ದಸರಾ ಆರಂಭಕ್ಕೂ ಮುನ್ನವೇ ಭುಗಿಲೆದ್ದ ಅಸಮಾಧಾನ

By Web DeskFirst Published Sep 14, 2018, 1:01 PM IST
Highlights

ಒಂದೆಡೆ ಅರಮನೆಯಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಈಗಾಗಲೇ ಭರ್ಜರಿ ತಯಾರಿಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಅಸಮಾಧಾನ ಭುಗಿಲೆದ್ದಿದೆ. ದಸರಾ ಮಹೋತ್ಸವದ ಪೋಸ್ಟರ್‌ನಲ್ಲಿ ತಮ್ಮ ಫೋಟೋ ಇಲ್ಲವೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಪುಟ್ಟರಂಗ ಶೆಟ್ಟಿ ಗರಂ ಆಗಿದ್ದಾರೆ. 

ಮೈಸೂರು, (ಸೆ.14): ಒಂದೆಡೆ ಅರಮನೆಯಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಈಗಾಗಲೇ ಭರ್ಜರಿ ತಯಾರಿಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಅಸಮಾಧಾನ ಭುಗಿಲೆದ್ದಿದೆ. ದಸರಾ ಮಹೋತ್ಸವದ ಪೋಸ್ಟರ್‌ನಲ್ಲಿ ತಮ್ಮ ಫೋಟೋ ಇಲ್ಲವೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಪುಟ್ಟರಂಗ ಶೆಟ್ಟಿ ಗರಂ ಆಗಿದ್ದಾರೆ. 

ಇದನ್ನು ಓದಿ: ಬರಹಗಾರ್ತಿ ಸುಧಾ ಮೂರ್ತಿಯಿಂದ ಈ ಬಾರಿ ದಸರಾ ಉದ್ಘಾಟನೆ

ದಸರಾ ಪೋಸ್ಟರ್‌ನಲ್ಲಿ ಸಚಿವ ಜಿ.ಟಿ. ದೇವೇಗೌಡ, ಸಾ.ರಾ ಮಹೇಶ್ ಹಾಗೂ ಜಯಮಾಲಾ ಫೋಟೋಗಳಿವೆ. ಆದರೆ, ನನ್ನ ಫೋಟೋ ಇಲ್ಲ. ಇದರಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಜಿಟಿಡಿ ಬಿಟ್ಟರೇ ನಾನೇ ಸೀನಿಯರ್ ಎಂದು ಪುಟ್ಟರಂಗ ಶೆಟ್ಟಿ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ದಸರಾ ಕಾರ್ಯಕಾರಿ ಸಮಿತಿ ಸಭೆಯಿಂದ ಹೊರ ನಡೆದಿದ್ದಾರೆ.

"

ಇದನ್ನು ಓದಿ: ಮೈಸೂರು ದಸರಾ: ಇತಿಹಾಸವನ್ನೇ ತಿರುಚಿದ ಅರಮನೆ ಮಂಡಳಿ!
 
ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ವಿದೇಶದಿಂದ ಬರಲಿ ಈ ಬಗ್ಗೆ ಹೇಳುತ್ತೇನೆ. ಇವತ್ತು ಸಂಜೆವರೆಗೂ ಶಿಷ್ಟಾಚಾರದ ಉಲ್ಲಂಘನೆ ತಿದ್ದುಪಡಿಗೆ ಗಡುವು ಕೊಟ್ಟಿದ್ದು, ಅದನ್ನು ಬದಲಾಯಿಸಿಕೊಳ್ಳದಿದ್ದರೆ ಆಮೇಲೆ ನೋಡಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನ ನೋಡುತ್ತಿದ್ದರೆ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಎದ್ದು ಕಾಣುತ್ತಿದೆ.

click me!