ಮೈಸೂರಿನಲ್ಲಿ ನಾಳೆ ರಾಗಿ ಮುದ್ದೆ , ಮೈಸೂರು ಪಾಕ್ ತಿನ್ನುವ ಸ್ಪರ್ಧೆ

By Web DeskFirst Published Oct 12, 2018, 10:18 PM IST
Highlights

ಅ.13ರ ಮಧ್ಯಾಹ್ನ 12ಕ್ಕೆ ನರಸರಾಜ ರಸ್ತೆಯ ಹಳೇ ಕೋರ್ಟ್ ಹತ್ತಿರುವ ಕೃಷ್ಣರಾಜ ಬೌಲೆವಾರ್ಡ್ ರಸ್ತೆಯಲ್ಲಿರುವ ಗಣಿ ಕಾಂಪ್ಲೆಕ್ಸ್ ನಲ್ಲಿ ಪುರುಷರಿಗೆ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಹಾಗೂ ಮಹಿಳೆಯರಿಗೆ ಮೈಸೂರು ಪಾಕ್ ತಿನ್ನುವ ಸ್ಪರ್ಧೆ ನಡೆಯಲಿದೆ.

ಮೈಸೂರು[ಅ.12]: ಜನನಿ ಟ್ರಸ್ಟ್‌ನಿಂದ ನಾಡಹಬ್ಬ ದಸರಾ ಮಹೋತ್ಸವದ ಹಾಗೂ 804ನೇ ಜಂಬೂಸವಾರಿ ಅಂಗವಾಗಿ ಮೈಸೂರಿನ ಜನತೆಗೆ ಈ ಕೆಳಕಂಡ ಸ್ಪರ್ಧೆ ಗಳನ್ನು ಏರ್ಪಡಿಸಿದ್ದು, ನಾಗರಿಕರು ಈ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್‌ನ ಅಧ್ಯಕ್ಷ ಡಾ. ಎಂ.ಕೆ. ಅಶೋಕ ತಿಳಿಸಿದ್ದಾರೆ. 

ಅ.13ರ ಮಧ್ಯಾಹ್ನ 12ಕ್ಕೆ ನರಸರಾಜ ರಸ್ತೆಯ ಹಳೇ ಕೋರ್ಟ್ ಹತ್ತಿರುವ ಕೃಷ್ಣರಾಜ ಬೌಲೆವಾರ್ಡ್ ರಸ್ತೆಯಲ್ಲಿರುವ ಗಣಿ ಕಾಂಪ್ಲೆಕ್ಸ್ ನಲ್ಲಿ ಪುರುಷರಿಗೆ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಹಾಗೂ ಮಹಿಳೆಯರಿಗೆ ಮೈಸೂರು ಪಾಕ್ ತಿನ್ನುವ ಸ್ಪರ್ಧೆ ನಡೆಯಲಿದೆ. ಯುವತಿಯರು ಮತ್ತು ಮಹಿಳೆಯರಿಗೆ 18ರಿಂದ 80 ವರ್ಷದವರಿಗೆ ದಸರಾ ನಾರಿ ಫ್ಯಾಷನ್ ಶೋ ನಡೆಯಲಿದೆ. ಅ.17ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು. 

ನಗರ ವ್ಯಾಪ್ತಿಯ ಮನೆಗಳಲ್ಲಿ ದಸರಾ ಅಂಗವಾಗಿ ಬೊಂಬೆ ಪ್ರದರ್ಶಿಸುವವರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಮನೆಗಳಲ್ಲಿ ಬೊಂಬೆ ಪ್ರದರ್ಶಿಸುವವರು ಅ.17ರೊಳಗೆ ಮನೆ ವಿಳಾಸ, ದೂರವಾಣಿ ಸಂಖ್ಯೆ ನೋಂದಾಯಿಸಿ ಕೊಳ್ಳುವುದು. ಕುಸ್ತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ನಾದೋಪಾಸನ ಕಪ್ ನೀಡಲಾಗುವುದು. ಅ.15ರೊಳಗೆ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಬಹುಮಾನ ಮತ್ತು ಪ್ರಶಸ್ತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಮೊ. 9141537956 ಸಂಪರ್ಕಿಸಿ.

ಈ ಸುದ್ದಿಯನ್ನು ಓದಿ: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ

click me!