ಕಿಚ್ಚನ ಫ್ಯಾನ್ಸ್‌ನಿಂದ ಬೆದರಿಕೆ, ಶೀಘ್ರದಲ್ಲಿ ಪೆಟ್ರೋಲ್ ಬೆಲೆ ಏರಿಕೆ; ಫೆ.29ರ ಟಾಪ್ 10 ಸುದ್ದಿ!

By Suvarna News  |  First Published Feb 29, 2020, 4:53 PM IST

ಕರ್ನಾಟಕ ರಾಜಕಾರಣದಲ್ಲಿ ಸ್ವಾಮೀಜಿಗಳ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಆನ್ನೋ ಆರೋಪದ ಬೆನ್ನಲ್ಲೇ ಮತ್ತೊರ್ವ ಸ್ವಾಮೀಜಿ 10 ಶಾಸಕರ ರಾಜೀನಾಮೆ ವಾರ್ನಿಂಗ್ ನೀಡಿದ್ದಾರೆ. ಟ್ರಂಪ್ ಭಾರತದ ಭೇಟಿಗೆ 13 ಕೋಟಿ ಖರ್ಚು ಮಾಡಲಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವನಿತೆಯರು ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ. ಕಿಚ್ಚ ಸುದೀಪ್ ಅಭಿಮಾನಿಗಳಿಂದ ಅಧ್ಯಕ್ಷನಿಗೆ ಬೆದರಿಕೆ, ಪೆಟ್ರೋಲ್ ಬೆಲೆ ಏರಿಕೆ ಸೇರಿದಂತೆ ಫೆಬ್ರವರಿ 29ರ ಟಾಪ್ 10 ಸುದ್ದಿ ಇಲ್ಲಿವೆ. 


‘ಮಂತ್ರಿಸ್ಥಾನ ಕೊಡದಿದ್ರೆ 10 ಬಿಜೆಪಿ ಶಾಸಕರ ರಾಜೀನಾಮೆ 

Tap to resize

Latest Videos

undefined

ಒಂದು ವೇಳೆ ನಮ್ಮವರಿಗೆ ಸಚಿವ ಸ್ಥಾನ ನೀಡದಿದ್ದಲ್ಲಿ 10 ಶಾಸಕರಿಂದ ರಾಜೀನಾಮೆ ಕೊಡಿಸಲಾಗುವುದು ಎಂದು ಸ್ವಾಮೀಜಿಯೋರ್ವರು ಎಚ್ಚರಿಕೆ ರವಾನಿಸಿದ್ದಾರೆ. 


ಟ್ರಂಪ್‌ ಅಹಮದಾಬಾದ್‌ ಭೇಟಿಗೆ 100 ಅಲ್ಲ ಕೇವಲ 13 ಕೋಟಿ ವೆಚ್ಚ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ 3 ಗಂಟೆಗಳ ಅಹಮದಾಬಾದ್‌ ಭೇಟಿಗೆ ಸರ್ಕಾರ 100 ಕೋಟಿ ರು. ವೆಚ್ಚ ಮಾಡಿದೆ ಎಂಬ ವಿಪಕ್ಷಗಳ ಆರೋಪವನ್ನು ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ತಳ್ಳಿ ಹಾಕಿದ್ದಾರೆ. 

ಅಭಿನಂದನ್‌ಗೆ ಟೀ ಮಾಡಿಕೊಟ್ಟ ಪಾಕಿಸ್ತಾನದ ಚಾಯ್‌ವಾಲ ಪತ್ತೆ

2019ರ ಫೆ.27 ರಂದು ಪಾಕಿಸ್ತಾನದ ಯುದ್ಧ ವಿಮಾನ ಹೊಡೆದುರುಳಿಸಿ, ಬಳಿಕ ಪಾಕ್‌ ವಿಮಾನಗಳ ದಾಳಿಗೆ ಸಿಕ್ಕು ಅಚಾನಕ್ಕಾಗಿ ಪಾಕ್‌ ಭೂ ಪ್ರದೇಶದಲ್ಲಿ ಇಳಿದು, ಅಲ್ಲಿನ ಸೇನೆಯಿಂದ ಬಂಧನಕ್ಕೊಳಗಾಗಿದ್ದ ವೀರ ಯೋಧ ಅಭಿನಂದನ್‌ ವರ್ತಮಾನ್‌ಗೆ ಚಹಾ ತಯಾರಿಸಿಕೊಟ್ಟಚಾಯ್‌ವಾಲ ಪತ್ತೆಯಾಗಿದ್ದಾರೆ.

ಕನ್ಹಯ್ಯಾ ವಿರುದ್ಧ ದೇಶದ್ರೋಹ ಕೇಸ್‌ ವಿಚಾರಣೆಗೆ ಆಪ್ ಅನುಮತಿ

ದೇಶವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ 2016 ರಲ್ಲಿ ದಾಖಲಾದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಹಾಗೂ ಇತರರನ್ನು ವಿಚಾರಣೆ ನಡೆಸಲು ದೆಹಲಿ ಸರ್ಕಾರ ಅನುಮೋದನೆ ನೀಡಿದೆ. 

ಸ್ಫೋಟಕ ಹೇಳಿಕೆ ಕೊಟ್ಟ DCM: ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ!

 ಬೇರೆ ಪಕ್ಷದಿಂದ ಬಿಜೆಪಿಗೆ ಬರಲು ಶಾಸಕರು ತುದಿಗಾಲಿನ ಮೇಲೆ ನಿಂತಿದ್ದಾರೆ. ಎಷ್ಟು ಜನ ಶಾಸಕರು ಅನ್ನೋದನ್ನ ಹೇಳಲು ಆಗೋದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 

ಮಹಿಳಾ ಟಿ20 ವಿಶ್ವಕಪ್: ಮತ್ತೆ ಅಬ್ಬರಿಸಿದ ಶೆಫಾಲಿ; ಲಂಕಾ ಎದುರು ಭಾರತಕ್ಕೆ ಸುಲಭ ಜಯ

ರಾಧಾ ಯಾದವ್ ಚಾಣಾಕ್ಷ ಬೌಲಿಂಗ್ ಹಾಗೂ ಶೆಫಾಲಿ ವರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಎದುರು ಭಾರತ 7 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದೆ.

ಕಿಚ್ಚನ ವಿರುದ್ಧ ದೂರು ಕೊಟ್ಟ ಅಧ್ಯಕ್ಷನಿಗೆ ಫ್ಯಾನ್ಸ್‌ನಿಂದ ಜೀವ ಬೆದರಿಕೆ ಕರೆ!

ಸ್ಯಾಂಡಲ್‌ವುಡ್‌ 'ಪೈಲ್ವಾನ್‌' ಕಿಚ್ಚ ಸುದೀಪ್‌ ಇತ್ತೀಚಿಗೆ ಜೂಜಾಟದ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀ ಸಾಮಾನ್ಯನಿಗೆ ಜೂಜಾಟ ಆಡಲು ಈ ಆ್ಯಡ್ ಪ್ರಜೋದಿಸುತ್ತದೆ ಎಂದು ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಆರೋಪಿಸಿ, ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.

4 ವರ್ಷಕ್ಕೊಮ್ಮೆ ಫೆ. 29 ಬರದಿದ್ದರೆ ಏನಾಗುತ್ತೆ?

ಪ್ರತಿ 4 ವರ್ಷ​ಕ್ಕೊಮ್ಮೆ ಬರುವ ಅಧಿಕ ವರ್ಷಕ್ಕೆ 2020 ಸಾಕ್ಷಿ​ಯಾ​ಗಿದೆ. ವರ್ಷಕ್ಕೆ 365 ದಿನ, ಆದರೆ ಈ ಅಧಿಕ ವರ್ಷ​ದಲ್ಲಿ 366 ದಿನ ಏಕೆ ಎಂಬ ಪ್ರಶ್ನೆ ಮೂಡು​ವುದು ಸಹಜ. ಖಗೋ​ಳ ವಿದ್ಯ​ಮಾ​ನಗಳೇ ಹಾಗೆ ಅಚ್ಚರಿ ಹುಟ್ಟಿ​ಸುಂತವು. ಈ ಹಿನ್ನೆ​ಲೆ​ಯಲ್ಲಿ ಅಧಿಕ ವರ್ಷ ಅಂದರೆ ಏನು, ಹೇಗೆ ಲೆಕ್ಕಾ​ಚಾರ ಹಾಕ​ಲಾ​ಗು​ತ್ತದೆ, ಅಧಿಕ ವರ್ಷ ಇಲ್ಲ​ದಿ​ದ್ದರೆ ಏನಾ​ಗುತ್ತೆ ಎಂಬ ಕುತೂ​ಹ​ಲ​ಕಾರಿ ಸಂಗತಿಗಳು ಇಲ್ಲಿ​ವೆ.

ಏ.1 ರಿಂದ ಪೆಟ್ರೋಲ್‌ ದರ 1 ರೂ ಹೆಚ್ಚಳ?

ಏ.1 ಒಂದರಿಂದ ಕಡ್ಡಾಯವಾಗಿ ಬಿಎಸ್‌-6 ಮಾದರಿಯ ಇಂಧನ ಮಾರಾಟ ಮಾಡಬೇಕಾಗಿರುವುದರಿಂದ ಇಂಧನ ಬೆಲೆಯಲ್ಲಿ ಲೀಟರ್‌ಗೆ 1 ರು.ನಷ್ಟು  ಏರಿಕೆಯಾಗುವ ಸಂಭವ ಇದೆ. 

1279 ದ್ವಿತೀಯ ದರ್ಜೆ ಹುದ್ದೆ ಭರ್ತಿಗೆ KPSC ಅಧಿಸೂಚನೆ ಪ್ರಕಟ

ಕರ್ನಾಟಕ ಲೋಕಸೇವಾ ಅಯೋಗವು ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರೀಕ ಸೇವೆಗಳು 1978ರನ್ವಯ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಕಿರಿಯ ಸಹಾಯಕ/ದ್ವತೀಯ ದರ್ಜೆ ಸಹಾಯಕ ಹುದ್ದೆಗಳನ್ನ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನ ಆಹ್ವಾನಿಸಿದೆ.
 

click me!