ಸೆ.16ರಿಂದ 18ರವರೆಗೆ ಮಳೆ : ಎಲ್ಲೆಲ್ಲಿ?

By Web DeskFirst Published Sep 15, 2018, 8:55 AM IST
Highlights

ಸೆ. 16 ರಿಂದ  18 ರ ವರೆಗೆ ರಾಜ್ಯಾದ ಹಲವು ಪ್ರದೇಶಗಳಲ್ಲಿ  ಮಳೆಯಾಗುವ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 
 

ಬೆಂಗಳೂರು: ಸೆ. 16 ರಿಂದ  18 ರ ವರೆಗೆ ರಾಜ್ಯಾದ್ಯಂತ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಬೆಂಗಳೂರು ನಗರದಲ್ಲಿ ವಾರಾಂತ್ಯದವರೆಗೂ ಮಳೆ ಸುರಿಯಲಿದೆ. ಕರಾವಳಿ ಪ್ರದೇಶದಲ್ಲಿ ಕಡಿಮೆ ಪ್ರಮಾಣದ ಮಳೆಯಾಗಲಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ. ಸಾಧಾರಣ ಪ್ರಮಾಣದಲ್ಲಿ ಮಳೆಯಾಗಲಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದರು. 

ದಕ್ಷಿಣ ಒಳನಾಡು ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಳೆದೊಂದು ವಾರದಿಂದಲೇ ತುಂತುರು, ಸಾಧಾರಣ (1.5 ಸೆಂ.ಮೀ.ನಿಂದ 6.4 ಸೆಂ.ಮೀ.)ಮಳೆಯಾಗುತ್ತಿದೆ. ಶುಕ್ರವಾರ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ6  ಸೆಂ. ಮೀ., ಹೆಸರಘಟ್ಟದಲ್ಲಿ 5, ಆನೇಕಲ್, ಹೊಸಕೋಟೆ, ಬೆಂಗಳೂರು ನಗರದಲ್ಲಿ ತಲಾ 3, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 1 ಸೆಂ. ಮೀ. ಮಳೆ ದಾಖಲಾಗಿದೆ ಎಂದು ತಿಳಿಸಿದೆ.

click me!