ಬೆಳಗಾವಿ ಮೇಲೆ ಕರ್ನಾಟಕಕ್ಕೆ ಹಕ್ಕೆ ಇಲ್ವಂತೆ! ಮತ್ತೆ ಕ್ಯಾತೆ ತೆಗೆದ ಎಂಇಎಸ್‌

By Web DeskFirst Published Dec 10, 2018, 5:02 PM IST
Highlights

ಬೆಳಗಾವಿಯಲ್ಲಿ ಕನ್ನಡದ ಪರ ಯಾವುದಾದರೂ ಕಾರ್ಯಕ್ರಮ ನಡೆದರೆ ಮಹಾರಾಷ್ಟ್ರ ಏಕೀಕರಣ ಸಮಿತಿ[ಎಂಇಎಸ್‌] ಉದ್ಧಟತನ ಮೆರೆಯುವುದನ್ನು ಮಾತ್ರ ಬಿಡುವುದಿಲ್ಲ. ಗಡಿನಾಡಲ್ಲಿ ಒಂದೆಲ್ಲಾ ಒಂದು ಆವಾಂತರ ಮಾಡಲು ಪ್ರಯತ್ನ ಮಾಡುತ್ತಲೇ ಇರುತ್ತದೆ. ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆಯೂ ಎಂಇಎಸ್‌ ಪುಂಡಾಟಿಕೆ ಮೆರೆದಿದೆ.

ಬೆಳಗಾವಿ [ಡಿ.10]  ‘ಮಹಾರಾಷ್ಟ್ರದ ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರ ಚಳಿಗಾಲದ ಅಧಿವೇಶನ ನಡೆಸುತ್ತಿರುವುದು ಅನಧಿಕೃತ’ ಹೀಗೆಂದು ಉದ್ಧಟತನದ ಹೇಳಿಕೆ ನೀಡಿ ಮಹಾರಾಷ್ಟ್ರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಧನಂಜಯ ಮುಂಡೆ ಕನ್ನಡಿಗರ ಭಾವನೆ ಕೆರಳಿಸಿದ್ದಾರೆ.

ಬೆಳಗಾವಿಯ ಟಿಳಕವಾಡಿ ಪ್ರದೇಶದಲ್ಲಿ ಚಳಿಗಾಲದ ಅಧಿವೇಶನ ವಿರೋಧಿಸಿ ಪರ್ಯಾಯವಾಗಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವ್ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಳಗಾವಿ ಮಹಾರಾಷ್ಟ್ರದ್ದು. ಇಲ್ಲಿ ಅಧಿವೇಶನ ನಡೆಸಲು ಅನುಮತಿ ನೀಡಿಲ್ಲ. ನಾವು ನಮ್ಮ ಹಕ್ಕಿಗಾಗಿ ಸಮಾವೇಶ ನಡೆಸಿದರೆ ಅದು ಅನಧಿಕೃತ ಎಂದು ಹೇಳುವ ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ಎಂದು ಹೇಳಿ, ದೂರದ ಹಲಗಾ ಬಸ್ತವಾಡ ಗ್ರಾಮದಲ್ಲಿ ನಡೆಸುತ್ತಿರುವುದು ಅನಧಿಕೃತವಾಗಿದೆ ಎಂದು ಆರೋಪಿಸಿದರು.

ಅನಂತ್‌ಕುಮಾರ್‌ ಕೊಟ್ಟ ಆ 5 ಸಾವಿರ ರೂಪಾಯಿ, ಡಿಕೆಶಿ ಹೇಳಿದ ಕತೆ

ಗಡಿ ವಿಷಯವಾಗಿ ಮಹಾರಾಷ್ಟ್ರ ಸಿಎಂ ಜೊತೆಗೆ ಚರ್ಚಿಸಿ, ನಂತರ ದೆಹಲಿಗೆ ತೆರಳಿ ವಕೀಲರೊಂದಿಗೆ ಚರ್ಚಿಸೋಣ ಎಂದು ಹೇಳಿದರು. ಕೊಲ್ಹಾಪುರ ಶಿವಸೇನಾ ಅಧ್ಯಕ್ಷ ವಿಜಯ ಧಮನೆ ಮಾತನಾಡಿ, ನ.1 ರಂದು ಆಯೋಜಿಸುವ ಕರಾಳ ದಿನಾಚರಣೆ ವೇಳೆ ಪ್ರತಿಯೊಬ್ಬ ಮರಾಠಿಗ ಬಂದೂಕು ಹಿಡಿದುಕೊಂಡು ಬನ್ನಿ, ಈ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡೋಣ ಎಂದು ವಿಷಬೀಜ ಬಿತ್ತುವ ಮಾತನ್ನಾಡಿದರು.

ಮೇಳಾವ್ ಮಾಡಿ ಮರ್ಯಾದೆ ತೆಗೆಸಿಕೊಂಡ ಎಂಇಎಸ್


 

click me!