ಎನ್‌ಟಿಆರ್‌ಗೆ ಮೋಸ ಮಾಡಿದ್ಯಾರು?: ಗುಂಟೂರಿನಲ್ಲಿ ಮೋದಿ ಗುಟುರು!

By Web DeskFirst Published Feb 10, 2019, 3:02 PM IST
Highlights

ಆಂಧ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಘರ್ಜನೆ| ಸಿಎಂ ಚಂದ್ರಬಾಬು ನಾಯ್ಡು ಚಳಿ ಬಿಡಿಸಿದ ಪ್ರಧಾನಿ ಮೋದಿ| ನಾಯ್ಡು ಮಾಜಿ ಸಿಎಂ ಎನ್‌ಟಿಆರ್‌ಗೆ ಮೋಸ ಮಾಡಿದ್ದಾರೆ ಎಂದ ಪ್ರಧಾನಿ| ಮೈತ್ರಿ ಬದಲಿಸುವಲ್ಲಿ ನಾಯ್ಡು ನಿಸ್ಸೀಮರು ಎಂದ ಮೋದಿ

ಗುಂಟೂರು(ಫೆ.10): ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮಾಜಿ ಸಿಎಂ ಎನ್‌ಟಿ ರಾಮರಾವ್ ಅವರ ಬೆನ್ನಿಗೆ ಚೂರಿ ಹಾಕಿದವರು ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ.

Prime Minister Narendra Modi in Guntur, Andhra Pradesh: Central government has chosen Amaravati as 'Heritage City' under the National Heritage City Development and Augmentation Yojana (HRIDAY) so that the places of mythological importance here can be preserved. pic.twitter.com/KFnu9XkCfb

— ANI (@ANI)

ಗುಂಟೂರಿನಲ್ಲಿ ಇಂದು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಎನ್‌ಟಿಆರ್ ಆಂಧ್ರವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಟಿಡಿಪಿ ಸ್ಥಾಪಿಸಿದ್ದರು, ಆದರೆ ಅವರ ಅಳಿಯ ಚಂದ್ರಬಾಬು ನಾಯ್ಡು ಪದೇ ಪದೇ ಮೈತ್ರಿ ಬದಲಿಸುತ್ತಾ ಎನ್‌ಟಿಆರ್ ಅವರ ಕನಸನ್ನು ನುಚ್ಚು ನೂರು ಮಾಡಿದ್ದಾರೆ ಎಂದು ಹರಿಹಾಯ್ದರು.

PM Modi in AP: Unhone (Chandrababu Naidu) Andhra Pradesh ke sun rise ka waada kiya tha, lekin apne ‘son’ ko hi rise karane main jutt gaye hain, unhone Andhra ke gareebon ke liye nayi yojnaein chalane ka wada kiya tha, lekin Modi ki yojanaon par hi apna sticker laga diya hai. pic.twitter.com/gZKntjqf0B

— ANI (@ANI)

ರಾಜ್ಯದ ಅಭಿವೃದ್ಧಿಗೆ ನೀಡಿದ್ದ ಭರವಸೆಗಳ ವಿಚಾರದಲ್ಲಿ ಚಂದ್ರಬಾಬು ನಾಯ್ಡು ಯೂಟರ್ನ್ ಹೊಡೆದಿದ್ದಾರೆ ಎಂದು ಆರೋಪಿಸಿದ ಮೋದಿ, ಮೈತ್ರಿ ಬದಲಾಯಿಸುವುದರಲ್ಲಿ ನಾಯ್ಡು ನಿಸ್ಸೀಮರು ಎಂದು ಕಿಚಾಯಿಸಿದರು.

PM in Guntur on Andhra Pradesh CM Chandrababu Naidu: Aap senior hain dal badalne mein,aap senior hain naye naye dalon se gathbandhan karne mein. Aap senior hain apne khudh ke sasur ke peeth mein churra bhokne mein.Aap senior hain ek chunaav ke baad dusre chunaav mein haarne mein pic.twitter.com/xbmPTrL1QE

— ANI (@ANI)
click me!