ಕ್ರೈಸ್ತರ ಗುರು ಪೋಪ್‌ಗೆ ಭಗವದ್ಗೀತೆ ಉಡುಗೊರೆ!

By Web DeskFirst Published Oct 14, 2019, 9:59 AM IST
Highlights

ಕೇರಳ ಕ್ರೈಸ್ತ ಸನ್ಯಾಸಿನಿ ತ್ರೇಸಿಯಾಗೆ ಸಂತ ಪದವಿ| ಕ್ರೈಸ್ತ ರ ಗುರು ಪೋಪ್‌ಗೆ ಭಗವದ್ಗೀತೆ ಉಡುಗೊರೆ

ವ್ಯಾಟಿಕನ್ ಸಿಟಿ[ಅ.14]: ವ್ಯಾಟಿಕನ್ ಸಿಟಿಯಲ್ಲಿ ನಡೆದ ಕಾರ‌್ಯಕ್ರಮದಲ್ಲಿ ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ. ಮುರ ಳೀಧರನ್ ಅವರು ಭಾಗವಹಿಸಿದ್ದಾರೆ.

ಈ ವೇಳೆ ಕ್ರೈಸ್ತರ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ಅವರಿಗೆ ಹಿಂದು ಗಳ ಪವಿತ್ರ ಗ್ರಂಥ ಭಗವದ್ಗೀತೆ ಪುಸ್ತಕ ಮತ್ತು ದೇವರ ಪಲ್ಲಕ್ಕಿ ಹೊತ್ತ ಆನೆ ಪುತ್ಥಳಿ ನೀಡಿ ಗೌರವ ಸಲ್ಲಿಸಿದರು.

Met His Holiness this morning. Presented ‘Bhagavad Gita According to Gandhi’ and ‘Caparisoned Elephant’ of Kerala temple festivals reflecting India’s age old traditions. Also met HE Paul R. Gallagher. pic.twitter.com/f6TFJP1GUA

— V. Muraleedharan (@MOS_MEA)

ಕೇರಳ ಕ್ರೈಸ್ತ ಸನ್ಯಾಸಿನಿ ತ್ರೇಸಿಯಾಗೆ ಸಂತ ಪದವಿ

ಕ್ರೈಸ್ತರ ಧರ್ಮಗುರು ಪೋಪ್ ಫ್ರಾನ್ಸಿಸ್, ಭಾರತದ ಕ್ರೈಸ್ತ ಸನ್ಯಾಸಿನಿ ಮಾರಿಯಂ ತ್ರೇಸಿಯಾ ಸೇರಿ ಇತರ ನಾಲ್ವರನ್ನು ‘ಸಂತರು’ ಎಂದು ಭಾನುವಾರ ಘೋಷಿಸಿದರು.

ಸಂತ ಪದವಿ ಕ್ರೈಸ್ತರ ಅತ್ಯುಚ್ಚ ಪದವಿ ಯಾಗಿದ್ದು, ಭಾರತದ ಕ್ರೈಸ್ತ ಸನ್ಯಾಸಿನಿಗೆ ಒಲಿದಿದೆ. ಕೇರಳದ ಕ್ರೈಸ್ತ ಸನ್ಯಾಸಿಯಾಗಿದ್ದ ತ್ರೇಸಿಯಾರಿಗೆ ನೀಡಿರುವ ಸಂತ ಪದವಿಯು ಮರಣೋತ್ತರ ಪದವಿಯಾಗಿದೆ.

click me!