ಪುತ್ತೂರು ಘಟನೆ ವಿಡಿಯೋ ವೈರಲ್: ಮತ್ತೆ ಮೂವರ ಬಂಧನ

By Web DeskFirst Published Jul 5, 2019, 9:42 PM IST
Highlights

ಪುತ್ತೂರು ಗ್ಯಾಂಗ್ ರೇಪ್ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ 3 ಜನರನ್ನು ಬಂಧಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಮಾಡಿದ ಆರೋಪದ ಮೇಲೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರು[ಜು. 05]  ಪುತ್ತೂರು ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಆರೋಪ ಪ್ರಕರಣದಲ್ಲಿ  ವಿಡಿಯೋ ವೈರಲ್ ಮಾಡಿದ ಮೂವರನ್ನು ಬಂಧಿಸಲಾಗಿದೆ. ಶೌಕತ್ ಆಲಿ(34) ನಜೀರ್.ಡಿ(33) ಮತ್ತು ಜಾಬೀರ್(26) ಬಂಧಿತ ಆರೋಪಿಗಳು.

ಪುತ್ತೂರು ನಗರ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿದ್ದು  ಐವರು ಗ್ಯಾಂಗ್ ರೇಪ್ ಆರೋಪಿಗಳು ಮತ್ತು ವೈರಲ್ ಮಾಡಿದ 11 ಜನ ಸೇರಿ ಈವರೆಗೆ 16 ಮಂದಿ ಅರೆಸ್ಟ್ ಆಗಿದ್ದಾರೆ.

ಗುರುವಾರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ವಿಡಿಯೋ ವೈರಲ್ ಮಾಡಿದ ಆರೋಪದಲ್ಲಿ ಮುರಳೀಧರ (29), ಚಂದ್ರಶೇಖರ ಮಯ್ಯ( 47), ಶ್ರೇಯಾನ್ಸ್ ಎಸ್ (20), ಪೂವಪ್ಪ ಕೆ.(26), ಪವನ್ ಕುಮಾರ್ ಡಿ(19), ಮೋಹಿತ್‌ ಪಿ ಜಿ(18), ಧ್ಯಾನ್‌ ಎ ಎನ್‌ (18) ಅದ್ವಿತ್‌ ಕುಮಾರ್‌ ನಾಯ್ಕ್‌(19) ಬಂಧಿಸಿದ್ದರು.

ಪುತ್ತೂರು ಪ್ರಕರಣ: ಊವರು ವಿದ್ಯಾರ್ಥಿಗಳ ಬಂಧನ

ಓರ್ವ ಹುಡುಗಿ ಜೊತೆ 3 ರಿಂದ 4 ಮಂದಿ ಹುಡುಗರು ಆತ್ಮೀಯ ಕೃತ್ಯದಲ್ಲಿ ತೊಡಗಿರುವ ವೀಡಿಯೋ ಒಂದು ವಾಟ್ಸಾಪ್ ಮೂಲಕ ಪ್ರಸಾರ ಮಾಡಲಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಪೊಲೀಸರು ಸುವಮೋಟೊ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಉಲ್ಲೇಖಿತ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಬಾರದು ಅಥವಾ ಉಲ್ಲೇಖಿತ ವೀಡಿಯೊಗಳನ್ನು ಅವರ ಫೋನ್ ಕಂಪ್ಯೂಟರ್‌ಗಳಲ್ಲಿ ಉಳಿಸಬಾರದು ಎಂದು ನಾವು ಸಾರ್ವಜನಿಕರ ಸದಸ್ಯರನ್ನು ಕೋರುತ್ತೇವೆ, ಹಾಗೆ ಮಾಡುವುದು ಐಪಿಸಿಯ 354 ಸಿ ಮತ್ತು 66 ಇ, ಐಟಿ ಕಾಯ್ದೆಯ 66 ಎ ಮತ್ತು ವ್ಯಕ್ತಿಗಳು (ಗುಂಪು ನಿರ್ವಾಹಕರು ಸೇರಿದಂತೆ) ಅಡಿಯಲ್ಲಿ ಅಪರಾಧವಾಗಿದ್ದು ಬಂಧಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಎಸ್ ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದು ಸಾಮಾಜಿಕ ತಾಣಗಳ ಮೇಲೆ ಕಣ್ಣಿಟ್ಟಿದ್ದಾರೆ.

click me!