4 ವರ್ಷಕ್ಕೊಮ್ಮೆ ಫೆ. 29 ಬರದಿದ್ದರೆ ಏನಾಗುತ್ತೆ?
ಪ್ರತಿ 4 ವರ್ಷಕ್ಕೊಮ್ಮೆ ಬರುವ ಅಧಿಕ ವರ್ಷಕ್ಕೆ 2020 ಸಾಕ್ಷಿಯಾಗಿದೆ. ವರ್ಷಕ್ಕೆ 365 ದಿನ, ಆದರೆ ಈ ಅಧಿಕ ವರ್ಷದಲ್ಲಿ 366 ದಿನ ಏಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಖಗೋಳ ವಿದ್ಯಮಾನಗಳೇ ಹಾಗೆ ಅಚ್ಚರಿ ಹುಟ್ಟಿಸುಂತವು. ಈ ಹಿನ್ನೆಲೆಯಲ್ಲಿ ಅಧಿಕ ವರ್ಷ ಅಂದರೆ ಏನು, ಹೇಗೆ ಲೆಕ್ಕಾಚಾರ ಹಾಕಲಾಗುತ್ತದೆ, ಅಧಿಕ ವರ್ಷ ಇಲ್ಲದಿದ್ದರೆ ಏನಾಗುತ್ತೆ ಎಂಬ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
ಪ್ರತಿ 4 ವರ್ಷಕ್ಕೊಮ್ಮೆ ಬರುವ ಅಧಿಕ ವರ್ಷಕ್ಕೆ 2020 ಸಾಕ್ಷಿಯಾಗಿದೆ. ವರ್ಷಕ್ಕೆ 365 ದಿನ, ಆದರೆ ಈ ಅಧಿಕ ವರ್ಷದಲ್ಲಿ 366 ದಿನ ಏಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಖಗೋಳ ವಿದ್ಯಮಾನಗಳೇ ಹಾಗೆ ಅಚ್ಚರಿ ಹುಟ್ಟಿಸುಂತವು.
ಈ ಹಿನ್ನೆಲೆಯಲ್ಲಿ ಅಧಿಕ ವರ್ಷ ಅಂದರೆ ಏನು, ಹೇಗೆ ಲೆಕ್ಕಾಚಾರ ಹಾಕಲಾಗುತ್ತದೆ, ಅಧಿಕ ವರ್ಷ ಇಲ್ಲದಿದ್ದರೆ ಏನಾಗುತ್ತೆ ಎಂಬ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
ಅಧಿಕ ವರ್ಷ ಎಂದರೆ ಏನು?
ಭೂಮಿ ನಿಂತಂತೆ ಭಾಸವಾದರೂ ಅದು ನಿಯಮಿತ ವೇಗದಲ್ಲಿ ಚಲಿಸುತ್ತಲೇ ಇರುತ್ತದೆ. ಭೂಮಿ ಗಂಟೆಗೆ 800 ಕಿ.ಮೀ ವೇಗದಲ್ಲಿ ಗೋಲಾಕಾರದಲ್ಲಿ ಸುತ್ತುತ್ತಿರುತ್ತದೆ. ತನ್ನ ಪಥದಲ್ಲಿ ಸತ್ತುತ್ತಲೇ ಸೂರ್ಯನನ್ನೂ ಅದು ಸುತ್ತುತ್ತಿರುತ್ತದೆ.
ಚಂದ್ರನಿಗೊಂದು ಸಂಗಾತಿ; ಭೂಮಿಗೆ ಮತ್ತೊಂದು ಮಿನಿ ಉಪಗ್ರಹ
93,98,86,400 ಕಿ.ಮೀ ನಷ್ಟುದೂರ ಇರುವ ಸೂರ್ಯನನ್ನು ಭೂಮಿ ಒಂದು ಸುತ್ತು ಸುತ್ತಲು ಅಂದಾಜು 365.242189 ದಿನ ಅಥವಾ 365 ದಿನ 5 ಗಂಟೆ, 48 ನಿಮಿಷ ಮತ್ತು 45 ಸೆಕೆಂಡ್ ಬೇಕು. ಹೀಗೆ ಸೂರ್ಯನನ್ನು ಒಂದು ಸುತ್ತು ಸುತ್ತಲು ಭೂಮಿ ತೆಗೆದುಕೊಳ್ಳುವ ಸಮಯವೇ ಒಂದು ವರ್ಷ. ಹೀಗಾಗಿಯೇ ವರ್ಷದಲ್ಲಿ 365 ದಿನಗಳಿವೆ. ಉಳಿದ 0.242 ದಿನವನ್ನು ಸೇರಿಸುತ್ತಾ ಹೋಗಿ 4 ವರ್ಷಕ್ಕೊಮ್ಮೆ ಒಂದು ಪೂರ್ಣ ದಿನವೆಂದು ಪರಿಗಣಿಸುತ್ತೇವೆ. ಆ ವರ್ಷವನ್ನು ಅಧಿಕ ವರ್ಷ ಎಂದು ಹೇಳುತ್ತೇವೆ.
ಲೀಪ್ ಇಯರ್ ಪರಿಚಯಿಸಿದ್ದು ಜೂಲಿಯಸ್ ಸೀಸರ್
ಜೂಲಿಯಸ್ ಸೀಸರ್ ಮೊದಲ ಬಾರಿಗೆ ತನ್ನ ಜೂಲಿಯನ್ ಕ್ಯಾಲೆಂಡರ್‌ನಲ್ಲಿ (45 ಬಿಸಿಇ) ಅಧಿಕ ವರ್ಷವನ್ನು ಪರಿಚಯಿಸಿದ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಈ ಅಧಿಕ ವರ್ಷ ಬರುತ್ತದೆ ಎಂದೂ ಅದರಲ್ಲಿ ಹೇಳಲಾಗಿತ್ತು.
ಆ ಸಮಯದಲ್ಲಿ ವರ್ಷದ ಕೊನೆಯ ತಿಂಗಳಾದ ಫೆಬ್ರವರಿ 24ನ್ನು ಅಧಿಕ ವರ್ಷದ ದಿನ ಎಂದು ಪರಿಗಣಿಸಲಾಗುತ್ತಿತ್ತು. ಅನಂತರದಲ್ಲಿ ಪೋಪ್ ಗ್ರೆಗೋರಿ-8 1582ರಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಪರಿಚಯಿಸಿದ. ಇದೇ ಕ್ಯಾಲೆಂಡರ್ ಅನ್ನೇ ನಾವಿಂದು ಬಳಸುತ್ತಿದ್ದೇವೆ.
ಅಧಿಕ ವರ್ಷ ಏಕೆ ಬೇಕು?
ಹೆಚ್ಚುವರಿ 0.242 ದಿನವನ್ನು ಕೂಡುತ್ತಾ ಪ್ರತಿ 4 ವರ್ಷಕ್ಕೊಮ್ಮೆ ಅಧಿಕ ವರ್ಷವನ್ನಾಗಿ ಪರಿಗಣಿಸುವುದರಿಂದ ಕ್ಯಾಲೆಂಡರ್ ಖಗೋಳ ಶಾಸ್ತ್ರದ ವಿದ್ಯಮಾನಗಳಿಗೆ ಅನುಗುಣವಾಗಿರುತ್ತದೆ. ಅಧಿಕ ವರ್ಷ ಇಲ್ಲದೇ ಹೋದರೆ ಕ್ಯಾಲೆಂಡರ್‌ನಲ್ಲಿ ಪ್ರತಿ ವರ್ಷ 5 ಗಂಟೆ, 48 ನಿಮಿಷ, 45 ಸೆಕೆಂಡ್ ತಪ್ಪಿಹೋಗುತ್ತದೆ ಆಗ ಕ್ಯಾಲೆಂಡರ್ ಸಿಂಕ್ ತಪ್ಪುತ್ತದೆ.
ಒಂದು ವೇಳೆ ಲೀಪ್ ಇಯರ್ ಇಲ್ಲದೇ ಹೋದಲ್ಲಿ ನಾವು ಪ್ರತಿ ವರ್ಷ ಸೌರ ಮಂಡಲದ ಕಾಲಮಾನಕ್ಕಿಂತ 6 ಗಂಟೆ ಮುಂದಕ್ಕೆ ಹೋಗುತ್ತೇವೆ. 10 ವರ್ಷಗಳ ಬಳಿಕ 25 ದಿನ ಮುಂದೆ ಹೋಗುತ್ತೇವೆ. ಆಗ ಹವಾಮಾನ ಬದಲಾವಣೆಯ ಕುರಿತು ನಮಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಹೀಗಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಈ ಲೀಪ್ ಇಯರ್ ಆಚರಿಸುವುದು ಅನಿವಾರ್ಯ.
ಈ ರಾಶಿಯವರು ತಮ್ಮ ಬಾಳಿನಲ್ಲಿ ಬಲುಬೇಗ ಸೆಕ್ಸ್ ಅನುಭವ ಹೊಂದುತ್ತಾರಂತೆ!
ಅಧಿಕ ವರ್ಷ ಎಂದು ತಿಳಿಯುವುದು ಹೇಗೆ?
ಸಾಮಾನ್ಯವಾಗಿ ಅಧಿಕ ವರ್ಷ ಪ್ರತಿ 4 ವರ್ಷಕ್ಕೊಮ್ಮೆ ಬರುತ್ತದೆ. ಈ ಅಧಿಕ ವರ್ಷವನ್ನು 4ರಿಂದ ಭಾಗಿಸಬಹುದು. ಆದರೆ ಶತಮಾನದ ವರ್ಷಗಳೆಲ್ಲವೂ (ಅಂದರೆ-00ಯಿಂದ ಕೊನೆಯಾಗುವ) ನಾಲ್ಕರಿಂದ ಭಾಜ್ಯವಾಗುವುದಾದರೂ ಸಹ, ಅವು 400ರಿಂದ ಭಾಗಿಸಲ್ಪಟ್ಟಾಗ ಮಾತ್ರ ಅವುಗಳಲ್ಲಿ ಅಧಿಕ ದಿನವನ್ನು ಸೇರಿಸಲಾಗುತ್ತದೆ.
ಹಾಗೆಯೇ ವರ್ಷವೊಂದು 100ರಿಂದ ಭಾಜ್ಯವಾಗುವಂತಿದ್ದರೆ (ಶತಮಾನದ ವರ್ಷಗಳಾದ 1900 ಮತ್ತು 2000) ಆ ವರ್ಷ ಅಧಿಕ ವರ್ಷ ಆಗಿರುವುದಿಲ್ಲ. ಆದರೆ 100ರಿಂದ ಭಾಗವಾಗುವ ಸಂಖ್ಯೆ 400ರಿಂದಲೂ ಭಾಗವಾದರೆ ಅದು ಅಧಿಕ ವರ್ಷ (ಇದೇ ಕಾರಣದಿಂದ 1700, 1800 ಮತ್ತು 1900 ಅಧಿಕ ವರ್ಷ ಆಗಿರಲಿಲ್ಲ. ಆದರೆ 1600 ಮತ್ತು 2000 ಅಧಿಕ ವರ್ಷವಾಗಿದ್ದವು). ಹೀಗೆ ಈ ಮೇಲಿನ ನಿಯಮಗಳು ಅನ್ವಯವಾದರೆ ಅದು ಅಧಿಕ ವರ್ಷವೆಂದು ಪರಿಗಣಿತವಾಗುತ್ತದೆ.
ಪ್ರತೀ 400 ವರ್ಷಗಳಲ್ಲಿ 3 ಬಾರಿ ಅಧಿಕ ವರ್ಷ ಇರಲ್ಲ
1900 ನಾಲ್ಕರಿಂದ ಭಾಗಿಸಬಹುದಾದ ಸಂಖೆಯಾಗಿದ್ದರೂ ಅದು ಅಧಿಕ ವರ್ಷ ಆಗಿರಲಿಲ್ಲ. 365.242 ಎಂಬುದನ್ನು ನಾವು ರೌಂಡ್ ಮಾಡಿ 365.25 ಎಂದು ಪರಿಗಣಿಸಿ ಅಧಿಕ ವರ್ಷ ಎಂದು ನಿರ್ಧರಿಸಬಹುದು.
ಆದರೆ ಅಳತೆಯಲ್ಲಿನ ಈ ಬದಲಾವಣೆಯಿಂದ ಭೂಮಿಯ ಪಯಣದ 11 ನಿಮಿಷ ವ್ಯತ್ಯಾಸವನ್ನು ನಾವು ಕಡೆಗಣಿಸಿದಂತಾಗುತ್ತದೆ. ಅದೇ ಕಾರಣಕ್ಕೆ ಪ್ರತೀ 400 ವರ್ಷಗಳಲ್ಲಿ 3 ಸಲ ಅಧಿಕ ವರ್ಷವನ್ನು ಬಿಡಲಾಗುತ್ತದೆ. ಹಾಗಾಗಿ 1900 ಅಧಿಕ ವರ್ಷ ಆಗಿರಲಿಲ್ಲ. ಅಂತೆಯೇ 1700 ಮತ್ತು 1800 ಕೂಡ ಹೊಸ ವರ್ಷ ಆಗಿರಲಿಲ್ಲ.
2020 ಹೇಗೆ ಅಧಿಕ ವರ್ಷ?
2020 ಅನ್ನು 4ರಿಂದ ಭಾಗಿಸಿದಾಗ 505ಕ್ಕೆ ಸಮನಾಗಿರುತ್ತದೆ. 2020 ಒಂದು ಶತಮಾನದ ವರ್ಷವಲ್ಲ, ಆದ್ದರಿಂದ ಇದನ್ನು 100 ಅಥವಾ 400 ರಿಂದ ಭಾಗಿಸುವ ಅಗತ್ಯವಿಲ್ಲ. ಆದ್ದರಿಂದ, 2020 ಅಧಿಕ ವರ್ಷಗಳ ನಿಯಮಗಳಿಗೆ ಬದ್ಧವಾದೆ. ಹಾಗಾಗಿ ಹೆಚ್ಚುವರಿ ದಿನವನ್ನು ಸೇರಿಸಲಾಗಿದೆ.
ಮುಂದಿನ ಅಧಿಕ ವರ್ಷ ಯಾವಾಗ?
2020 ಅಧಿಕ ವರ್ಷ. ಹಾಗಾಗಿ ಮುಂದಿನ ಅಧಿಕ ವರ್ಷ 2024ರಲ್ಲಿ ಬರುತ್ತದೆ. ಕಾಕತಾಳೀಯ ಎಂಬಂತೆ ಈ ವರ್ಷ ಅಮೆರಿಕದ ಅಧ್ಯಕ್ಷೀಯ ಚುನಾವಣೆ, ಬೇಸಿಗೆ ಓಲಂಪಿಕ್ಸ್ ಕೂಡ ಇವೆ. ವಿಶೇಷ ಎಂದರೆ ಅಧಿಕ ವರ್ಷದ ಮಾಸದಲ್ಲಿ ಕೆಲ ಹೋಟೆಲ್ಗಳು ರಿಯಾಯಿತಿಯನ್ನೂ ಘೋಷಿಸುತ್ತವೆ.
ಅಧಿಕ ವರ್ಷ ಎಂದರೆ ಬ್ಯಾಡ್ ಲಕ್?
ಕೆಲವು ವರ್ಷಗಳ ಹಿಂದೆ ಅಧಿಕ ವರ್ಷವನ್ನು ‘ಲೇಡೀಸ್ ಡೇ’ ಎಂದು ಪರಿಗಣಿಸಲಾಗುತ್ತಿತ್ತು. ಆ ದಿನ ಮಹಿಳೆಯರು ತಮಗೆ ಇಷ್ಟವಾದ ಪುರುಷರಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಬಹುದಿತ್ತು. ಇನ್ನು ಜನಪದರ ಪ್ರಕಾರ ಅಧಿಕ ವರ್ಷದಲ್ಲಿ ಶುಕ್ರವಾರ ಯಾವಾಗಲೂ ಹವಾಮಾನ ಬದಲಾಗುತ್ತಿರುತ್ತದೆ. ಹಾಗೆಯೇ ಪ್ರತೀ 4 ವರ್ಷಕ್ಕೊಮ್ಮೆ ಬರುವ ಅಧಿಕ ವರ್ಷವನ್ನು ಕೆಟ್ಟವರ್ಷ, ಅಪಶಕುನ ಎಂದು ಕೆಲವರು ಪರಿಗಣಿಸಿದರೆ, ಇನ್ನೂ ಕೆಲವು ಒಳ್ಳೆಯ ವರ್ಷ, ಶುಭ ಶಕುನ ಎಂದು ಪರಿಗಣಿಸುತ್ತಾರೆ.
ಕೆಲವು ಸಂಪ್ರದಾಯಗಳಲ್ಲಿ ಈ ವರ್ಷ ಮದುವೆಯಾಗುವುದು ಬ್ಯಾಡ್ ಲಕ್ ಎಂಬ ಭಾವನೆ ಇದೆ. ಈ ಕುರಿತಂತೆ ನಿದರ್ಶಗಳಿಲ್ಲ. ಆದರೆ ಅಧಿಕ ವರ್ಷದಲ್ಲಿಯೇ ರೋಮ್ ಸುಟ್ಟು ಬೂದಿಯಾಗಿತ್ತು, ಟೈಟಾನಿಕ್ ಹಡಗು ಮುಳುಗಿತ್ತು(1912). ಹಾಗೆಯೇ ಬೆಂಜಮಿನ್ ಫ್ರಾಂಕ್ಲಿನ್ ಸಿಡಿಲು ಎಂದರೆ ವಿದ್ಯುತ್ ಎನ್ನುವುದನ್ನು ಕಂಡುಹಿಡಿದಿದ್ದ (1975). ಹಾಗೆಯೇ 1848ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಚಿನ್ನವನ್ನು ಆವಿಷ್ಕರಿಸಲಾಗಿತ್ತು. ಹಾಗಾಗಿ ಗುಡ್ ಲಕ್ ಅಥವಾ ಬ್ಯಾಡ್ ಲಕ್ ಎಂಬುದು ಅವರವರ ಭಾವನೆಗೆ ಬಿಟ್ಟ ವಿಷಯ.
ಈ ತಿಂಗಳಲ್ಲಿ ಹುಟ್ಟಿದವರ ಮೂಡ್ ಬದಲಾಗೋಲ್ಲ....
ಲೀಪ್ ಇಯರ್ ಕ್ಯಾಪಿಟಲ್ ಇವೆ!
ಟೆಕ್ಸಾಸ್ ಮತ್ತು ಆ್ಯಂಥೋನಿ ಮತ್ತು ಆ್ಯಂಥೋನಿ ಮತ್ತು ನ್ಯೂ ಮೆಕ್ಸಿಕೋ ಅವಳಿ ನಗರಗಳು ತಮ್ಮನ್ನು ಲೀಪ್ ಇಯರ್ ಕ್ಯಾಪಿಟಲ್ ಎಂದು ಘೋಷಿಸಿಕೊಂಡಿವೆ. ಅದಕ್ಕಾಗಿಯೇ ಇಲ್ಲಿ ಅಧಿಕ ವರ್ಷದ 4 ದಿನ ವಿಜೃಂಭಣೆಯಿಂದ ಹಬ್ಬ ಆಚರಿಸುತ್ತಾರೆ. ಅಂದು ಹುಟ್ಟಿದ ಮಕ್ಕಳಿಗೆ ಅದ್ದೂರಿಯಾಗಿ ಬರ್ತಡೇ ಪಾರ್ಟಿ ಆಚರಿಸುತ್ತಾರೆ. ಹಿಸ್ಟರಿ. ಕಾಮ್ ಪ್ರಕಾರ ಜಗತ್ತಿನಲ್ಲಿ 41 ಲಕ್ಷ ಮಕ್ಕಳು ಫೆ.29ರಂದು ಜನಿಸಿದ್ದಾರೆ. ಪ್ರತಿ 1,461 ಮಕ್ಕಳಲ್ಲಿ ಒಬ್ಬರು ಅಧಿಕ ವರ್ಷದಲ್ಲಿ ಜನಿಸುವ ಸಾಧ್ಯತೆ ಇರುತ್ತದೆ.
4 ವರ್ಷಕ್ಕೊಮ್ಮೆ ಬರ್ತಡೇ ಆಚರಿಸುವ ಗಣ್ಯರಿವರು!
ದೇಶದ ಮಾಜಿ ಪ್ರಧಾನಿ, ಮಾಜಿ ಹಣಕಾಸು ಸಚಿವ, ಸ್ವಾತಂತ್ರ್ಯ ಹೋರಾಟಗಾರ ಮೊರಾರ್ಜಿ ದೇಸಾಯಿ ಅವರು ಜನಿಸಿದ್ದು 1896, ಫೆಬ್ರವರಿ 29ರಂದು ಅಂದರೆ ಅಧಿಕ ವರ್ಷದಲ್ಲಿ. ಇನ್ನೊಂದು ವಿಶೇಷ ಎಂದರೆ ಇವರು ದೇಶದ ಪ್ರಧಾನಿಯಾಗಿದ್ದಾಗ ದೇಶದ ಕೇಂದ್ರ ಬಜೆಟ್ ಫೆ.29ರಂದೇ ಮಂಡನೆಯಾಗುತ್ತಿತ್ತು. ಮೊ
ರಾರ್ಜಿ ದೇಸಾಯಿ 1964 ಮತ್ತು 1968ರಲ್ಲಿ ತಮ್ಮ ಹುಟ್ಟಿದ ದಿನದಂದೇ ಬಜೆಟ್ ಮಂಡಿಸಿದ್ದರು. ಹಾಗಾಗಿ ಬಜೆಟ್ ಮಂಡನೆ ದಿನದಂದೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಏಕೈಕ ಪ್ರಧಾನಿ ಎಂಬ ಖ್ಯಾತಿ ಇವರದ್ದು. ಇವರಲ್ಲದೆ ಭರತ ನಾಟ್ಯ ಡ್ಯಾನ್ಸರ್ ರುಕ್ಮಿಣಿ ದೇವಿ ಅರುಂಡೇಲ್, ಗಣಿತ ಶಾಸ್ತ್ರಜ್ಞ ಸಿ.ಎಸ್ ಶೇಷಾದ್ರಿ, ಶೂಟರ್ ಪ್ರಕಾಶ್ ನಂಜಪ್ಪ ಮುಂತಾದವರು ಅಧಿಕ ವರ್ಷದಲ್ಲಿ ಜನಿಸಿದ ಪ್ರಮುಖರು.
ಫೆಬ್ರವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ