ಸಿದ್ದರಾಮಯ್ಯರನ್ನು ಕೆಳಗಿಳಿಸಲು ಹೆಚ್ಚಿದ ಒತ್ತಡ?

Jul 21, 2018, 12:37 PM IST

ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಸ್ಥಾನಕ್ಕೆ ಕುತ್ತು ಬಂದಿದೆ. ಅವರನ್ನು ಶಾಸಕಾಂಗ ಸ್ಥಾನದಿಂದ ಕೆಳಗಿಳಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಡಿಸಿಎಂ ಪರಮೇಶ್ವರ್ ಬಣದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸುವಂತೆ ಒತ್ತಡ ಹೆಚ್ಚಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಬಳಿ 3 ಸ್ಥಾನಗಳಿದ್ದು ಒಬ್ಬ ವ್ಯಕ್ತಿಗೆ ಮೂರು ಸ್ಥಾನ ನೀಡುವುದು ಸರಿಯಲ್ಲ ಅನ್ನೋದು ಡಿಸಿಎಂ ಬಣದ ವಾದ.