ಸಾಲಮನ್ನಾ ರಾಜಕೀಯ ಅಸ್ತ್ರ, ಮೋದಿ ಬಾಯಲ್ಲಿ ಕರ್ನಾಟಕ

By Web DeskFirst Published Feb 7, 2019, 10:17 PM IST
Highlights

ಈಗಿನ ಕೇಂದ್ರ ಸರ್ಕಾರದ ಕೊನೆ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದ್ದಾರೆ. ಈ ವೇಳೆ ಕರ್ನಾಟಕ ಮೈತ್ರಿ ಸರ್ಕಾರವನ್ನು ಎಳೆದುತಂದಿದ್ದಾರೆ. ಹಾಗಾದ್ರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೆ ಮೋದಿ ಏನು ಹೇಳಿದ್ರು..? 

ನವದೆಹಲಿ, [ಫೆ.07]: ಪ್ರಸಕ್ತ ಎನ್​ಡಿಎ ಸರ್ಕಾರದ ಕೊನೆಯ ಸಂಸತ್​ ಅಧಿವೇಶನದಲ್ಲಿ ಇಂದು [ಗುರುವಾರ] ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ವಿರುದ್ಧ ಘರ್ಜಿಸಿದರು.

ತಮ್ಮ ಭಾಷಣದ ವೇಳೆ ರೈತರ ಸಾಲಮನ್ನಾ ಬಗ್ಗೆ ಪ್ರಸ್ತಾಪಿಸಿದ ಮೋದಿ, 'ರೈತರ ಸಾಲಮನ್ನಾ ಎನ್ನುವುದು ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗಿದೆ. ಆದ್ರೆ ಇದುವರೆಗೂ ಇದು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಇದಕ್ಕೆ ಕರ್ನಾಟಕವೇ ಅತ್ಯುತ್ತಮ ಉದಾಹರಣೆ' ಎಂದು ಕಿಡಿಕಾರಿದರು.

ರಾಜಕೀಯ ಪಕ್ಷಗಳು ರೈತರ ಸಾಲಮನ್ನಾ ವಿಷಯವನ್ನು ಚುನಾವಣೆ ಆಸ್ತ್ರವನ್ನಾಗಿ ಮಾಡಿಕೊಂಡಿವೆ. ಎಷ್ಟು ರಾಜ್ಯಗಳನ್ನು ಇದನ್ನು ಅನುಷ್ಠಾನಕ್ಕೆ ತಂದಿವೆ ಎಂದು ಹೇಳಿ.  ಕರ್ನಾಟಕವೇ ನಮಗೆಲ್ಲರಿಗೂ ಸಾಕ್ಷಿ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 

 ಕರ್ನಾಟಕದಲ್ಲಿ 43 ಲಕ್ಷ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಆದ್ರೆ ಸಾಲಮನ್ನಾ ಘೋಷಿಸಿದರು ಇದುವರೆಗೂ 5 ಸಾವಿರ ರೈತರ ಸಾಲಮನ್ನಾ ಆಗಿಲ್ಲ. ಅಂದರೆ ಘೋಷಣೆ ಮಾಡಿದಷ್ಟು ಸುಲಭವಾಗಿ ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ ಎಂದು ಚಾಟಿ ಬೀಸಿದರು.

click me!