ಪಾಕ್‌ನಿಂದ ಬಂದ ಗೀತಾಗೆ ಮದುವೆ: ಸುಷ್ಮಾ ನೇತೃತ್ವದಲ್ಲಿ ವರನ ಹುಡುಕಾಟ

First Published Apr 21, 2018, 7:17 AM IST
Highlights

ದಶಕಗಳ ಹಿಂದೆ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಹೋಗಿ, ಬಳಿಕ ಅಲ್ಲೇ 15 ವರ್ಷ ಕಳೆದು, 2 ವರ್ಷಗಳ ಹಿಂದೆ ಮರಳಿದ್ದ ಕಿವುಡು ಮತ್ತು ಮೂಗ ಅನಾಥ ಯುವತಿ ಗೀತಾಗೆ ಇದೀಗ ವಿವಾಹದ ಸಂಭ್ರಮ.

ನವದೆಹಲಿ: ದಶಕಗಳ ಹಿಂದೆ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಹೋಗಿ, ಬಳಿಕ ಅಲ್ಲೇ 15 ವರ್ಷ ಕಳೆದು, 2 ವರ್ಷಗಳ ಹಿಂದೆ ಮರಳಿದ್ದ ಕಿವುಡು ಮತ್ತು ಮೂಗ ಅನಾಥ ಯುವತಿ ಗೀತಾಗೆ ಇದೀಗ ವಿವಾಹದ ಸಂಭ್ರಮ. ವಿಶೇಷವೆಂದರೆ ಆಕೆಗೆ ಮದುವೆ ಮಾಡಿಸಲು ಮುಂದೆ ನಿಂತು ವ್ಯವಸ್ಥೆ ಮಾಡಿಕೊಡುತ್ತಿರುವುದು ಸ್ವತಃ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌.

ಗೀತಾ ಭಾರತಕ್ಕೆ ಬಂದಾಗಿನಿಂದಲೂ ಆಕೆಯ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಿರುವ ಸಚಿವೆ ಸುಷ್ಮಾ, ಇದೀಗ ವಧೂ-ವರರ ಕೇಂದ್ರದ ನೆರವಿನ ಮೂಲಕ ಅರ್ಹ ಮೂಗ- ಕಿವುಡ ವರನ ಹುಡುಕಾಟ ನಡೆಸಿದ್ದಾರೆ. ಇತ್ತೀಚೆಗೆ ಇಂಥದ್ದೇ ಒಬ್ಬ ಹುಡುಗ ಸಿಕ್ಕಿದ್ದು, ಆತನನ್ನು ಸುಷ್ಮಾ ತಮ್ಮ ದೆಹಲಿ ನಿವಾಸಕ್ಕೆ ಕರೆಸಿಕೊಂಡು ಮಾತನಾಡಿದ್ದಾರೆ.

ಆದರೆ ಈ ಪ್ರಸ್ತಾವವನ್ನು ಗೀತಾ ತಿರಸ್ಕರಿಸಿದ್ದಾಳೆ. ಹೀಗಾಗಿ ಅರ್ಹ ವರನಿಗಾಗಿ ಹುಡುಕಾಟ ಮುಂದುವರೆದಿದ್ದು, ಇದೀಗ ಯೋಧ, ಎಂಜಿನಿಯರ್‌, ಜ್ಯೋತಿಷಿ, ರೈತರು ಸೇರಿ ಹಲವರಿಂದ ಪ್ರಸ್ತಾಪ ಬಂದಿದೆ. ಇವರೆಲ್ಲಾರಿಗೂ ನೀವು ಗೀತಾಳನ್ನೇ ಏಕೆ ಮದುವೆಯಾಗ ಬಯಸಿದ್ದೀರಿ ಎಂಬದೂ ಸೇರಿ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪೈಕಿ ಯಾರಾದರೂ ಅರ್ಹ ವರ ಸಿಕ್ಕಿದರೆ ಶೀಘ್ರವೇ ವಿವಾಹ ನೆರವೇರಲಿದೆ.

click me!