'ಏನ್ರೀ ತಪ್ಪು, ಯಾವ್ ಮಹಿಳೆಗೂ ಅವಮಾನ ಮಾಡಿಲ್ಲ, CM ಯಾಕೆ ಕ್ಷಮೆ ಕೇಳ್ಬೇಕು'

By Web DeskFirst Published Nov 19, 2018, 6:33 PM IST
Highlights

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿನ್ನೆ [ಭಾನುವಾರ] ರೈತ ಮಹಿಳೆ ಬಗ್ಗೆ ಅಸಂಬದ್ಧ ಹೇಳಿಕೆಗೆ ಸಚಿವ ಎಚ್.ರಿ. ರೇವಣ್ಣ ಗರಂ ಆಗಿ ಪ್ರತಿಕ್ರಿಯಿಸಿದ್ದು ಹೀಗೆ.


ಬೆಂಗಳೂರು,[ನ.19]: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿನ್ನೆ [ಭಾನುವಾರ] ರೈತ ಮಹಿಳೆ ಬಗ್ಗೆ ನೀಡಿದ್ದ ಅಸಂಬದ್ಧ ಹೇಳಿಕೆಯನ್ನ ಸಚಿವ ಎಚ್.ರಿ. ರೇವಣ್ಣ ಸಮರ್ಥಿಸಿಕೊಂಡಿದ್ದಾರೆ.

ಇದು ನಾಲ್ಕು ಕ್ಷೇತ್ರದಲ್ಲಿ ಸೋತ ಬಿಜೆಪಿ ಷಡ್ಯಂತ್ರ. ಮಹಿಳೆಗೆ ತಾಯಿ ಅಂತ ಪದ ಬಳಸಿದ ಮೇಲೆ ಸಿಎಂ ಮಾತಾಡಿದ್ದು, ಅದನ್ನ ತಿರುಚಲಾಗಿದೆ. ಸಿಎಂ ಯಾಕೆ ಕ್ಷಮೆ ಕೇಳ್ಬೇಕು?ಯಾವ್ ಮಹಿಳೆಗೂ ಸಿಎಂ ಅವಮಾನ ಮಾಡಿಲ್ಲ. ಬಿಜೆಪಿಗೆ ಮಾನ ಮರ್ಯಾದೆ ಇದ್ರೆ, ರೈತರ ಬಗ್ಗೆ ಕೇಂದ್ರ ಸರ್ಕಾರ ಮುಂದೆ ಹೋಗಿ ಕೇಳಲಿ ಎಂದು ಗರಂ ಆಗಿಯೇ ಪ್ರತಿಕ್ರಯಿಸಿದರು.

ಅತ್ತ ರೈತರ ಆಕ್ರೋಶ ಕೊತ ಕೊತ ಕುದಿತ್ತಿದ್ರೆ, ಇತ್ತ ದೇವೇಗೌಡ ಕುಟುಂಬದ ಆಕ್ರೋಶ ಕಟ್ಟೆ ಒಡೆಯಿತು.

ಚಾನಲ್ ಗಳಲ್ಲಿ ಬೆಳೆಗ್ಗೆಯಿಂದ ಹಾಕ್ಕೊಂಡು ಕುಟ್ರಿ. ಯಾರಿಗೂ ಹೆದರಿಕೊಳ್ಳಲ್ಲ ಎಂದು ಮಾಧ್ಯಮದವರ ಮೇಲೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು. 

ಇನ್ನು ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರ ಮಾತನಾಡಿದ ಅವರು,  ನನಗೆ ಮಾಹಿತಿ ಇಲ್ಲ. ಹಾಗೇನೂ ಆಗಿಲ್ಲ. ಬಂದಿದ್ರಲ್ಲಾ ಸಚಿವ ಸಂಪುಟ ಸಭೆಗೆ ಎಂದರು.

ನನ್ನ ಬಳಿ ಯಾವುದೇ ಸಕ್ಕರೆ ಕಾರ್ಖಾನೆ ಇಲ್ಲ. ಇದ್ದಿದ್ರೆ ಫ್ರೀ ಆಗಿ ಬರ್ಕೊಡ್ತಿದ್ದೆ. ಯಾವ ಲೀಡರ್ ಗಳ ಕಾರ್ಖಾನೆ ದುಡ್ಡು ಬಾಕಿ ಉಳ್ದಿಲ್ಲ. ಹಾಗೇನಾದ್ರು ಇದ್ರೆ ನಾಳೆ ಚರ್ಚೆ ಮಾಡಿ ಬಾಕಿ ಹಣ ವಾಪಸ್ ಕೊಡಿಸ್ತೀವಿ ಎಂದರು.

click me!