ಪಾಕ್ ಪ್ರಧಾನಿ ಚೀನಾ ಭೇಟಿ ವೇಳೆ ಬೆಗ್ಗಿಂಗ್‌ ವಿವಾದ!

By Web DeskFirst Published Nov 8, 2018, 9:40 AM IST
Highlights

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇದೀಗ ಸದಾ ವಿವಾದಕ್ಕೆ ಕಾರಣರಾಗುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಇದೀಗ ವಿಶ್ವದ ಮುಂದೆ ಸಯಾಹ ಕೋರುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಮಾಧ್ಯಮ ಬೆಗ್ಗಿಂಗ್ ವಿವಾದವೊಂದನ್ನ ಹುಟ್ಟುಹಾಕಿದೆ.
 

ಲಾಹೋರ್(ನ.08):  ದುಡ್ಡಿಲ್ಲ ಸ್ವಾಮಿ ದುಡ್ಡು ಕೊಡಿ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಚೀನಾಕ್ಕೆ ಅಂಗಲಾಚುತ್ತಿದ್ದರೆ, ಇತ್ತ ಅವರ ದೇಶದ ಸರ್ಕಾರಿ ಸ್ವಾಮ್ಯದ ಪಿಟಿವಿ ದೊಡ್ಡ ಎಡವಟ್ಟು ಮಾಡಿಕೊಂಡಿದೆ. ಇಮ್ರಾನ್‌ನ ಚೀನಾ ಭೇಟಿಯ ದೃಶ್ಯ ತೋರಿಸುವ ವೇಳೆ ಸುದ್ದಿಯ ಡೇಟ್‌ಲೈನ್‌ ಅನ್ನು ಬೀಜಿಂಗ್‌ ಎಂದು ಪ್ರಸಾರಿಸುವ ಬದಲು ಬೆಗ್ಗಿಂಗ್‌ ಎಂದು ತೋರಿಸಿದೆ. 

 

Top left corner of screen. pic.twitter.com/1Ot5xwEsRj

— Gul Bukhari (@GulBukhari)

 

ಮೊದಲೇ ಪಾಕ್‌ ಸರ್ಕಾರ ಹಣ ಇಲ್ಲದೇ ಒದ್ದಾಡುತ್ತಿರುವ ಸಂದರ್ಭದಲ್ಲಿ ಪ್ರಸಾರವಾದ ಈ ದೃಶ್ಯ ವಿಪಕ್ಷಗಳಿಂದ ವ್ಯಂಗ್ಯಕ್ಕೆ ಗುರಿಯಾಗಿದೆ. ಈ ಎಡವಟ್ಟು ಗೊತ್ತಾಗುತ್ತಲೇ ಟೀವಿ ಕ್ಷಮೆ ಯಾಚಿಸಿದೆ. ಜೊತೆಗೆ ಪಿಟಿವಿ ವ್ಯವಸ್ಥಾಪಕ ನಿರ್ದೇಶಕರನ್ನೇ ಬದಲಾಯಿಸಲಾಗಿದೆ.

click me!