ಯಕ್ಷ ರಾಮ ವಿಲಾಸ್‌ ವೇದಾಂತಿ ಪ್ರಕಟಿಸಿದ್ದಾರೆ. 
 

ಲಖನೌ: ಅಯೋಧ್ಯೆಯಲ್ಲಿ ಆದಷ್ಟು ಬೇಗ ರಾಮಮಂದಿರ ನಿರ್ಮಾಣ ಮಾಡಬೇಕು ಎಂಬ ಕೂಗು ತೀವ್ರಗೊಂಡಿರುವಾಗಲೇ, ಅಯೋಧ್ಯೆಯಲ್ಲಿ ರಾಮಮಂದಿರ ಹಾಗೂ ಲಖನೌದಲ್ಲಿ ಮಸೀದಿ ನಿರ್ಮಾಣವಾಗಲಿದೆ. 

ಡಿಸೆಂಬರ್‌ನಲ್ಲೇ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಬಿಜೆಪಿಯ ಮಾಜಿ ಸಂಸದರೂ ಆಗಿರುವ ರಾಮಜನ್ಮಭೂಮಿ ನ್ಯಾಸ ಅಧ್ಯಕ್ಷ ರಾಮ ವಿಲಾಸ್‌ ವೇದಾಂತಿ ಪ್ರಕಟಿಸಿದ್ದಾರೆ. 

ಮಂದಿರ ಹಾಗೂ ಮಸೀದಿ ನಿರ್ಮಾಣಕ್ಕಾಗಿ ಯಾವುದೇ ಸುಗ್ರೀವಾಜ್ಞೆ ಹೊರಡಿಸುವುದಿಲ್ಲ. ಪರಸ್ಪರ ಸಮ್ಮತಿಯ ಮೇರೆಗೆ ಕಾಮಗಾರಿ ಆರಂಭಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ. 2019ರ ಲೋಕಸಭೆ ಚುನಾವಣೆಗೂ ಮುನ್ನ ಅಯೋಧ್ಯೆಯಲ್ಲಿ ರಾಮಮಂದಿರ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸೆಪ್ಟೆಂಬರ್‌ನಲ್ಲಿ ವೇದಾಂತಿ ಹೇಳಿದ್ದರು.

click me!