Remarks Against Mahatma Gandhi : ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಬಂಧನ

By Suvarna NewsFirst Published Dec 30, 2021, 4:04 PM IST
Highlights

ಮಹಾತ್ಮ ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದ ಹಿಂದೂ ಮುಖಂಡ
ದೇಶದ್ರೋಹದ ಆರೋಪದ ಮೇಲೆ ಕಾಳಿಚರಣ್ ಮಹಾರಾಜ್ ಬಂಧನ
ಧರ್ಮ ಸಂಸದ್ ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ಕಾಳಿಚರಣ್ ಮಹಾರಾಜ್
 

ರಾಯ್ಪುರ (ಡಿ. 30): ಮಹಾತ್ಮಾ ಗಾಂಧಿ (Mahatma Gandhi) ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಕಾಳಿಚರಣ್ ಮಹಾರಾಜ್ ರನ್ನು (Kalicharan Maharaj) ದೇಶದ್ರೋಹದ ಆರೋಪದಡಿಯಲ್ಲಿ (sedition) ಛತ್ತೀಸ್ ಗಢ ಪೊಲೀಸರು ಮಧ್ಯಪ್ರದೇಶದ (Madhya Pradesh) ಖಜರಾಹೋದಲ್ಲಿ (Khajuraho) ಬಂಧಿಸಿದ್ದಾರೆ. ರಾಯ್ಪುರದಲ್ಲಿ (Raipur ) ನಡೆದ ಧರ್ಮ ಸಂಸದ್ ವೇಳೆ ಪ್ರಚೋದನಕಾರಿಯಾಗಿ ಮಾತನಾಡಿದ್ದ ಕಾಳಿ ಚರಣ್ ಮಹಾರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು. ಡಿಸೆಂಬರ್ 26 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಟೀಕೆ  ಮಾಡಿದ್ದಲ್ಲದೆ, ಅವರನ್ನು ಹತ್ಯೆ ಮಾಡಿದ್ದ ನಾಥುರಾಮ್ ಗೋಡ್ಸೆ(Nathuram Godse) ಅವರನ್ನು ಶ್ಲಾಘಿಸಿ ಹೇಳಿಕೆ ನೀಡಿದ್ದರು. 

ರಾಯ್ಪುರದ ಮಾಜಿ ಮೇಯರ್‌ ಪ್ರಮೋದ್‌ ದುಬೆ ( Pramod Dubey) ನೀಡಿದ್ದ ದೂರು ಆಧರಿಸಿ ತಿಕ್ರಪಾರಾ ಠಾಣೆ ಪೊಲೀಸರು ಕಾಳಿಚರಣ್ ಮಹಾರಾಜ್ ವಿರುದ್ಧ ಐಪಿಸಿ ಸೆಕ್ಷನ್ 505 (2) 294 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ರಾಯ್ಪುರ  ಪೊಲೀಸರು ಪ್ರಕರಣ ದಾಖಲಿಸಿದ ಕೂಡಲೇ ಕಾಳಿಚರಣ್‌ ಮಹಾರಾಜ್‌ ಛತ್ತೀಸ್ ಗಢದಿಂದ ನಾಪತ್ತೆಯಾಗಿದ್ದರು ಎಂದು ವರದಿಯಾಗಿತ್ತು. ಬಳಿಕ ಅವರನ್ನು ಮಧ್ಯಪ್ರದೇಶದ ಖಜರಾಹೋದಲ್ಲಿ ಸೆರೆಹಿಡಿಯಲಾಗಿದೆ. ಖಜರಾಹೋದಿಂದ 25 ಕಿಲೋಮೀಟರ್ ದೂರದಲ್ಲಿರುವ ಬಾಗೇಶ್ವರ ಧಾಮದ ವಸತಿಗೃಹದ ಸಮೀಪ ಇರುವ ಮನೆಯಲ್ಲಿ ಅವರು ತಂಗಿದ್ದರು. ಮುಂಜಾನೆ 4 ಗಂಟೆಯ ವೇಳೆ ನಡೆದ ಕಾರ್ಯಾಚರಣೆಯಲ್ಲಿ ರಾಯ್ಪುರ ಪೊಲೀಸರು ಅವರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಛತ್ತೀಸ್‌ಗಢದ ರಾಯ್ಪುರದಲ್ಲಿ ನಡೆದ ಧರ್ಮ ಸಂಸದ್ ಅಥವಾ ಧಾರ್ಮಿಕ ಸಭೆಯಲ್ಲಿ ವಿವಾದಾತ್ಮಕ ಭಾಷಣ ಮಾಡಿದ್ದ ಕಾಳಿಚರಣ್ ಮಹಾರಾಜ್ ಅವರ ಮಾತಿಗೆ ಸಿಟ್ಟಾಗಿದ್ದ ಇದರ ಮುಖ್ಯ ಪೋಷಕರಾಗಿದ್ದ ಮಹಂತ್ ರಾಮಸುಂದರ್ ದಾಸ್ (Mahant Ramsunder Das ) ಕಾರ್ಯಕ್ರಮದಿಂದ ಅರ್ಧದಲ್ಲೇ ಹೊರನಡೆದಿದ್ದರು. ಪ್ರಮೋದ್ ದುಬೆ ನೀಡಿದ ದೂರಿನ ಅನ್ವಯ ರಾಮಸುಂದರ್ ದಾಸ್ ವಿರುದ್ಧವೂ ಸಮುದಾಯಗಳ ನಡುವೆ ವೈಷಮ್ಯ ಬಿತ್ತುವ ಕೆಲಸ ಮಾಡಿದ ಪ್ರಕರಣದಲ್ಲಿ ದೂರು ದಾಖಲಾಗಿದೆ.
 

Raipur Police arrests Kalicharan Maharaj from Madhya Pradesh's Khajuraho for alleged inflammatory speech derogating Mahatma Gandhi

(Video source: Police) pic.twitter.com/xP8oaQaR7G

— ANI (@ANI)


ರಾಯ್ಪುರದ ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಅಗರ್ವಾಲ್ ಕೂಡ ಕಾಳಿಚರಣ್ ಅವರ ಬಂಧನವನ್‌ನು ಖಚಿತಪಡಿಸಿದ್ದಾರೆ. ಕಾಳಿಚರಣ್ ಖಜರಾಹೋದ ಅತಿಥಿಗೃಹದಲ್ಲಿ ಕೋಣೆಯನ್ನು ಕಾಯ್ದಿರಿಸಿದ್ದರು. ಆದರೆ, ಅವರು ಅಲ್ಲಿ ವಾಸವಿದ್ದಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಪೊಲೀಸರನ್ನು ದಾರಿ ತಪ್ಪಿಸುವ ಉದ್ದೇಶದಲ್ಲಿ ಸಮೀಪದಲ್ಲಿರುವ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ಪ್ರಕರಣ ದಾಖಲಿಸಿದ ದಿನದಿಂದಲೂ ಅವರ ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಪೊಲೀಸರಿಂದ ಟ್ರ್ಯಾಕಿಂಗ್ ತಪ್ಪಿಸಿಕೊಳ್ಳುವ ಸಲುವಾಗಿ ಅವರ ಎಲ್ಲಾ ಆಪ್ತ ಸಹಾಕರು ತಮ್ಮ ಫೋನ್ ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು.

Kalicharan Maharaj: 'ದೇಶ ವಿಭಜನೆಗೆ ಗಾಂಧೀಜಿಯೇ ಕಾರಣ, ಮೋದಿ- ಯೋಗಿ ವಿಷ್ಣುವಿನ ಅವತಾರ!'
ಇಂದು ಬೆಳಗ್ಗೆ 10 ಸದಸ್ಯರ ಪೊಲೀಸರ ತಂಡ ಅಂತಿಮವಾಗಿ ಕಾಳಿಚರಣ್ ಮಹಾರಾಜ್ (Madhya Pradesh Home Minister Narottam Mishra) ಅವರನ್ನು ಪತ್ತೆ ಹಚ್ಚಿದ್ದು, ಛತ್ತೀಸ್ ಗಢದ ರಾಜಧಾನಿ ರಾಯ್ಪುರಕ್ಕೆ ಕರೆದೊಯ್ದಿದೆ. ಈ ನಡುವೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ರಾಜ್ಯದಿಂದ ಕಾಳಿಚರಣ್‌ನನ್ನು ಬಂಧಿಸುವ ಮೂಲಕ ಛತ್ತೀಸ್‌ಗಢ ಪೊಲೀಸರು ಅಂತರ-ರಾಜ್ಯ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಧ್ಯಪ್ರದೇಶ ಪೊಲೀಸ್ ಮುಖ್ಯಸ್ಥರು ಈ ವಿಚಾರವನ್ನು ಛತ್ತೀಸ್ ಗಢ ಪೊಲೀಸ್ ಮುಖ್ಯಸ್ಥರೊಂದಿಗೆ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

click me!