ಚೀನಾದಲ್ಲಿ ಮಕ್ಕಳಿಲ್ಲದವರಿಗೆ ಮಾತೃತ್ವ ತೆರಿಗೆ..?

By Web DeskFirst Published Aug 18, 2018, 11:17 AM IST
Highlights

ಮಕ್ಕಳಿಲ್ಲದವರು ಅಥವಾ ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವವರಿಗೆ ಮಾತೃತ್ವ ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಚೀನಾದ ಎರಡು ಶೈಕ್ಷಣಿಕ ಸಂಸ್ಥೆಗಳು ಸರ್ಕಾರದ ಮುಂದಿಟ್ಟಿವೆ. ಈ ವಿವಾದಿತ ಪ್ರಸ್ತಾವನೆ ಚೀನಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 

ಬೀಜಿಂಗ್[ಆ.18]: ಹಿಂದೊಮ್ಮೆ ಜನಸಂಖ್ಯೆ ನಿಯಂತ್ರಣಕ್ಕೆ ಒಂದೇ ಮಗು ನೀತಿಯನ್ನು ಜಾರಿಗೆ ತಂದಿದ್ದ ಚೀನಾದಲ್ಲಿ ಅದೇ ವಿಷಯ ಇದೀಗ ಅಸಮತೋಲನಕ್ಕೆ ಕಾರಣವಾಗಿದೆ. ಅಂದರೆ ವೃದ್ಧರ ಸಂಖ್ಯೆ ಹೆಚ್ಚಳವಾದರೆ, ಯುವಸಮೂಹದ ಸಂಖ್ಯೆ ಕಡಿಮೆಯಾಗಿದೆ. 

ಈ ಹಿನ್ನೆಲೆಯಲ್ಲಿ ಮಕ್ಕಳಿಲ್ಲದವರು ಅಥವಾ ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವವರಿಗೆ ಮಾತೃತ್ವ ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಚೀನಾದ ಎರಡು ಶೈಕ್ಷಣಿಕ ಸಂಸ್ಥೆಗಳು ಸರ್ಕಾರದ ಮುಂದಿಟ್ಟಿವೆ. ಈ ವಿವಾದಿತ ಪ್ರಸ್ತಾವನೆ ಚೀನಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವ ಚೀನಾ 2016ರಲ್ಲಿ ಒಂದು ಮಕ್ಕಳ ನೀತಿಯನ್ನು ರದ್ದುಗೊಳಿಸಿತ್ತು. ಆದರೆ ಜೀವನವೆಚ್ಚ ನಿರ್ವಹಿಸಲಾಗದ ಕಾರಣ ಜನ ಒಂದಕ್ಕಿಂತ ಹೆಚ್ಚು ಮಕ್ಕಳ ನೀತಿ ಜಾರಿಗೊಳಿಸಿತ್ತು.

click me!