ರಾಜ್ಯ ಮುಕ್ತ ವಿವಿಯಲ್ಲಿ 14 ಕೋರ್ಸಿಗೆ ಅನುಮತಿ

By Web DeskFirst Published Oct 5, 2018, 11:25 AM IST
Highlights

ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ 14 ಕೋರ್ಸ್ ಗಳಿಗೆ ಯುಜಿಸಿ ಅನುಮತಿ ನೀಡಿದ್ದು, ಈ ಪೈಕಿ 12 ವಿಷಯಗಳಿಗೆ ಗುರುವಾರದಿಂದಲೇ ಪ್ರವೇಶಾತಿ ಆರಂಭವಾಗಿದೆ. 
 

ಮೈಸೂರು: 14 ಕೋರ್ಸ್‌ಗಳನ್ನು ನಡೆಸಲು ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಯುಜಿಸಿ ಅನುಮತಿ ನೀಡಿದ್ದು, ಈ ಪೈಕಿ 12 ವಿಷಯಗಳಿಗೆ ಗುರುವಾರದಿಂದಲೇ ಪ್ರವೇಶಾತಿ ಆರಂಭವಾಗಿದೆ. 

ಎಂಎ ಸಂಸ್ಕೃತ, ಜೀವ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ, ಕ್ಲಿನಿಕಲ್‌ ನ್ಯೂಟ್ರಿಷನ್‌ ಮತ್ತು ಡಯಾಬಿಟಿಕ್ಸ್‌, ಗಣಕ ವಿಜ್ಞಾನ, ಭೂಗೋಳಶಾಸ್ತ್ರ, ಮಾಹಿತಿ ವಿಜ್ಞಾನ, ಗಣಿತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಭೌತಶಾಸ್ತ್ರ ಮತ್ತು ಮನೋವಿಜ್ಞಾನ ವಿಷಯದಲ್ಲಿ ಎಂಎಸ್ಸಿಗೆ ಅನುಮತಿ ನೀಡಿದ್ದು, ಅ.20ರೊಳಗೆ ಪ್ರವೇಶ ಪಡೆಯಬಹುದು. 

ಈಗ ಪ್ರವೇಶಾತಿ ಅವಧಿ ಕಡಿಮೆ ಇರುವುದರಿಂದ ಸರ್ಕಾರಿ ರಜಾ ದಿನಗಳಲ್ಲಿಯೂ ವಿವಿಯ ಕೇಂದ್ರ ಕಚೇರಿ ಮತ್ತು ಪ್ರಾದೇಶಿಕ ಕಚೇರಿಗಳಲ್ಲಿ ಪ್ರವೇಶಾತಿ ಪಡೆಯಲಾಗುವುದು. ಅಂತೆಯೇ ಬಿ.ಇಡಿ ಮತ್ತು ಎಂಬಿಎಗೆ ಯುಜಿಸಿ ಅನುಮತಿ ನೀಡಿದ್ದು, ಜನವರಿಯಲ್ಲಿ ಪ್ರವೇಶಾತಿ ಆರಂಭಿಸಲಾಗುವುದು. ಉಳಿದಂತೆ ಎಲ್‌ಎಲ್‌ಎಂಗೆ ಸದ್ಯದಲ್ಲಿಯೇ ಅನುಮತಿ ದೊರೆಯುವ ನಿರೀಕ್ಷೆ ಇದೆ ಎಂದು ಮುಕ್ತ ವಿವಿ ಕುಲಪತಿ ಪ್ರೊ. ಡಿ. ಶಿವಲಿಂಗಯ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

click me!