ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಪದಚ್ಯುತಿಗೆ ಪ್ರಸ್ತಾಪ

First Published Apr 21, 2018, 7:28 AM IST
Highlights

ಭಾರತದ ಇತಿಹಾಸದಲ್ಲೇ ಇದೇ ಮೊತ್ತ ಮೊದಲ ಬಾರಿಗೆ ಭಾರತದ ಮುಖ್ಯ ನ್ಯಾಯಾಧೀಶರ ವಿರುದ್ಧ ‘ಮಹಾಭಿಯೋಗ’ (ವಾಗ್ದಂಡನೆ) ನಿಲುವಳಿ ಮಂಡಿಸಲು ತೀರ್ಮಾನಿಸಿರುವ ಕಾಂಗ್ರೆಸ್ ಹಾಗೂ ಇತರ 6 ಪ್ರತಿಪಕ್ಷಗಳು, ಈ ಸಂಬಂಧ ರಾಜ್ಯಸಭೆ ಸಭಾಪತಿಗಳಿಗೆ ಶುಕ್ರವಾರ ನೋಟಿಸ್ ನೀಡಿದೆ.

ನವದೆಹಲಿ: ಭಾರತದ ಇತಿಹಾಸದಲ್ಲೇ ಇದೇ ಮೊತ್ತ ಮೊದಲ ಬಾರಿಗೆ ಭಾರತದ ಮುಖ್ಯ ನ್ಯಾಯಾಧೀಶರ ವಿರುದ್ಧ ‘ಮಹಾಭಿಯೋಗ’ (ವಾಗ್ದಂಡನೆ) ನಿಲುವಳಿ ಮಂಡಿಸಲು ತೀರ್ಮಾನಿಸಿರುವ ಕಾಂಗ್ರೆಸ್ ಹಾಗೂ ಇತರ 6 ಪ್ರತಿಪಕ್ಷಗಳು, ಈ ಸಂಬಂಧ ರಾಜ್ಯಸಭೆ ಸಭಾಪತಿಗಳಿಗೆ ಶುಕ್ರವಾರ ನೋಟಿಸ್ ನೀಡಿದೆ.

ನ್ಯಾ| ದೀಪಕ್ ಮಿಶ್ರಾ ವಿರುದ್ಧ 5 ಆರೋಪ ಹೊರಿಸಿರುವ ವಿಪಕ್ಷಗಳು, ಅವರ ವಿರುದ್ಧ ‘ದುರ್ನಡತೆ’ ಹಾಗೂ ‘ಅಧಿಕಾರ ದುರ್ಬಳಕೆ’ ಆರೋಪ ಹೊರಿಸಿವೆ. ಇದರೊಂದಿಗೆ ನ್ಯಾಯಾಂಗ ಹಾಗೂ ರಾಜಕೀಯ ಪಕ್ಷಗಳ ನಡುವೆ ಇದೇ ಮೊದಲ ಬಾರಿಗೆ ಕಂಡು ಕೇಳರಿಯದ ಸಂಘರ್ಷ ತಲೆದೋ

ರುವ ಸಾಧ್ಯತೆ ಇದೆ. ಗ್ಯಾಂಗ್‌ಸ್ಟರ್ ಸೊಹ್ರಾಬುದ್ದೀನ್ ಶೇಖ್ ಅನುಮಾನಾಸ್ಪದ ಎನ್ ಕೌಂಟರ್ ಪ್ರಕರಣದ ನ್ಯಾಯಾಧೀಶ ಬಿ.ಎಚ್. ಲೋಯಾ ಸಾವಿನ ತನಿಖೆಗೆ ಆದೇಶಿಸಲು ನ್ಯಾ| ಮಿಶ್ರಾ ನಿರಾಕರಿಸಿದ ಬೆನ್ನಲ್ಲೇ ವಾಗ್ದಂಡನೆಗೆ ಕಾಂಗ್ರೆಸ್ ಮುಂದಾಗಿದೆ.

click me!