ಪರಮೇಶ್ವರ್‌ಗೆ IT ಶಾಕ್, ಮದ್ವೆಗೆ ಸಜ್ಜಾದ ಕ್ರಿಕೆಟಿಗ ಮನೀಶ್; ಇಲ್ಲಿವೆ ಅ.10ರ ಟಾಪ್ 10 ಸುದ್ದಿ!

By Web DeskFirst Published Oct 10, 2019, 4:52 PM IST
Highlights

ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿಯಿಂದ ಕಾಂಗ್ರೆಸ್ ಇನ್ನೂ ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಮನೆ ಮೇಲೆ ಐಟಿ ದಾಳಿಯಾಗಿದೆ. ದಾಳಿಗೆ ಕಾರಣಗಳೂ ಬಹಿರಂಗವಾಗಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಇದೀಗ ಸಿಎಂ ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ಮನೀಶ್ ಪಾಂಡೆ, ದಕ್ಷಿಣ ಭಾರತದ ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತ ನಟಿ ಶೃತಿ ಹರಿಹರನ್ ಮಗಳಿಗೆ ನಾಮಕರಣ ಸೇರಿದಂತೆ ಅ.10ರಂದು ಓದುಗರ ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.

1) ನಿಗಮ ಮಂಡಳಿ ಹುದ್ದೆ ಧಿಕ್ಕರಿಸಿ BSY ವಿರುದ್ಧ ತೊಡೆ ತಟ್ಟಿದ ಬೈ ಎಲೆಕ್ಷನ್ ಟಿಕೆಟ್ ಆಕಾಂಕ್ಷಿ!

ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಿಗೆ ನಿಗಮ ಮಂಡಳಿ ನೀಡಿ ಮೂಗಿಗೆ ತಪ್ಪ ಸವರಲು ಬಿಎಸ್ ಯಡಿಯೂರಪ್ಪ ಅವರು ಮುಂದಾಗಿದ್ದಾರೆ. ಆದ್ರೆ ಓರ್ವ ಬಿಜೆಪಿ ಟಿಕೆಟ್ ಆಕಾಂಕ್ಷಿ ನಿಗಮ ಮಂಡಳಿಯನ್ನು ಧಿಕ್ಕರಿಸಿ ಬಂಡಾಯದ ಭಾವುಟ ಹಾರಿಸಿದ್ದಾರೆ.

2) ಮಾಜಿ ಡಿಸಿಎಂ ಪರಮೇಶ್ವರ್ ಐಟಿ ಬಲೆಗೆ ಬಿದ್ದಿದ್ದು ಹೇಗೆ? ಬೇಟೆ ಹಿಂದಿನ ಅಸಲಿ ಸೀಕ್ರೆಟ್!


ಒಂದೆಡೆ ಐಟಿ ದಾಳಿ ಬಳಿಕ ಇಡಿ ಕುಣಿಕೆಗೆ ಸಿಲುಕಿರುವ ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದಾರೆ. ಃಇಗಿರುವಾಗ ಇತ್ತ ರಾಜ್ಯದ ಮಾಜಿ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನಿವಾಸ ಹಾಗೂ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದಿದೆ.  ಪರಮೇಶ್ವರ್ ನಿವಾಸಗಳ ಮೇಲೆ  ಐಟಿ ದಾಳಿಗೆ ಕಾರಣಗಳು ಬಹಿರಂಗವಾಗಿದೆ.

3) ಇಂದು ನಾಳೆ ಮೈಸೂರಿಗೆ ರಾಷ್ಟ್ರಪತಿ ಕೋವಿಂದ್!

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅ.10 ಮತ್ತು 11 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅ.10ರಂದು ಜಯಚಾಮರಾಜ ಒಡೆಯರ್‌ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುವರು.

4) ಸರ್ಕಾರಿ ನೌಕರರಿಗೆ ಕೇಂದ್ರದಿಂದ ದೀಪಾವಳಿ ಬಂಪರ್ ಗಿಫ್ಟ್‌!

ದೀಪಾವಳಿ ಹಬ್ಬದ ಮುನ್ನಾ ದಿನಗಳಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಭರ್ಜರಿ ಉಡುಗೊರೆ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿ ಭತ್ಯೆಯನ್ನು ದಾಖಲೆಯ ಶೇ.5ರಷ್ಟುಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಇಷ್ಟು ಪ್ರಮಾಣದಲ್ಲಿ ತುಟ್ಟಿ ಭತ್ಯೆ ಹೆಚ್ಚಳ ಇದೇ ಮೊದಲು.

5) ದಕ್ಷಿಣ ಭಾರತದ ನಟಿ ಜೊತೆ ಕ್ರಿಕೆಟಿಗ ಮನೀಶ್ ಪಾಂಡೆ ಮದುವೆ?

ದಕ್ಷಿಣ ಭಾರತದ ನಟಿ ಜೊತೆ ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಮನೀಶ್ ಪಾಂಡೆ ಮದುವೆಯಾಗುತ್ತಿದ್ದಾರೆ. ಪಾಂಡೆ ಮದುವೆಗೆ ಟೀಂ ಇಂಡಿಯಾ ಕ್ರಿಕೆಟಿಗರು ಕೂಡ ಪಾಲ್ಗೊಳ್ಳುತ್ತಿದ್ದಾರೆ.  

6) ಶೃತಿ ಹರಿಹರನ್ ಮಗಳಿಗೆ ನಾಮಕರಣ ಸಂಭ್ರಮ; ಮಗಳಿಗಿಟ್ರು ಪೌರಾಣಿಕ ಹೆಸರು!

ಕನ್ನಡ ಚಿತ್ರರಂಗದ ಸಿಂಪಲ್ ಆ್ಯಂಡ್ ಬ್ಯೂಟಿಫುಲ್ ಚೆಲುವೆ ಶೃತಿ ಹರಿಹರನ್ ತಮ್ಮ ನಿವಾಸದಲ್ಲಿ ಮಗಳಿಗೆ ನಾಮಕರಣ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಜುಲೈ ತಿಂಗಳಲ್ಲಿ ಮನೆಗೆ ವರಮಹಾ ಲಕ್ಷ್ಮಿಯನ್ನು ಬರ ಮಾಡಿಕೊಂಡ ಶೃತಿ ಕೆಲ ದಿನಗಳ ಹಿಂದೆ ಮಗಳಿಗೆ ನಾಮಕರಣ ಮಾಡಿದ್ದಾರೆ.

7) ಹೃತಿಕ್ ಗೆ ಮನಸೋತು ವೀರ್ಯದಾನ ಮಾಡಿ ಎಂದ ನಿರೂಪಕಿ!

ವಾರ್ ಸಿನಿಮಾ ಕಥೆಗಿಂತ ಹೆಚ್ಚಾಗಿ ಆ್ಯಕ್ಷನ್ ನಿಂದಲೇ ಪ್ರೇಕ್ಷಕರ ಮನ ಗೆದ್ದಿದೆ. ಪ್ರೇಕ್ಷಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬುರುತ್ತಿದೆ. ವಾರ್ ನೋಡಿದ ಖ್ಯಾತ ನಿರೂಪಕಿ ಭಾವನಾ ಬಾಲಕೃಷ್ಣ ಮಾಡಿದ ಟ್ವೀಟ್ ಭಾರೀ ಗಮನ ಸೆಳೆಯುತ್ತಿದೆ. 

8) Video: ನಾನು ಇಲ್ಲಿಂದ ಹೋಗಲ್ಲ ಬಿಟ್ಟುಬಿಡಿ..! ಚೈನ್ ಕಿತ್ತುಕೊಂಡು ಓಡಿದ ಲಕ್ಷ್ಮೀ ಆನೆ!

ನಾಡಹಬ್ಬ ಮೈಸೂರು ದಸರಾಗೆ ತೆರೆ ಬಿದ್ದಿದೆ. ವಿಶ್ವ ವಿಖ್ಯಾತ ಮೈಸೂರಿನ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜ ಪಡೆಯೂ ಕಾಡಿನತ್ತ ಮರಳಬೇಕಿದೆ. ಮೈಸೂರು ಅರಮನೆ ಆವರಣದಲ್ಲಿ ಒಂದು ದಿನ ರಿಲ್ಯಾಕ್ಸ್ ಮಾಡಿದ್ದ ಆನೆಗಳನ್ನು ಕರೆದೊಯ್ಯಲು ಲಾರಿಗಳೂ ಬಂದಿವೆ. ಆದರೆ ಲಕ್ಷ್ಮಿ ಆನೆಗೆ ಮಾತ್ರ ಮೈಸೂರು ಬಿಟ್ಟು ಹೋಗಲು ಮನಸ್ಸಿಲ್ಲ.

9) ಎರಡು ವರ್ಷಗಳ ಬಳಿಕ ಜಿಯೋ ಗ್ರಾಹಕರಿಗೆ ಶಾಕ್: ಇನ್ನು ಕರೆಗಳು ಫ್ರೀ ಅಲ್ಲ!

ಉಚಿತ ಕರೆಗಳ ಮೂಲಕ ಮೊಬೈಲ್‌ಫೋನ್‌ ವಲಯದಲ್ಲಿ ಸಂಚಲನ ಮೂಡಿಸಿದ ಮುಕೇಶ್‌ ಅಂಬಾನಿ ಅವರ ‘ರಿಲಯನ್ಸ್‌ ಜಿಯೋ’ ಕಂಪನಿ, ಇದೇ ಮೊದಲ ಬಾರಿಗೆ ಇತರೆ ಕಂಪನಿಗಳ ಮೊಬೈಲ್‌ಗೆ ಮಾಡುವ ಕರೆಗಳಿಗೆ ದರ ವಿಧಿಸಲು ನಿರ್ಧರಿಸಿದೆ. ಈ ಬದಲಾವಣೆ ಅ.10ರಿಂದಲೇ ಜಾರಿಗೆ ಬರುತ್ತಿದೆ.


10) 'ಸಿದ್ದರಾಮಯ್ಯ-ಯಡಿಯೂರಪ್ಪ ಪ್ರಾದೇಶಿಕ ಪಕ್ಷ ಕಟ್ಟಲಿ'!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸದ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಹುಟ್ಟು ಹಾಕಲಿ ಎಂದು ಕೂಡಲ ಸಂಗಮದ ಬಸವಪೀಠದ ಮಾದೇಶ್ವರ ಶ್ರೀಗಳು ಹೇಳಿದ್ದಾರೆ. 

click me!