ಇಂದಿನಿಂದ 23 ಸರಕು ಸೇವೆಗಳು ಭರ್ಜರಿ ಅಗ್ಗ

By Web DeskFirst Published Jan 1, 2019, 9:16 AM IST
Highlights

ಕೇಂದ್ರ ಸರ್ಕಾರ ಹೊಸ ವರ್ಷಕ್ಕೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. 23 ಸರಕು ಸೇವೆಗಳ ದರ ಜನವರಿ 1 ರಿಂದ ಅಗ್ಗವಾಗಲಿದೆ. 

ನವದೆಹಲಿ: ಜಿಎಸ್ಟಿಮಂಡಳಿ ಇತ್ತೀಚೆಗೆ ಘೋಷಿಸಿದ್ದ 23 ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಇಳಿಕೆ ಹೊಸ ವರ್ಷದ ಮೊದಲ ದಿನವಾದ ಜ.1ರಿಂದ ಜಾರಿಗೆ ಬರಲಿದೆ. ಹೀಗಾಗಿ 32 ಇಂಚಿನವರೆಗಿನ ಟೀವಿ, ಕಂಪ್ಯೂಟರ್‌ ಮಾನಿಟರ್‌, ಸಿನಿಮಾ ಟಿಕೆಟ್‌, ಡಿಜಿಟಲ್‌ ಕ್ಯಾಮೆರಾ, ಸರಕು ಸಾಗಣೆ ವಾಹನಗಳ ವಿಮಾ ಪ್ರೀಮಿಯಂ ಸೇರಿದಂತೆ ಸಾಮಾನ್ಯ ಬಳಕೆಯ ವಸ್ತುಗಳು ಅಗ್ಗವಾಗಲಿವೆ.

ಕಳೆದ ಡಿ.22ರಂದು ಸಭೆ ಸೇರಿದ್ದ ಜಿಎಸ್‌ಟಿ ಮಂಡಳಿ ದರ ಇಳಿಕೆಗೆ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರದಿಂದಾಗಿ ಶೇ.28 ತೆರಿಗೆ ದರ ಹೊಂದಿರುವ ವಸ್ತುಗಳ ಸಂಖ್ಯೆ ಸದ್ಯ 28ಕ್ಕೆ ಇಳಿಕೆಯಾಗಿದೆ. 2017ರ ಜು.1ರಂದು ಜಿಎಸ್‌ಟಿ ಜಾರಿಯಾದಾಗ ಶೇ.28ರ ತೆರಿಗೆ ವ್ಯಾಪ್ತಿಯಲ್ಲಿ 226 ಸರಕುಗಳು ಇದ್ದವು.

ಇವೆಲ್ಲಾ ಅಗ್ಗ: ಕಂಪ್ಯೂಟರ್‌ ಮಾನಿಟರ್‌, ಟೀವಿ, ಲೀಥಿಯಂ ಅಯಾನ್‌ ಬ್ಯಾಟರಿಗಳ ಪವರ್‌ ಬ್ಯಾಂಕ್‌, ಡಿಜಿಟಲ್‌ ಕ್ಯಾಮೆರಾ, ವಿಡಿಯೋ ರೆಕಾರ್ಡರ್‌, ಪುಲ್ಲಿಗಳು, ಟ್ರಾನ್ಸ್‌ಮಿಷನ್‌ ಶಾಫ್ಟ್‌$್ಸ, ಕ್ರಾಂಕ್ಸ್‌ ಹಾಗೂ ಗೇರ್‌ ಬಾಕ್ಸ್‌, ನ್ಯೂನತೆ ಹೊಂದಿರುವ ವ್ಯಕ್ತಿಗಳ ಸಾಗಣೆಗೆ ಬಳಸುವ ಬಿಡಿಭಾಗಗಳು, ನೈಸರ್ಗಿಕ ಬಿರಡೆ (ಕಾರ್ಕ್) ಪದಾರ್ಥ, ಮಾರ್ಬಲ್‌ ರಬಲ್‌, ನೈಸರ್ಗಿಕ ಕಾರ್ಕ್, ವಾಕಿಂಗ್‌ ಸ್ಟಿಕ್‌, ಸಿನೆಮಾ ಟಿಕೆಟ್‌, ಸರಕು ಸಾಗಣೆ ವಾಹನಗಳ ಮೇಲಿನ ಥರ್ಡ್‌ ಪಾರ್ಟಿ ಇನ್ಶೂರೆನ್ಸ್‌ ಪ್ರೀಮಿಯಂ ಮೊದಲಾದವುಗಳು.

click me!