ಒಬ್ಬ ಸೈನಿಕನ ಬದಲಾಗಿ 10 ದುಷ್ಮನ್ ಸೈನಿಕರ ತಲೆ ತರ್ತಿವಿ: ಅಮಿತ್ ಶಾ!

By Web DeskFirst Published Oct 10, 2019, 4:45 PM IST
Highlights

‘ಒಬ್ಬ ಸೈನಿಕನ ಬದಲಾಗಿ 10 ದುಷ್ಮನ್ ಸೈನಿಕರ ತಲೆ ತರ್ತಿವಿ’| ಮಹಾರಾಷ್ಟ್ರದಲ್ಲಿ ಗುಡುಗಿದ ಕೇಂದ್ರ ಗೃಹ ಸಚಿವ ಅಮಿತ್ ಶಾ | ಸಾಂಗ್ಲಿಯಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ| ಕಣಿವೆಗೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಸಮರ್ಥಿಸಿಕೊಂಡ ಶಾ| ಆರ್ಟಿಕಲ್ 370 ರದ್ದತಿ ವಿರೋಧಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ಗುಡುಗಿದ ಶಾ| ‘ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಅಭಿವೃದ್ಧಿ ಪರ್ವ’|

ಸಾಂಗ್ಲಿ(ಅ.10): ನಮ್ಮ ಒಂದು ಸೈನಿಕನ ಹತ್ಯೆಗೆ ಪತ್ರಿಯಾಗಿ ಶತ್ರುಗಳ 10 ಸೈನಿಕರನ್ನು ಹತ್ಯೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಶತ್ರು ವಿನಾಶಕ್ಕಾಗಿ ಭಾರತೀಯ ಸೇನೆಯನ್ನು ಬಲಿಷ್ಠವಾಗಿ ಸಂಘಟಿಸಲಾಗುತ್ತಿದೆ ಎಂದು ಹೇಳಿದರು.

Union Home Minister Amit Shah in Maharashtra:When Modi ji scrapped Article 370, Cong&NCP opposed its abrogation.When entire country wanted integration of Kashmir to India they opposed it.Rahul Gandhi said that 'Kashmir me khoon ki nadiya beh jayengi' but no bullet had to be fired pic.twitter.com/QByJmKjU3t

— ANI (@ANI)

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಕ್ರಮವನ್ನು ಸಮರ್ಥಿಸಿಕೊಂಡ ಅಮಿತ್ ಶಾ, ಈ ನಡೆ ವಿರೋಧಿಸುತ್ತಿರುವ ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಬಾಲಾಕೋಟ್ ವಾಯುದಾಳಿ ಪ್ರಸ್ತಾಪಿಸಿದ ಗೃಹ ಸಚಿವ, ನಮ್ಮ ಸೈನಿಕರ ಮೈ ಮುಟ್ಟುವ ಶತ್ರುವಿಗೆ ಸಾವು ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.

ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಇದನ್ನು ಸಹಿಸದ ವಿಪಕಗ್ಷಗಳು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ ಎಂದು ಶಾ ಆರೋಪಿಸಿದರು.

click me!