ಪ್ರವಾಹದಿಂದ ಚೇತರಿಸಿಕೊಳ್ಳಲು ಕೇಂದ್ರಕ್ಕೆ ಕೇರಳ ಕೇಳಿದ ಮೊತ್ತವೆಷ್ಟು..?

By Web DeskFirst Published Sep 14, 2018, 9:40 AM IST
Highlights

ಭೀಕರ ಪ್ರವಾಹಕ್ಕೆ ತುತ್ತಾಗಿ ನಲುಗಿದ ಕೇರಳ ಸರ್ಕಾರ ಇದೀಗ ಮತ್ತೊಮ್ಮೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಪ್ರವಾಹದಿಂದ ಚೇತರಿಸಿಕೊಳ್ಳಲು 4700 ಕೋಟಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದೆ. 

ತಿರುವನಂತಪುರಂ :  ಪ್ರವಾಹದಿಂದ ತತ್ತರಿಸಿರುವ ಕೇರಳ ಚೇತರಿಸಿಕೊಳ್ಳಲು ಕೇಂದ್ರಕ್ಕೆ ಮತ್ತೊಮ್ಮೆ ಮೊರೆ ಹೋಗಿದೆ. ಪ್ರವಾಹದಿಂದ ಸುಧಾರಿಸಿಕೊಳ್ಳುವ ಸಲುವಾಗಿ 4700 ಕೋಟಿ ರು. ನೆರವು ನೀಡಬೇಕು ಎಂದು ಕೇಳಿದೆ. 

ಅತ್ಯಧಿಕ ಪ್ರಮಾಣದಲ್ಲಿ ರಾಜ್ಯದಲ್ಲಿ ಹಾನಿ ಸಂಭವಿಸಿದ್ದು, ಪ್ರವಾಹದ ವೇಳೆ ಒಟ್ಟು 488 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.  ಇಲ್ಲಿನ 14 ಜಿಲ್ಲೆಗಳು ನೆರೆಯಿಂದ ತತ್ತರಿಸಿ ಅದರಿಂದ ಹೊರಬರಲಾದ ಪರಿಸ್ಥಿತಿ ಎದುರಿಸುತ್ತಿವೆ. 

ಈ ನಿಟ್ಟಿನಲ್ಲಿ ಹೆಚ್ಚಿನ ನೆರವು ನೀಡಬೇಕು ಎಂದು ಈ ಎಲ್ಲಾ ರೀತಿಯ ವಿವರಗಳನ್ನು ಕೇರಳ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ  ಕಳುಹಿಸಿದೆ. 

ಅಲ್ಲದೇ ಯಾವ ವಲಯದಲ್ಲಿ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎನ್ನುವ ಬಗ್ಗೆಯೂ ಕೂಡ ವಿವರ ನೀಡಲಾಗಿದೆ. ಆದ್ದರಿಂದ ತುರ್ತಾಗಿ ಚೇತರಿಸಿಕೊಳ್ಳಲು ಕೇಂದ್ರ ಸರ್ಕಾರ ಸೂಕ್ತ ಪ್ರಮಾಣದಲ್ಲಿ ನೆರವನ್ನು ನೀಡಬೇಕು ಎಂದು ಕೇಳಿಕೊಂಡಿದೆ. 

ಆಗಸ್ಟ್ 21 ರಂದು ಕೇಂದ್ರ ಸರಕಾರ  ಒಟ್ಟು 600 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ನೆರವನ್ನು ನೀಡಿದ್ದರು. 

click me!