ಆಮೇಲೆ ಹೇಳಿಲ್ಲ ಅನ್ಬೇಡಿ: ಮನ್ ಕಿ ಬಾತ್ ಗೆ ಮೋದಿ ಆಹ್ವಾನ ಹೀಗಿತ್ತು!

By Web DeskFirst Published Feb 24, 2019, 12:10 PM IST
Highlights

2019ರ ಎರಡನೇ ಮನ್ ಕಿ ಬಾತ್ ಕಾರ್ಯಕ್ರಮ| ಪುಲ್ವಾಮಾ ವೀರರನ್ನು ನೆನೆದು ಗದ್ಗದಿತರಾದ ಪ್ರಧಾನಿ ಮೋದಿ| ಜನರ ಆಕ್ರೋಶದ ಅರಿವಿದೆ ಎಂದ ಪ್ರಧಾನಿ ಮೋದಿ| ನಾಳೆ ಅಮರ್ ಜವಾನ್ ಬಳಿ ದೇಶದ ಮೊದಲ ಯುದ್ಧ ಸ್ಮಾರಕ ಉದ್ಘಾಟನೆ|

ನವದೆಹಲಿ(ಫೆ.24): ಇಂದು ಪ್ರಧಾನಿ ನರೇಂದ್ರ ಮೋದಿ 2019ರ ಎರಡನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಡಿದರು.

ಮನ್ ಕಿ ಬಾತ್ ಆರಂಭದಲ್ಲೇ ಪುಲ್ವಾಮಾ ದಾಳಿ ಕುರಿತು ಉಲ್ಲೇಖಿಸಿದ ಪ್ರಧಾನಿ ಮೋದಿ, ಭಾರತಾಂಬೆ ತನ್ನ 44 ವೀರ ಪುತ್ರರನ್ನು ಕಳೆದುಕೊಂಡಿದ್ದಾಳೆ ಎಂದು ಗದ್ಗದಿತರಾದರು.

ಪುಲ್ವಾಮಾ ದಾಳಿಯಿಂದಾಗಿ ಇಡೀ ದೇಶದಲ್ಲಿ ಆಕ್ರೋಶ ಮಡುಗಟ್ಟಿದ್ದು, ತಾವು ಜನರ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಶಕ್ತರಿರುವುದಾಗಿ ಮೋದಿ ಹೇಳಿದರು.

PM Narendra Modi: 10 days ago, Mother India had to face loss of many of her brave sons. People across the nation are agonized and angry. There is a wave of support and condolence towards the martyrs & their families (file pic) pic.twitter.com/AlcnmfT8YP

— ANI (@ANI)

ಇನ್ನು ನಾಳೆ (ಫೆ.25) ನವದೆಹಲಿಯ ಅಮರ್ ಜವಾನ್ ಜ್ಯೋತಿ ಬಳಿ ಪ್ರಧಾನಿ ಮೋದಿ ದೇಶದ ಮೊದಲ ಯುದ್ಧ ಸ್ಮಾರಕ ಉದ್ಘಾಟಿಸುತ್ತಿದ್ದು,, ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವೀರ ಯೋಧರು ಸದಾ ಸ್ಮರಣೀಯರು ಎಂದು ಪ್ರಧಾನಿ ಹೇಳಿದರು.

Today’s is special! Do tune in at 11 AM.

Later on don’t say I didn’t tell you in advance :) pic.twitter.com/LT8N5Mkyev

— Narendra Modi (@narendramodi)

ಇದಕ್ಕೂ ಮೊದಲು ಮನ್ ಕಿ ಬಾತ್ ಕುರಿತು ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಇಂದು ಬೆಳಗ್ಗೆ 11 ಗಂಟೆಗೆ ಮನ್ ಕಿ ಬಾತ್ ಕಾರ್ಯಕ್ರಮವಿದ್ದು, ನಾನು ಹೇಳಿಲ್ಲ ಅಂತಾ ಮಾತ್ರ ಹೇಳ್ಬೇಡಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದು ವೈರಲ್ ಆಗಿದೆ.

click me!