
ನವದೆಹಲಿ ( ಫೆ. 29): ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಐಷಾರಾಮಿ ಗೋಲ್ಡನ್ ಚಾರಿಯಟ್ (ಸುವರ್ಣ ರಥ) ರೈಲು ಸೇವೆಯನ್ನು ಹಲವು ವರ್ಷಗಳ ವಿರಾಮದ ಬಳಿಕ ಐಆರ್‌ಸಿಟಿಸಿ ಮಾ.22 ರಿಂದ ಪುನಃ ಆರಂಭಿಸಲಿದೆ.
ಮಂಗಳೂರು-ಬೆಂಗಳೂರು ರಾತ್ರಿ ರೈಲು ಬುಕ್ಕಿಂಗ್ ರದ್ದು
2008ರಲ್ಲಿ ಗೋಲ್ಡನ್ ಚಾರಿಯಟ್ ರೈಲು ಸೇವೆಯನ್ನು ಪ್ರಾರಂಭಿಸಿದ್ದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಜೊತೆ ಇತ್ತೀಚೆಗೆ ಮಾಡಿಕೊಳ್ಳಲಾದ ಒಪ್ಪಂದದ ಹಿನ್ನೆಲೆಯಲ್ಲಿ ಐಆರ್‌ಸಿಟಿಸಿ ಗೋಲ್ಡನ್ ಚಾರಿಯೆಟ್ ರೈಲಿನ ಸೇವೆಯನ್ನು ಪುನಾರಂಭಿಸುತ್ತಿದೆ. ಈ ಬಾರಿ ಈ ರೈಲು ಇನ್ನಷ್ಟುವಿಶಿಷ್ಟಸೌಲಭ್ಯಗಳಿಂದ ಗ್ರಾಹಕರನ್ನು ಸೆಳೆಯಲಿದೆ.
ಮಾ.3 ತನಕ ರೈಲು ಸಂಚಾರದಲ್ಲಿ ವ್ಯತ್ಯಯ, ಎಲ್ಲೆಲ್ಲಿ..?
ಮಾ.22, ಮಾ.29 ಮತ್ತು ಏ.12 ರಂದು ಫ್ರೈಡ್ ಆಫ್ ಕರ್ನಾಟಕ ಎಂಬ ಹೆಸರಿನಲ್ಲಿ ಮೂರು ಪ್ರವಾಸಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಏಳು ದಿನ/ ಆರು ರಾತ್ರಿಗಳ ಪ್ರಯಾಣ ಮುಂಜಾನೆ ಯಶವಂತಪುರ ರೈಲ್ವೆ ನಿಲ್ದಾಣದಿಂದ ಆರಂಭವಾಗಲಿದ್ದು, ಬಂಡಿಪುರ ನ್ಯಾಷನಲ್ ಪಾರ್ಕ್, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಹಂಪಿ, ಬಾದಾಮಿ- ಪಟ್ಟದಕಲ್ಲು- ಐಹೊಳೆ ಹಾಗೂ ಗೋವಾಕ್ಕೆ ತೆರಳಿ ಬೆಂಗಳೂರಿಗೆ ವಾಪಸ್ ಆಗಲಿದೆ.
ನೂತನ ವಿನ್ಯಾಸದ ಪೀಠೋಪಕರಣಗಳು, ಹೊಸ ಮಾದರಿಯ ಕೋಣೆಗಳು, ಬಾತ್‌ರೂಮ್, ಮಣ್ಣಿನ ಪಾತ್ರೆಗಳು ಹೀಗೆ ಐಷಾರಾಮಿ ಸೌಲಭ್ಯಗಳನ್ನು ರೈಲಿನಲ್ಲಿ ಕಾಣಬಹುದಾಗಿದೆ. ಅಲ್ಲದೇ ವೈಫೈ ಸಂಪರ್ಕ ಇರುವ ಸ್ಮಾರ್ಟ್ ಟೀವಿಯನ್ನು ಅಳವಡಿಸಲಾಗಿದ್ದು, ಅದರಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್‌ಗಳನ್ನು ವೀಕ್ಷಿಸಬಹುದಾಗಿದೆ. ಜೊತೆ ಹೆಚ್ಚಿನ ಸುರಕ್ಷತೆಯ ದೃಷ್ಟಿಯಿಂದ ಸಿಸಿಟೀವಿ ಕ್ಯಾಮರಾ, ಫೈರ್ ಅಲರಾಮ್‌ಗಳನ್ನು ಅಳವಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ