ದೇಶದಲ್ಲಿ ಕೊರೋನಾಗೆ ಭಾನುವಾರ 3ನೇ ಸಾವು, ಒಟ್ಟು ಸಾವಿನ ಸಂಖ್ಯೆ 8ಕ್ಕೇರಿಕೆ

By Suvarna NewsFirst Published Mar 22, 2020, 5:24 PM IST
Highlights

ಭಾರತದಲ್ಲಿ ಮತ್ತೊಂದು ಕೊರೋನಾ ವೈರಸ್‌ಗೆ ಬಲಿಯಾಗಿದ್ದು, ಇವತ್ತು ಅಂದ್ರೆ ಭಾನುವಾರ ಒಂದೇ ದಿನದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ನವದೆಹಲಿ, (ಮಾ.22): ಭಾರದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಗುಜರಾತ್‌ನಲ್ಲಿ ವ್ಯಕ್ತಿಯೊರ್ವ ವೈರಸ್ ನಿಂದ ಸಾವನ್ನಪ್ಪಿದ್ದು, ಇದರಂತೆ ದೇಶದಲ್ಲಿ ಕೊರೋನಾ ವೈರಸ್'ಗೆ ಈ ವರೆಗೂ 8 ಮಂದಿ ಬಲಿಯಾದಂತಾಗಿದೆ.

ಗುಜರಾತ್‌ನ ಸೂರತ್‌ನಲ್ಲಿ ಈ ಸಾವು ಸಂಭವಿಸಿದೆ ಎಂದು ವರದಿಯಾಗಿದೆ.  ಮತ್ತೊಂದು ಆಘಾತಕಾರಿ ವಿಷಯ ಅಂದ್ರೆ ಭಾನುವಾರ ಒಂದೇ ದಿನ 3 ಸಾವಾಗಿದೆ. 

ಕೊರೋನಾಗೆ ನಟಿಯಿಂದ ಸೆಕ್ಸ್ ಮೆಡಿಸಿನ್, ಕರ್ನಾಟಕದ 9 ಜಿಲ್ಲೆ ಲಾಕ್‌ಡೌನ್; ಮಾ.22ರ ಟಾಪ್ 10 ಸುದ್ದಿ!

ಭಾನುವಾರ ಬೆಳಗ್ಗೆಯಷ್ಟೇ ಮೊದಲು ಮುಂಬೈನಲ್ಲಿ 56 ವರ್ಷದ ಓರ್ವ ಮಹಿಳೆ ಸಾವನ್ನಪ್ಪಿದ್ದಳು. ನಂತರ ಎರಡನೇಯದ್ದಾಗಿ ಬಿಹಾರದ ಪಾಟ್ನಾದಲ್ಲಿ 38 ವರ್ಷದ ಯುವಕನೊಬ್ಬ ಬಲಿಯಾಗಿದ್ರೆ, ಇದೀಗ ಗುಜರಾತ್ ಸೂರತ್‌ನಲ್ಲಿ 69 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ.
 
ಈ ಮೂಲಕ ದೇಶದಲ್ಲಿ ಓರ್ವ ವಿದೇಶಿ ವ್ಯಕ್ತಿ ಸೇರಿದಂತೆ ಕೊರೋನಾಗೆ ಬಲಿಯಾದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

One positive patient, male 69 yrs, died today in Surat hospital. He was having co-morbid conditions. One female, 65 years, died in Vadodara hospital but her test report for COVID is awaited. She was also having comorbid conditions: Health & Family Welfare Dept, Gujarat pic.twitter.com/ewXKn1TUbK

— ANI (@ANI)

ಇನ್ನು ಕೊರೋನಾ ಸೋಂಕಿತರ ಸಂಖ್ಯೆಯಲ್ಲೂ ಸಹ ಹಂತ-ಹಂತವಾಗಿ ಏರಿಕೆಯಾಗುತ್ತಿದ್ದು. ಸದ್ಯದ ಮಾಹಿತಿ ಪ್ರಕಾರಣ 341ಗೆ ಏರಿಕೆಯಾಗಿದೆ.

click me!