ಮಂಡ್ಯ ಲೋಕಸಭೆಗೆ ನಿಖಿಲ್-ಪ್ರಜ್ವಲ್ ನಡುವೆ ಫೈಟ್?

By Web DeskFirst Published Oct 6, 2018, 6:31 PM IST
Highlights

ಬಳ್ಳಾರಿ, ಶಿವಮೊಗ್ಗ ಹಾಗೂ ಮಂಡ್ಯ ಲೋಕಸಭಾ ಉಪಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ರಾಜ್ಯ ರಾಜಕೀಯ ಗರಿಗೆದರಿದೆ.

ಬೆಂಗಳೂರು, [ಅ.06]: ರಾಜ್ಯದ ಮೂರು ಲೋಕಸಭಾ ಉಪ ಚುನಾವಣೆಗೆ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆ ಗರಿಗೇದರಿದೆ. 

ಬಳ್ಳಾರಿ, ಶಿವಮೊಗ್ಗ ಹಾಗೂ ಮಂಡ್ಯ ಲೋಕಸಭಾ ಉಪಚುನಾವಣೆ ಇದೇ ನವೆಂಬರ್ 3ರಂದು ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಹೊರಬೀಳಲಿದೆ. 

ಮಂಡ್ಯ ಕ್ಷೇತ್ರಕ್ಕೆ ಯಾರು?: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮೈತ್ರಿ ಸರ್ಕಾರ ಇರುವುದರಿಂದ ಲೋಕಸಭಾ ಚುನಾವಣೆಗೂ ತಮ್ಮ ಮೈತ್ರಿ ಮುಂದುವರಿಸಲಿದ್ದಾರೆ. ಸಿ.ಎಸ್ ಪುಟ್ಟರಾಜು ಅವರಿಂದ ತೆರವಾದ ಸ್ಥಾನಕ್ಕೆ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್​, ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರು ಕೇಳಿಬರತ್ತಿವೆ. 

ಆದರೆ, ಸ್ಥಳೀಯರಿಗೆ ಅವಕಾಶ ನೀಡಲು  ಜೆಡಿಎಸ್​​ ಅಭಿಪ್ರಾಯವಾಗಿದ್ದು, ಅಂತಿಮವಾಗಿ ದೇವೇಗೌಡ ಅವರು ಯಾವ ನಿರ್ಧಾರವನ್ನು ತೆಗೆದುಕೊಳ್ಳತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಬಿಜೆಪಿ ಅಭ್ಯರ್ಥಿಯ ಹೆಸರು ಇನ್ನು ಗುಟ್ಟಾಗಿಯೇ ಉಳಿದಿದೆ.

ರಾಮನಗರ, ಜಮಖಂಡಿ ವಿಧಾನಸಭಾ ಉಪಚುನಾವಣೆಗೆ ದಿನಾಂಕ ನಿಗದಿ

ಶಿವಮೊಗ್ಗ ಅಭ್ಯರ್ಥಿಗಳು ಯಾರು-ಯಾರು?: ಶಿವಮೊಗ್ಗ ಕ್ಷೇತ್ರಕ್ಕಾಗಿ ಮೈತ್ರಿಕೂಟದ ಮಧ್ಯೆ ತಿಕ್ಕಾಟ ನಡೆದಿದ್ದು, ಅಂತಿಮವಾಗಿ ಶಿವಮೊಗ್ಗ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡವ ಸಾಧ್ಯತೆಗಳಿವೆ.   ಕಾಂಗ್ರೆಸ್ ನಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಥವಾ ಮಂಜುನಾಥ ಭಂಡಾರಿ ಹೆಸರು ಕೇಳಿಬಂದಿದೆ. ಬಿಜೆಪಿಯಿಂದ ಬಿ.ವೈ ರಾಘವೇಂದ್ರ ಕಣಕ್ಕಿಳಿಯುವುದು ಗ್ಯಾರಂಟಿ.

ಬಳ್ಳಾರಿ ಲೋಕಸಭೆ ಯಾರು ಯಾರು?: ಶ್ರೀರಾಮುಲು ಅವರಿಂದ ತೆರವಾದ ಸ್ಥಾನಕ್ಕೆ ಬಿಜೆಪಿಯಿಂದ ಬಳ್ಳಾರಿ ಲೋಕಸಭಾದಿಂದ ಮಾಜಿ ಶಾಸಕ ಸುರೇಶ್ ಬಾಬು, ಎನ್.ವೈ. ಹನುಮಂತ ಹಾಗೂ ಜೆ. ಶಾಂತಾ ನಡುವೆ ಪೈಪೋಟಿ ನಡೆದಿದೆ. 

ಆದರೆ, ಜೆ. ಶಾಂತಾಗೆ ಟಿಕೆಟ್ ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್ ನಿಂದ  ಕಾಂಗ್ರೆಸ್​​ನಿಂದ ಶಾಸಕ ಬಿ. ನಾಗೇಂದ್ರ ಸಹೋದರ ಪ್ರಸಾದ್ ಹಾಗೂ ಎನ್.ವೈ. ಹನುಮಂತಪ್ಪ  ನಡುವೆ ಪೈಪೋಟಿ ನಡೆದಿದೆ.

click me!