ತಂದೆ ಆತ್ಮ ಹೊರಹಾಕಲು ತಾಯಿ ಕೊಂದ ಮಾಡೆಲ್!

By Web DeskFirst Published Oct 7, 2018, 4:09 PM IST
Highlights

ಅಮಲಿನಲ್ಲಿ ತಾಯಿಯನ್ನು ಕೊಂದ ಮಾಡೆಲ್! ತಾಯಿಯೊಳಗೆ ತಂದೆ ಆತ್ಮ ಹೊಕ್ಕಿತ್ತಂತೆ! ತಂದೆ ಆತ್ಮ ಹೊರಹಾಕಲು ತಾಯಿ ಕೊಂದ ಮಾಡೆಲ್! ತಾಯಿ ಕೊಂದು ಬಂಧಿತನಾದ ಮಾಡೆಲ್ ಲಕ್ಷ್ಯ ಸಿಂಗ್ 
 

ಮುಂಬೈ(ಅ.7): ಹೆತ್ತ ತಾಯಿಯನ್ನು ಹತ್ಯೆ ಮಾಡಿದ ಆರೋಪ ಮೇಲೆ ಮಾಡೆಲ್ ಓರ್ವನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮಾಡೆಲ್ ಲಕ್ಷ್ಯ ಸಿಂಗ್ ಎಂದು ಗುರುತಿಸಲಾಗಿದ್ದು, ಶನಿವಾರ ತನ್ನ ಫ್ಯಾಷನ್ ಡಿಸೈನರ್ ತಾಯಿ ಸುನಿತಾ ಸಿಂಗ್ ಅವರನ್ನು ಹತ್ಯೆ ಮಾಡಿದ್ದಾನೆ.

ಸುನಿತಾ ಅವರ ತಲೆ ಮತ್ತು ಬೆನ್ನಿನ ಮೇಲೆ ಹಲವು ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ವೇಳೆ ಹತ್ಯೆಗೆ ವಿಚಿತ್ರ ಕಾರಣ ನೀಡಿರುವ ಆರೋಪಿ, ತಾಯಿಯನ್ನು ಹತ್ಯೆ ಮಾಡುವುದು ತನ್ನ ಉದ್ದೇಶವಾಗಿರಲಿಲ್ಲ, ಬದಲಿಗೆ ತಾಯಿಯೊಳಗೆ ಹೊಕ್ಕಿದ್ದ ತಂದೆಯ ಆತ್ಮ ಹೊರ ಹಾಕುವುದು ಉದ್ದೇಶವಾಗಿತ್ತು ಎಂದು ತಿಳಿಸಿದ್ದಾನೆ.

Mumbai: Police arrest model Lakshya Lathar for allegedly murdering his fashion designer mother, Sunita Singh yesterday. Police says,"Sunita was found dead with multiple injuries on her back and head.A case has been registered under section 304 (2) of IPC. Investigation underway." pic.twitter.com/aRkTqKMdTs

— ANI (@ANI)

ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ಲಕ್ಷ್ಯ ಸಿಂಗ್ ಮಾದಕ ದ್ರವ್ಯ ಸೇವಿಸಿದ್ದು, ಆತನೊಂದಿಗೆ ಹಲವು ಗೆಳೆಯರು ಜೊತೆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!