ಅನುದಾನ ಹಂಚಿಕೆಗೆ ಸಮನ್ವಯ ಸಮಿತಿ ರಹಸ್ಯ ಸೂತ್ರ!

Jul 1, 2018, 9:58 PM IST

ರಾಜ್ಯದ ರೈತರ ಸಾಲಮನ್ನಾ ವಿಚಾರದಲ್ಲಿ ಕಾಂಗ್ರೆಸ್- ಜೆಡಿಎಸ್​ ನಡುವಿನ ಮುಸುಕಿನ ಸಮರ ಅಂತ್ಯವಾಗಿದೆ. ಸಾಲ ಮನ್ನಾಗೆ ಕಾಂಗ್ರೆಸ್​ ಒಪ್ಪಿಗೆ ನೀಡುವ ಮೂಲಕ ಕಾಂಗ್ರೆಸ್ ಗೊಂದಲಕ್ಕೆ ತೆರೆ ಎಳೆದಿದೆ. ಆದ್ರೆ, ಇದಕ್ಕಾಗಿ ರೂಪಿಸಿದ ಅನುದಾನ ಹಂಚಿಕೆ ಸೂತ್ರವನ್ನು ಮಾತ್ರ ರಹಸ್ಯವಾಗಿರಿಸಿದೆ. ಆ ರಹಸ್ಯ ಸೂತ್ರದ ಖಚಿತ ಮಾಹಿತಿ ಸುವರ್ಣ ನ್ಯೂಸ್​​ಗೆ ಸಿಕ್ಕಿದೆ.

ಸಮನ್ವಯ ಸಮಿತಿ ಸಭೆ ಮತ್ತು ಅದಕ್ಕೆ ಮುಂಚಿನ ಚರ್ಚೆಗಳೆಲ್ಲಾ ನಡೆದಿದ್ದು ಜೆಡಿಎಸ್​ ವಹಿಸಿಕೊಂಡಿರುವ ಖಾತೆಗೆ ಎಷ್ಟು ಹಣ...? ಕಾಂಗ್ರೆಸ್ ಸಚಿವರ ಖಾತೆಗೆ ಎಷ್ಟು ಹಣ..? ಎಂಬುದರ ಸುತ್ತಲೇ ಚರ್ಚೆ ನಡೆದದ್ದು... ಕೊನೆಗೆ ಖಾತೆ ಹಂಚಿಕೆ ಮಾದರಿಯಲ್ಲೇ ಅನುದಾನ ಹಂಚಿಕೆಯ ಸೂತ್ರ ರೂಪಿಸಲಾಯಿತು ಎಂಬ ಖಚಿತ ಮಾಹಿತಿ ಸಿಕ್ಕಿದೆ.

ಬಜೆಟ್​ನ ಗಾತ್ರ ಏನು...? ಹಂಚಿಕೆ ಹೇಗೆ ಎಂಬ ಡಿಟೇಲ್ಸ್ ಹೀಗಿದೆ ನೋಡಿ...ಸಾಮಾನ್ಯವಾಗಿ ಬಜೆಟ್ ರೂಪಿಸುವಾಗ ಯೋಜನಾ ವೆಚ್ಚ, ಯೋಜನೇತರ ವೆಚ್ಚ, ಆದ್ಯತಾ ವಲಯ ಎಂಬ ಆಧಾರದಲ್ಲಿ ಅನುದಾನ ಹಂಚಿಕೆ ಮಾಡಲಾಗುತಿತ್ತು. ಆದರೀಗ ಅವರಿಗೆಷ್ಟು...? ಇವರಿಗಿಷ್ಟು ಎಂದು ಹಂಚಿಕೆ ಮಾಡುತ್ತಿರುವುದು ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡಿಸುವ ಜೊತೆಗೆ, ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.