
ಲಕ್ನೋ (ಫೆ. 29): ಹಿಂದೂಗಳ ಮದುವೆ ಕರೆಯೋಲೆಯಲ್ಲಿ ದೇವರ ಫೋಟೋಗಳನ್ನು ಹಾಕುವುದು ಸಾಮಾನ್ಯ. ಆದರೆ, ಉತ್ತರ ಪ್ರದೇಶದ ಮೇರಠ್‌ನಲ್ಲಿ ಮುಸ್ಲಿಂ ಮದುವೆಯ ಆಮಂತ್ರಣಪತ್ರಿಕೆಯಲ್ಲಿ ಗಣೇಶ ಮತ್ತು ರಾಧಾಕೃಷ್ಣ ಮತ್ತು ಚಾಂದ್ ಮುಬಾರಕ್ ಫೋಟೋಗಳನ್ನು ಮುದ್ರಿಸಿರುವುದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಮುಸ್ಲಿಮರ ಮನೆಯಲ್ಲಿ ಸಪ್ತಪದಿ ತುಳಿದ ಹಿಂದೂ ಯುವತಿ
ಹಸ್ತಿನಾಪುರ ಪ್ರದೇಶದ ನಿವಾಸಿ ಮೊಹದ್ ಸರಾಫತ್ ಎಂಬಾತ ಮಾ.4ರಂದು ನಡೆಯಲಿರುವ ತನ್ನ ಮಗಳ ಮದುವೆಗೆ ಇಂಥದ್ದೊಂದು ವಿಶಿಷ್ಟಮಂಗಳಪತ್ರವನ್ನು ಸಿದ್ಧಪಡಿಸಿದ್ದಾನೆ. ಈ ಮದುವೆಗೆ ಹಿಂದುಗಳಿಗೂ ಆಮಂತ್ರಣ ನೀಡಿದ್ದಾನೆ.
' ನಮ್ಮ ಸುತ್ತಮುತ್ತ ಕೋಮು ಸಾಮರಸ್ಯ ಹದಗೆಟ್ಟಿರುವಾಗ ಹಿಂದೂ - ಮುಸ್ಲಿಂ ಸಾಮರಸ್ಯ ಮೆರೆಯಲು ಇದೊಂದು ಒಳ್ಳೆಯ ಐಡಿಯಾ. ನನ್ನ ಸ್ನೇಹಿತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನನ್ನ ಸಂಬಂಧಿಕರಿಗೆ ಹಿಂದಿ ಓದಲು ಬರುವುದಿಲ್ಲ. ಅವರಿಗಾಗಿ ಉರ್ದುನಲ್ಲಿ ಕಾರ್ಡ್ ಮಾಡಿಸಿದ್ದೇವೆ' ಎಂದು ಹೇಳಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ