ಎಣ್ಣೆ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಕೊಟ್ರು ಸಿಎಂ ಕುಮಾರಸ್ವಾಮಿ..!

By Web DeskFirst Published Nov 2, 2018, 6:50 PM IST
Highlights

ಇನ್ಮುಂದೆ ಎಣ್ಣೆ ಕುಡಿಯಲು ಬಾರ್‌ಗೆ ಹೋಗ್ಬೇಕಿಲ್ಲ. ಮನೆ ಬಾಗಿಲಿಗೇ ಬರುತ್ತೆ ಎಂದು ಖುಷಿಯಲ್ಲಿದ್ದ ಎಣ್ಣೆ ಪ್ರಿಯರಿಗೆ ಸಿಎಂ ಕುಮಾರಸ್ವಾಮಿ ಶಾಕ್ ನಿರಾಸೆ ಮೂಡಿಸಿದ್ದಾರೆ. ಏನದು? ಇಲ್ಲಿದೆ ವಿವರ.

ಬೆಂಗಳೂರು, (ನ.02): ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಆನ್‌ಲೈನ್ ಮದ್ಯ ಮಾರಾಟ ಇಲ್ಲ  ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇಂದು [ಶುಕ್ರವಾರ] ಕಡ್ಡಿ ಮುರಿದಂತೆ ಖಡಕ್ ಆಗಿಯೇ ಹೇಳಿದರು.

ರಾಜ್ಯದಲ್ಲಿ ಆನ್‌ಲೈನ್ ಮಧ್ಯ ಮಾರಾಟಕ್ಕೆ ಸಂಬಂಧಿಸಿದ ಕಡತವನ್ನು ತರುವಂತೆ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ. ತಕ್ಷಣವೇ ಆನ್‌ಲೈನ್ ಮದ್ಯ ಮಾರಾಟವನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. 

ಎಣ್ಣೆ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ

ಆನ್‌ಲೈನ್ ಮದ್ಯ ಮಾರಾಟವನ್ನು ಅಧಿಕಾರಿಗಳು ಜಾರಿಗೊಳಿಸಿದ್ದಾರೆ . ಇದು ನನ್ನ ಗಮನಕ್ಕೆ ಬರುತ್ತಿದ್ದಂತೆಯೇ ಅದನ್ನು ನಿಲ್ಲಿಸಲು ಸೂಚನೆ ನೀಡಿದ್ದೇನೆ, ಯಾವ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

 ಕರ್ನಾಟಕ ಸರ್ಕಾರ ಆನ್ ಲೈನ್ ಮದ್ಯ ಮಾರಾಟ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿತ್ತು. ಅಷ್ಟೇ ಅಲ್ಲದೇ ಸಂಬಂಪಟ್ಟ ಇಲಾಖೆ ಅಧಿಕಾರಿಗಳು ಇದಕ್ಕೆ ಭರ್ಜರಿ ತಯಾರಿ ಸಹ ನೀಡಿದ್ದರು. 

ಆದ್ರೆ, ಕುಮಾರಸ್ವಾಮಿ ಅವರ ಈ ನಿರ್ಧಾರದಿಂದ ಕೆಲ ಕುಡುಕರಿಗೆ ಕೊಂಚ ನಿರಾಸೆ ಮೂಡಿಸಿದಂತೂ ಸತ್ಯ.

click me!