ಭಾರತೀಯರಿಗೆ ಗುಡ್ ನ್ಯೂಸ್ ನೀಡಿದ ಪಾಕಿಸ್ತಾನ

By Web DeskFirst Published Aug 13, 2018, 5:54 PM IST
Highlights

ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ  418 ಮೀನುಗಾರರನ್ನು ಒಳಗೊಂಡು 470 ಭಾರತೀಯರು ಸೆರೆವಾಸ ಅನುಭವಿಸುತ್ತಿದ್ದಾರೆ

ಇಸ್ಲಾಮಾಬಾದ್[ಆ.13]: ಆಗಸ್ಟ್ 14 ರಂದು ಪಾಕಿಸ್ತಾನ ಸರ್ಕಾರ ಭಾರತೀಯರಿಗೆ ಶುಭ ಸುದ್ದಿ ನೀಡಲು ಹೊರಟಿದೆ. ಸನ್ನಡತೆ ಆಧಾರದ ಮೇಲೆ 27 ಮೀನುಗಾರರು ಒಳಗೊಂಡು 30 ಭಾರತೀಯ  ಖೈದಿಗಳನ್ನು ಸೆರೆವಾಸದಿಂದ ಮುಕ್ತಗೊಳಿಸುತ್ತಿದೆ.

ಮಾನವೀಯ ಸಮಸ್ಯೆಗಳನ್ನು ರಾಜಕೀಯಗೊಳಿಸದಿರುವ ಪಾಕಿಸ್ತಾನದ ಸ್ಥಿರ ನೀತಿಗೆ ಅನುಗುಣವಾಗಿರುವ ಸಲುವಾಗಿ ಸೆರೆವಾಸದಲ್ಲಿರುವ ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ವಿದೇಶಾಂಗ ಕಚೇರಿಯ ವಕ್ತಾರರಾದ ಮೊಹಮದ್ ಫೈಸಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ಸರ್ಕಾರದಿಂದಲೂ ಇದೇ ರೀತಿಯ ನಿರ್ಧಾರ ಹೊರಬರುವ ಭರವಸೆಯಲ್ಲಿರುವುದಾಗಿ ತಿಳಿಸಿದ ಅವರು, ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ  418 ಮೀನುಗಾರರನ್ನು ಒಳಗೊಂಡು 470 ಭಾರತೀಯರು ಸೆರೆವಾಸ ಅನುಭವಿಸುತ್ತಿದ್ದಾರೆ'ಎಂದಿದ್ದಾರೆ.

ನಿನ್ನೆಯೂ ಕೂಡ ಅತಿಕ್ರಮವಾಗಿ ಪ್ರವೇಶಿಸಿದ ಓರ್ವ ಭಾರತೀಯ ಮೀನುಗಾರನೊಬ್ಬನನ್ನು ಬಂಧಿಸಿರುವ ಪಾಕ್ ಸರ್ಕಾರ ಕರಾಚಿಯಿಂದ ಲಾಹೋರ್ ಜೈಲಿಗೆ ಸ್ಥಳಾಂತರಿಸಲಾಗಿತ್ತು. ತದ ನಂತರ ವಾಘ ಗಡಿಯಲ್ಲಿ ಭಾರತೀಯ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಯಿತು. ಎರಡೂ ದೇಶಗಳಲ್ಲೂ ಅತಿಕ್ರಮವಾಗಿ ಪ್ರವೇಶಿಸಿದ ಹಲವು ಮೀನುಗಾರರು ಅಧಿಕೃತ ದಾಖಲೆಗಳಿಲ್ಲದ ಕಾರಣ ತಮ್ಮ ಮಾತೃ ದೇಶಕ್ಕೆ ವಾಪಸ್ ಬರಲು ತಡೆಯಾಗುತ್ತದೆ. ಎರಡೂ ದೇಶಗಳ ಸ್ವಯಂ ಸೇವಾ ಸಂಘಟನೆಗಳು ಈ ವಿಷಯವನ್ನು ಆಗಾಗ ಪ್ರಸ್ತಾಪಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

click me!